ಚಿಲಿಪಿಲಿ | ನೀಲಿ ನೊಣ ಹಿಡುಕ |

September 27, 2022
9:00 AM

ನೀಲಿ ನೊಣ ಹಿಡುಕ (Tickle blue fly catcher.Cyornis tickelliae Blyth.)  ಎರಡು ಹಕ್ಕಿಗಳು ವಿರುದ್ಧ ದಿಕ್ಕುಗಳಿಂದ ಅರಚುತ್ತಿದ್ದರೆ ಆಹಾರ ಹುಡುಕಿ ಕೊಂಡು ಬಂದ ಹಕ್ಕಿಗಳು ಪೂರ ಸಂಶಯದಿಂದ ಅತ್ತಿತ್ತ ನೋಡಲಾರಂಭಿಸಿದವು. ಹಕ್ಕಿಗಳ ಭಾಷೆ ತಿಳಿದವರಿಗೆ ಅರ್ಥವಾದೀತು ಮರಿಗಳ ರಕ್ಷಣೆಗೆ ಪಣತೊಟ್ಟ ಹಕ್ಕಿಗಳ ಉಪಾಯವೆಂದು..ಇದರ ಸಿಳ್ಳಿನಿಂದಲೇ ಹಕ್ಕಿಯ ಇರುವಿಕೆ ಗೊತ್ತಾಗುತ್ತದೆ.

ನೀಲಿ ನೊಣ ಹಿಡುಕ , ನೋಡಲು ಗುಬ್ಬಚ್ಚಿ ಗಾತ್ರದ ಹಕ್ಕಿಯಾಗಿದೆ( 14 cm) ಮೈ ಕಪ್ಪು ಮಿಶ್ರಿತ ನೀಲಿ ಬಣ್ಣ, ಹಣೆಯ ಮೇಲೆ ತೆಳು ನೀಲಿ ಪಟ್ಟೆಯಿದೆ. ಕುತ್ತಿಗೆ ಮತ್ತು ಎದೆ ಕಿತ್ತಳೆ ಬಣ್ಣ, ಹೊಟ್ಟೆಯ ಭಾಗ ಬಿಳಿ ಬಣ್ಣವಿದ್ದು, ಬಾಲದ ಕೆಳ ಭಾಗ ಕಿತ್ತಳೆ ಬಣ್ಣವಿರುತ್ತದೆ. ಪರ್ವತ ಹಾಗೂ ಬೆಟ್ಟಗುಡ್ಡಗಳ ತಪ್ಪಲುಗಳಲ್ಲಿ ಕಾಣಸಿಗುತ್ತದೆ. ನೀರಿನ ಆಶ್ರಯ ಇರುವ ಪ್ರದೇಶಗಳನ್ನು ಹೆಚ್ಚಾಗಿ ಇಷ್ಟ ಪಡುತ್ತವೆ. ಕೀಟಗಳೇ ಪ್ರಧಾನ ಆಹಾರವಾಗಿದೆ.

ಮಾರ್ಚ್ ನಿಂದ ಆಗಸ್ಟ್ ವರೆಗೆ ಗೂಡು ಕಟ್ಟುವ ಈ ಹಕ್ಕಿಗಳು ಒಮ್ಮೆಗೆ 3 ರಿಂದ 5 ಮೊಟ್ಟೆಗಳನ್ನಿಡುತ್ತದೆ. ಇವುಗಳು ಮಕ್ಕಳ ಕುರಿತು ತುಂಬಾ ಕಾಳಜಿ ವಹಿಸುತ್ತದೆ.‌ ಅವುಗಳಿಗೆ ಆಹಾರವನ್ನು ಬಹಳ ಜಾಗ್ರತೆಯಿಂದ ತಿನ್ನಿಸುತ್ತವೆ. ಈ ಹಕ್ಕಿ ನೋಡಲಷ್ಟೇ ಗಮನ ಸೆಳೆಯುವುದಲ್ಲ , ತನ್ನ ಇಂಪಾದ ದನಿಯಲ್ಲಿ ಸಿಳ್ಳಿನ ರಾಗಾಲಾಪನೆ ಮಾಡುತ್ತಾ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತವೆ. ಭಾರತ, ಬಾಂಗ್ಲಾದೇಶ,ಶ್ರೀ ಲಂಕಾ, ಬರ್ಮಾ ದೇಶಗಳಲ್ಲಿ ಈ ಹಕ್ಕಿಗಳು ಕಂಡು ಬರುತ್ತವೆ.

ಬರಹ:
ಅಶ್ವಿನಿಮೂರ್ತಿ ಅಯ್ಯನಕಟ್ಟೆ
ಛಾಯಾಚಿತ್ರ :ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ..

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಗೃಹ ಬಳಕೆ ಗ್ಯಾಸ್ ಕೊರತೆ ಇಲ್ಲ : ವದಂತಿಗಳಿಗೆ ಕಿವಿಗೊಡಬೇಡಿ — ಸಮಸ್ಯೆ ಇದ್ದರೆ ಈ ಸಹಾಯವಾಣಿ ಸಂಪರ್ಕಿಸಿ
March 13, 2026
8:08 PM
by: ಮಿರರ್‌ ಡೆಸ್ಕ್
ಅಡಿಕೆ ಇಳುವರಿ ಕುಸಿತ | ಮಿಶ್ರ ತೋಟಗಳಲ್ಲಿ ಹೆಚ್ಚು ಸಮಸ್ಯೆ…! ಯಾವ ತಳಿ ಆಯ್ಕೆ ಮಾಡಿದ್ದಾರೆ…? | ಅಡಿಕೆ ಇಳುವರಿ ಕುಸಿತದ ವಿಶ್ಲೇಷಣೆ
March 13, 2026
10:48 AM
by: ದ ರೂರಲ್ ಮಿರರ್.ಕಾಂ
ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು
March 13, 2026
6:58 AM
by: ಮಿರರ್‌ ಡೆಸ್ಕ್
ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ | ದೆಹಲಿಯಲ್ಲಿ GCWAS-2026 ಆರಂಭ
March 13, 2026
6:48 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror