ಅನುಕ್ರಮ

ಚಿಲಿಪಿಲಿ | ನೀಲಿ ನೊಣ ಹಿಡುಕ |

Share

ನೀಲಿ ನೊಣ ಹಿಡುಕ (Tickle blue fly catcher.Cyornis tickelliae Blyth.)  ಎರಡು ಹಕ್ಕಿಗಳು ವಿರುದ್ಧ ದಿಕ್ಕುಗಳಿಂದ ಅರಚುತ್ತಿದ್ದರೆ ಆಹಾರ ಹುಡುಕಿ ಕೊಂಡು ಬಂದ ಹಕ್ಕಿಗಳು ಪೂರ ಸಂಶಯದಿಂದ ಅತ್ತಿತ್ತ ನೋಡಲಾರಂಭಿಸಿದವು. ಹಕ್ಕಿಗಳ ಭಾಷೆ ತಿಳಿದವರಿಗೆ ಅರ್ಥವಾದೀತು ಮರಿಗಳ ರಕ್ಷಣೆಗೆ ಪಣತೊಟ್ಟ ಹಕ್ಕಿಗಳ ಉಪಾಯವೆಂದು..ಇದರ ಸಿಳ್ಳಿನಿಂದಲೇ ಹಕ್ಕಿಯ ಇರುವಿಕೆ ಗೊತ್ತಾಗುತ್ತದೆ.

Advertisement
ನೀಲಿ ನೊಣ ಹಿಡುಕ , ನೋಡಲು ಗುಬ್ಬಚ್ಚಿ ಗಾತ್ರದ ಹಕ್ಕಿಯಾಗಿದೆ( 14 cm) ಮೈ ಕಪ್ಪು ಮಿಶ್ರಿತ ನೀಲಿ ಬಣ್ಣ, ಹಣೆಯ ಮೇಲೆ ತೆಳು ನೀಲಿ ಪಟ್ಟೆಯಿದೆ. ಕುತ್ತಿಗೆ ಮತ್ತು ಎದೆ ಕಿತ್ತಳೆ ಬಣ್ಣ, ಹೊಟ್ಟೆಯ ಭಾಗ ಬಿಳಿ ಬಣ್ಣವಿದ್ದು, ಬಾಲದ ಕೆಳ ಭಾಗ ಕಿತ್ತಳೆ ಬಣ್ಣವಿರುತ್ತದೆ. ಪರ್ವತ ಹಾಗೂ ಬೆಟ್ಟಗುಡ್ಡಗಳ ತಪ್ಪಲುಗಳಲ್ಲಿ ಕಾಣಸಿಗುತ್ತದೆ. ನೀರಿನ ಆಶ್ರಯ ಇರುವ ಪ್ರದೇಶಗಳನ್ನು ಹೆಚ್ಚಾಗಿ ಇಷ್ಟ ಪಡುತ್ತವೆ. ಕೀಟಗಳೇ ಪ್ರಧಾನ ಆಹಾರವಾಗಿದೆ.
ಮಾರ್ಚ್ ನಿಂದ ಆಗಸ್ಟ್ ವರೆಗೆ ಗೂಡು ಕಟ್ಟುವ ಈ ಹಕ್ಕಿಗಳು ಒಮ್ಮೆಗೆ 3 ರಿಂದ 5 ಮೊಟ್ಟೆಗಳನ್ನಿಡುತ್ತದೆ. ಇವುಗಳು ಮಕ್ಕಳ ಕುರಿತು ತುಂಬಾ ಕಾಳಜಿ ವಹಿಸುತ್ತದೆ.‌ ಅವುಗಳಿಗೆ ಆಹಾರವನ್ನು ಬಹಳ ಜಾಗ್ರತೆಯಿಂದ ತಿನ್ನಿಸುತ್ತವೆ. ಈ ಹಕ್ಕಿ ನೋಡಲಷ್ಟೇ ಗಮನ ಸೆಳೆಯುವುದಲ್ಲ , ತನ್ನ ಇಂಪಾದ ದನಿಯಲ್ಲಿ ಸಿಳ್ಳಿನ ರಾಗಾಲಾಪನೆ ಮಾಡುತ್ತಾ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತವೆ. ಭಾರತ, ಬಾಂಗ್ಲಾದೇಶ,ಶ್ರೀ ಲಂಕಾ, ಬರ್ಮಾ ದೇಶಗಳಲ್ಲಿ ಈ ಹಕ್ಕಿಗಳು ಕಂಡು ಬರುತ್ತವೆ.
ಬರಹ:
ಅಶ್ವಿನಿಮೂರ್ತಿ ಅಯ್ಯನಕಟ್ಟೆ
ಛಾಯಾಚಿತ್ರ :ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ..
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಯಾವುದೇ ಕಾರಣಕ್ಕೂ ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸಬಾರದು | ಅಧಿಕಾರಿಗಳಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಸೂಚನೆ

ಯಾವುದೇ ಕಾರಣಕ್ಕೂ ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೇಂದ್ರ…

2 hours ago

ದ್ವಿತೀಯ ಪಿಯುಸಿ ಪರೀಕ್ಷೆ-2 ರ ವೇಳಾಪಟ್ಟಿ ಪ್ರಕಟ

ದ್ವೀತಿಯ ಪಿಯುಸಿ ಪರೀಕ್ಷೆ 2 ರ ವೇಳಾಪಟ್ಟಿ ಪ್ರಕಟಗೊಂಡಿದೆ. ಇದೇ 24 ರಿಂದ…

2 hours ago

ಕರಾವಳಿ ಜಿಲ್ಲೆಗಳಲ್ಲಿ ಗುಡುಗು, ಗಾಳಿ ಸಹಿತ ಮಳೆ | ಮುಂದಿನ 5 ದಿನಗಳಲ್ಲಿ ತಾಪಮಾನದಲ್ಲಿ ಏರಿಕೆ ಸಂಭವ

ಕರ್ನಾಟಕದ ಒಳನಾಡಿನಲ್ಲಿ ಮುಂದಿನ 5 ದಿನಗಳಲ್ಲಿ ಗರಿಷ್ಠ ತಾಪಮಾನದಲ್ಲಿ 2 ರಿಂದ 3…

2 hours ago

ಕ್ಲೌಡ್‌ ಐರಿಸೇಶನ್‌ | ಅಪರೂಪದ ವಿದ್ಯಮಾನ ಮೋಡದ ವರ್ಣವೈವಿಧ್ಯ |

ಸುಳ್ಯ ಪ್ರದೇಶದ ಕೆಲವು ಕಡೆ ಮಂಗಳವಾರ ಸಂಜೆ ಮೋಡದ ಅಪರೂಪದ ವಿದ್ಯಮಾನ ಆಗಸ…

5 hours ago

ಹವಾಮಾನ ವರದಿ | 08-04-2025 | ಕೆಲವು ಕಡೆ ಅನಿರೀಕ್ಷಿತ ಮಳೆ ಸಾಧ್ಯತೆ |

ಈಗಿನಂತೆ ವಾತಾವರಣದಲ್ಲಿ ಅಧಿಕ ತೇವಾಂಶ ಹಾಗೂ ವಿಪರೀತ ಸೆಕೆಯ ಕಾರಣ ಕರಾವಳಿಯ ಕೆಲವು…

9 hours ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ.ಉಡುಪಿ ಜಿಲ್ಲೆ 93.90% ರಷ್ಟು ಅತಿ ಹೆಚ್ಚು ಉತ್ತೀರ್ಣರಾಗಿದ್ದರೆ,…

9 hours ago