ಬೇಸಿಗೆ ರಜೆ. ಮಕ್ಕಳಿಗೆ ಏನು ಮಾಡುವುದು ಎನ್ನುವ ಚಿಂತೆಯಾದರೆ, ಪೋಷಕರಿಗೆಲ್ಲಾ ಮೊಬೈಲ್‌ನಿಂದ ಬಿಡಿಸುವುದು ಹೇಗೆ ಎನ್ನುವ ಚಿಂತೆ. ಈ ಎರಡೂ ಸಮಸ್ಯೆಗಳನ್ನು ದೂರ ಮಾಡುವುದು ಬೇಸಿಗೆ ಶಿಬಿರ. ಮಕ್ಕಳನ್ನು ರಜೆಯಲ್ಲಿ ಕ್ರಿಯಾಶೀಲರನ್ನಾಗಿಸುವ ಒಂದು ಪ್ರಯತ್ನ ಇದಾಗಿದೆ. ಸುಳ್ಯ ತಾಲೂಕಿನ ಪಂಜದಲ್ಲಿ ನಡೆದ ವಾರದ ಶಿಬಿರ ಇದು. ಮಕ್ಕಳ ಹಬ್ಬ.…ಮುಂದೆ ಓದಿ…..
ಸುಮಾರು 150 ಮಕ್ಕಳು ಪಂಜದಲ್ಲಿ ಕುಣಿದಾಡಿದರು, ಸಂಭ್ರಮಿಸಿದರು. ಚಿತ್ರ ಬಿಡಿಸಿದರು, ಬಣ್ಣ ಮೆತ್ತಿದರು, ಬಣ್ಣ ಹಾಕಿದರು, ಕುಣಿದರು, ಪ್ರಶ್ನಿಸಿದರು, ಮುಖವಾಡ ಮಾಡಿದರು, ಕಾಡಿನ ನಡುವೆ ಹೋದರು, ಬರಿದಾದ ಹೊಳೆಯನ್ನು ನೋಡಿದರು, ಪಕ್ಷಿಗಳ ಹಾಡನ್ನು ಕೇಳಿದರು… ಎಲ್ಲಾ ಮರೆತು ಮಕ್ಕಳು ಖುಷಿ ಪಟ್ಟರು. ಇದೇ ಮಕ್ಕಳ ಹಬ್ಬ. ವಾರಗಳ ಕಾಲ ನಡೆಯುತ್ತಿರುವ ಮಕ್ಕಳ ಹಬ್ಬ ಇದು.……ಮುಂದೆ ಓದಿ…..
ಸುಳ್ಯ ತಾಲೂಕಿನ ಪಂಜದಲ್ಲಿ ಅದ್ವೈತ ಮಕ್ಕಳ ಬೇಸಿಗೆ ಶಿಬಿರ ಆಯೋಜನೆಗೊಂಡಿದೆ.ಡ್ಯಾನ್ಸ್ ಎಂಡ್ ಬೀಟ್ಸ್ ಪಂಜ ಇವರ ನೇತೃತ್ವದಲ್ಲಿ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಶಿಬಿರ ಇದು. ಈ ಶಿಬಿರದಲ್ಲಿ ಜರ್ನಿ ಥೀಯೇಟರ್ ಮಂಗಳೂರು, ವಿದ್ದು ಉಚ್ಚಿಲ, ತಾರನಾಥ ಕೈರಂಗಳ, ಉಮೇಶ್ ಚನ್ನರಾಯಪಟ್ಟಣ, ಶಿವಗಿರಿ ಕಲ್ಲಡ್ಕ, ಮಧೂಸೂಧನ ಉಜಿರೆ, ಹರ್ಷಿತ್ ಮರ್ಕಂಜ, ಭುವನ್ ಕೈಕಂಬ, ರಾಜ್ ಮುಕೇಶ್ ಸುಳ್ಯ, ಸೋಮಶೇಖರ ನೇರಳ, ಶಿವರಾಮ ಕಲ್ಮಡ್ಕ, ಸತೀಶ್ ಕಳಂಜ, ಲಿಂಗಪ್ಪ ಬೆಳ್ಳಾರೆ, ಪದ್ಮನಾಬ ಕಲಾಸುಮ, ಶರತ್ ಮರ್ಗಿಲಡ್ಕ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಪಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸೇರಿದಂತೆ ಹಲವು ಸಂಸ್ಥೆಗಳು ಸಹಕರಿಸಿದ್ದವು.
