ಅಂಗಳದಲ್ಲಿನ ತೆಂಗಿನ ಮರದ ಗರಿಗಳಲ್ಲಿ ಎರಡು ಹಕ್ಕಿಗಳು ಜಗಳ ಮಾಡುತ್ತಿದ್ದುವು. ಅವುಗಳಲ್ಲಿ ಒಂದು ಕಾಗೆ ಇನ್ನೊಂದು ಹಕ್ಕಿಯ ಹೆಸರು ಗೊತ್ತಿರಲಿಲ್ಲ. ಅದೇನೆಂದು ಹುಡುಕಿದಾಗ ಮಟಪಕ್ಷಿಯೆಂದರೆ ಇದೇ ಹಕ್ಕಿ ಎಂದು ತಿಳಿಯಿತು.
ಕನ್ನಡದಲ್ಲಿ ಮರಕೋಗಿಲೆ, ಮಟ ಪಕ್ಷಿ, ಕದುಗನ ಪಕ್ಷಿ, ತುಳುವಿನಲ್ಲಿ ಕುಟ್ಟ್ಲುಂಕು, ಕೆತ್ತಿಕಳುವೆ, ಕೊಡವ ಭಾಷೆಯಲ್ಲಿ ನೂಕರಬಾಲ ಎಂಬ ಹೆಸರುಗಳಿವೆ. ಈ ಹಕ್ಕಿಗೆ ಉದ್ದವಾದ ಕಪ್ಪು ಬಿಳುಪಿನ ಆಕರ್ಷಕವಾದ ಬಾಲ(30 ಸೆ ಮೀ) ವಿದೆ. ಒಟ್ಟು 50 ಸೆ ಮೀ ಉದ್ದವಿದೆ. ಮೈಬಣ್ಣ ಕಂದು, ಬಿಳುಪು ಕಪ್ಪು ಬಣ್ಣಗಳ ಚೆಲುವಿನ ಚಿತ್ತಾರದ ಪ್ರತೀಕವೇ ಮರ ಕೋಗಿಲೆ.
ಈ ಹಕ್ಕಿ ನೋಡಲು ಮಾತ್ರ ಸುಂದರವಾಗಿಲ್ಲ, ರೈತನ ಮಿತ್ರನೂ ಹೌದು. ತೆಂಗಿನ ಮರವನ್ನು ಕೊರೆಯುವ ಕೆಂಪು ಹುಳುಗಳನ್ನು(Red palm weevil) ಹುಡುಕಿ ಹುಡುಕಿ ತಿನ್ನುತ್ತವೆ. ಅಲ್ಲದೆ ಇತರ ಮರಕೊರೆಯುವ ಹುಳು ಹುಪ್ಪಟೆಗಳನ್ನು ಭಕ್ಷಿಸಿ ರೈತನ ಬೆಳೆಗಳ ರಕ್ಷಣೆಯನ್ನು ಮಾಡುತ್ತವೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement