ನೀಲಿ ನೊಣ ಹಿಡುಕ (Tickle blue fly catcher.Cyornis tickelliae Blyth.) ಎರಡು ಹಕ್ಕಿಗಳು ವಿರುದ್ಧ ದಿಕ್ಕುಗಳಿಂದ ಅರಚುತ್ತಿದ್ದರೆ ಆಹಾರ ಹುಡುಕಿ ಕೊಂಡು ಬಂದ ಹಕ್ಕಿಗಳು ಪೂರ ಸಂಶಯದಿಂದ ಅತ್ತಿತ್ತ ನೋಡಲಾರಂಭಿಸಿದವು. ಹಕ್ಕಿಗಳ ಭಾಷೆ ತಿಳಿದವರಿಗೆ ಅರ್ಥವಾದೀತು ಮರಿಗಳ ರಕ್ಷಣೆಗೆ ಪಣತೊಟ್ಟ ಹಕ್ಕಿಗಳ ಉಪಾಯವೆಂದು..ಇದರ ಸಿಳ್ಳಿನಿಂದಲೇ ಹಕ್ಕಿಯ ಇರುವಿಕೆ ಗೊತ್ತಾಗುತ್ತದೆ.
ನೀಲಿ ನೊಣ ಹಿಡುಕ , ನೋಡಲು ಗುಬ್ಬಚ್ಚಿ ಗಾತ್ರದ ಹಕ್ಕಿಯಾಗಿದೆ( 14 cm) ಮೈ ಕಪ್ಪು ಮಿಶ್ರಿತ ನೀಲಿ ಬಣ್ಣ, ಹಣೆಯ ಮೇಲೆ ತೆಳು ನೀಲಿ ಪಟ್ಟೆಯಿದೆ. ಕುತ್ತಿಗೆ ಮತ್ತು ಎದೆ ಕಿತ್ತಳೆ ಬಣ್ಣ, ಹೊಟ್ಟೆಯ ಭಾಗ ಬಿಳಿ ಬಣ್ಣವಿದ್ದು, ಬಾಲದ ಕೆಳ ಭಾಗ ಕಿತ್ತಳೆ ಬಣ್ಣವಿರುತ್ತದೆ. ಪರ್ವತ ಹಾಗೂ ಬೆಟ್ಟಗುಡ್ಡಗಳ ತಪ್ಪಲುಗಳಲ್ಲಿ ಕಾಣಸಿಗುತ್ತದೆ. ನೀರಿನ ಆಶ್ರಯ ಇರುವ ಪ್ರದೇಶಗಳನ್ನು ಹೆಚ್ಚಾಗಿ ಇಷ್ಟ ಪಡುತ್ತವೆ. ಕೀಟಗಳೇ ಪ್ರಧಾನ ಆಹಾರವಾಗಿದೆ. ಮಾರ್ಚ್ ನಿಂದ ಆಗಸ್ಟ್ ವರೆಗೆ ಗೂಡು ಕಟ್ಟುವ ಈ ಹಕ್ಕಿಗಳು ಒಮ್ಮೆಗೆ 3 ರಿಂದ 5 ಮೊಟ್ಟೆಗಳನ್ನಿಡುತ್ತದೆ. ಇವುಗಳು ಮಕ್ಕಳ ಕುರಿತು ತುಂಬಾ ಕಾಳಜಿ ವಹಿಸುತ್ತದೆ. ಅವುಗಳಿಗೆ ಆಹಾರವನ್ನು ಬಹಳ ಜಾಗ್ರತೆಯಿಂದ ತಿನ್ನಿಸುತ್ತವೆ. ಈ ಹಕ್ಕಿ ನೋಡಲಷ್ಟೇ ಗಮನ ಸೆಳೆಯುವುದಲ್ಲ , ತನ್ನ ಇಂಪಾದ ದನಿಯಲ್ಲಿ ಸಿಳ್ಳಿನ ರಾಗಾಲಾಪನೆ ಮಾಡುತ್ತಾ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತವೆ. ಭಾರತ, ಬಾಂಗ್ಲಾದೇಶ,ಶ್ರೀ ಲಂಕಾ, ಬರ್ಮಾ ದೇಶಗಳಲ್ಲಿ ಈ ಹಕ್ಕಿಗಳು ಕಂಡು ಬರುತ್ತವೆ.ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…
ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…
ಪಡಿತರ ಚೀಟಿಗೆ ಆಧಾರ್ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…
ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…
ಎಥೆನಾಲ್ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…
ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…