ಜೀವನ್ ಬೆಳ್ಳಾರೆ ಅವರು ಈ ಶಿಬಿರ ಆಯೋಜನೆಯ ಪ್ರಮುಖರು. ಡ್ಯಾನ್ಸ್ ತರಬೇತಿ ಮಾಡುವ ಜೀವನ್ ಅವರು ಮಾರ್ಚ್ ನಂತರ ಮಕ್ಕಳ ಚಟುವಟಿಕೆ ಏನು..? ಎಂಬುದು ಪ್ರತೀ ಬಾರಿಯ ಯೋಚನೆ ಇರುತ್ತದೆ. ಮಕ್ಕಳು ಸದಾ ಚಟುವಟಿಕೆಯಲ್ಲಿ ಇರಬೇಕು. ಹೀಗಾಗಿ ಎಪ್ರಿಲ್ ಮೇಯಲ್ಲಿ ಮಕ್ಕಳಿಗಾಗಿ ಶಿಬಿರ ಮಾಡಬೇಕು ಎಂದು 2019 ರಲ್ಲಿ ಯೋಚನೆ ಬಂದಿತ್ತು. ಕಳೆದ ಎರಡು ವರ್ಷಗಳಿಂದ ಶಿಬಿರ ನಡೆಯುತ್ತಿದೆ. ಈ ವರ್ಷ 3 ಕಡೆ ಶಿಬಿರ ಆಯೋಜನೆ ಮಾಡಿದ್ದಾರೆ. ಮೂರು ಕಡೆ ಸೇರಿ ಒಟ್ಟು 300 ರಷ್ಟು ವಿದ್ಯಾರ್ಥಿಗಳು ಶಿಬಿರಕ್ಕೆ ಆಗಮಿಸಿದ್ದಾರೆ.…….ಮುಂದೆ ಓದಿ…..
ಶಿಬಿರದಲ್ಲಿ ವಿಶೇಷವಾಗಿ ರಂಗಕಲೆ, ರಂಗಗೀತೆ, ವಿವಿಧ ಬಗೆಯ ಕಲೆ, ಮಧುಬನಿ, ಕ್ರಾಫ್ಟ್, ಸೃಜನಶೀಲ ಕಲೆಗಳು, ಪರಿಸರ ವೀಕ್ಷಣೆ ಇತ್ಯಾದಿಗಳು ಇರುತ್ತದೆ, ಇದಕ್ಕಾಗಿ ಆಯಾ ಕ್ಷೇತ್ರದಲ್ಲಿ ತಜ್ಞರಾಗಿರುವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಲಾಗುತ್ತದೆ ಎನ್ನುತ್ತಾರೆ ಜೀವನ್.
ಶಿಬಿರದಲ್ಲಿ 5-16 ವರ್ಷದೊಳಗಿನ ಮಕ್ಕಳು ಇದ್ದಾರೆ. ಮಕ್ಕಳ ಆಸಕ್ತಿ ಉತ್ತಮವಾಗಿದೆ. ಮಕ್ಕಳೊಂದಿಗೆ ಮಕ್ಕಳಾಗಿಯೇ ಇದ್ದಾಗ ಮಕ್ಕಳೂ ಹೆಚ್ಚು ತೊಡಗಿಸಿಕೊಳ್ಳುತ್ತಾರೆ ಎನ್ನುವ ಜೀವನ್, ಮಕ್ಕಳ ಇಂತಹ ಶಿಬಿರಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳು ಒಂದು ವಾರ ಮೊಬೈಲ್ ಹಿಡಿಯದ ಹಾಗೆ ಆಯಿತಲ್ಲಾ ಎನ್ನುವುದಕ್ಕಿಂತಲೂ ಮಕ್ಕಳಲ್ಲಿ ಸೃಜನಶೀಲ ಚಿಂತನೆ ಶುರುವಾಯಿತು ಎನ್ನುವುದು ಬಹುಮುಖ್ಯವಾಗುತ್ತದೆ ಎನ್ನುತ್ತಾರೆ.…….ಮುಂದೆ ಓದಿ…..
ಈ ಬಾರಿ ಮೂರು ಶಿಬಿರದಲ್ಲಿ ಗಮನಿಸಿದ್ದೇನೆ, ಎಲ್ಲಾ ಮಕ್ಕಳೂ ಕುತೂಹಲದಿಂದ ಇದ್ದಾರೆ. ಮಕ್ಕಳಲ್ಲಿ ಆಸಕ್ತಿ ಇದೆ. ಎಲ್ಲಾ ಮಕ್ಕಳಿಗೂ ಮೊಬೈಲ್‌ನಲ್ಲಿ ಆಸಕ್ತಿ ಇದೆ ನಿಜ. ಆದರೆ ಅದರಿಂದ ದೂರ ಮಾಡುವುದು, ಮೊಬೈಲ್ ದೂರುವುದರ ಬದಲಾಗಿ ಮಕ್ಕಳ ಆಸಕ್ತಿಯನ್ನು ಬೆಳೆಸಬೇಕು, ಬೆಳೆಸುವ ಹಾಗೆ ಪೋಷಕರು ಮಾಡಬೇಕಿದೆ.ಅಂತಹ ಗುರುತಿಸುವಿಕೆ ಹಾಗೂ ಆಸಕ್ತಿಯನ್ನು ಈ ಶಿಬಿರದಲ್ಲಿ ಮಾಡಲಾಗುತ್ತಿದೆ ಅಷ್ಟೇ…. ಎನ್ನುತ್ತಾರೆ ಜೀವನ್ ಬೆಳ್ಳಾರೆ.