ಚಿಲಿಪಿಲಿ | ಹೊನ್ನ ಹಣೆಯ ಎಲೆಹಕ್ಕಿ

October 8, 2021
7:42 PM

ಹೊನ್ನ ಹಣೆಯ ಎಲೆಹಕ್ಕಿ(golden fronted leaf bird ) ( Gold Fronted Chloropsis)
ಈ ಎಲೆಹಕ್ಕಿಯ ಗಾತ್ರ( 19 cm) ಬುಲ್ ಬುಲ್ ಹಕ್ಕಿಯಷ್ಟಿರುತ್ತದೆ. ‌ಸಂಸ್ಕೃತದಲ್ಲಿ ಪಕ್ಷಗುಪ್ತ ,ಪತ್ರಗುಪ್ತ, ಎಂದೂ, ಹಸಿರು ಪಿಕಳಾರ ಎಂದು ಸ್ಥಳೀಯವಾಗಿ ಕರೆಯುತ್ತಾರೆ.

ತಲೆ, ಬೆನ್ನು , ಬಾಲ, ರೆಕ್ಕೆಗಳೆಲ್ಲವೂ ಎಲೆ ಹಸಿರು ಹಸಿರು ಇರುವುದರಿಂದ ಹಸಿರು ಹಕ್ಕಿ ಎಂಬುದು ರೂಡಿಯಲ್ಲಿರುವ ಹೆಸರು.‌
ಕೊಕ್ಕು, ಕುತ್ತಿಗೆ , ಕೆನ್ನೆ ಕಪ್ಪು ಬಣ್ಣದಲ್ಲಿದ್ದು, ಹಣೆಯ ಮದ್ಯದಲ್ಲಿ ಹೊಂಬಣ್ಣವಿದೆ . ಆದುದರಿಂದ ಹೊನ್ನ ಹಣೆಯ ಹಕ್ಕಿ ಎಂಬ ಹೆಸರಿದೆ. ರೆಕ್ಕೆಯ ಬುಡ, ಕೊಕ್ಕಿನ ಬುಡ ನೀಲಿಮಚ್ಚೆ ಇದ್ದು ನೋಡಲು ಆಕರ್ಷಕವಾಗಿ ಕಾಣುತ್ತದೆ.
ಜೋಡಿಯಾಗಿ ಇರುತ್ತವೆ, ಗುಂಪಿನಲ್ಲಿಯೂ ಇರುತ್ತವೆ. ಹೂ ಹಣ್ಣಿನ ಮರಗಳು ನೆಚ್ಚಿನ ತಾಣ. ಕಾಡುಗಳಲ್ಲಿ, ಉದ್ಯಾನವನ ಪ್ರದೇಶಗಳನ್ನು ಹೆಚ್ಚಾಗಿ ಇಷ್ಟ ಪಡುತ್ತವೆ.ಹೂವಿನ ಮಕರಂದ, ಹಣ್ಣುಗಳು, ಕೀಟಗಳು ಇವುಗಳ ಆಹಾರ.

ಭಾರತ, ಬಾಂಗ್ಲಾ, ದೇಶ, ಮಾಯನ್ಮಾರ್, ಶ್ರೀ ಲಂಕಾ ಮೊದಲಾದೆಡೆಗಳಲ್ಲಿ ಕಂಡು ಬರುತ್ತದೆ. ವಲಸೆ ಹಕ್ಕಿಯಾಗಿದೆ.
ತನ್ನ ಆಕರ್ಷಕ ಬಣ್ಣ, ಮಧುರ ಧ್ವನಿಯಿಂದಾಗಿ ಮನುಷ್ಯನ ಇಷ್ಟದ ಹಕ್ಕಿಯಾಗಿದೆ. ಈ ಹಕ್ಕಿಯ ವಿಭಿನ್ನ , ವಿಶಿಷ್ಟ ಚರ್ಯೆಯಿಂದಾಗಿ ಜನರು ಪಂಜರದಲ್ಲಿಟ್ಟು ಸಾಕುತ್ತಾರೆ. ಇದು ಬಹು ಬೇಡಿಕೆಯಲ್ಲಿರುವ ಹಕ್ಕಿಯಾಗಿದೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ: ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಹೊಸರುಚಿ | ಎಳೆಯ ಹಲಸಿನ ಕಾಯಿ ಬಜ್ಜಿ – ಮನೆಯಲ್ಲೇ ಸವಿಯುವ ಕ್ರಿಸ್ಪಿ ಸ್ನ್ಯಾಕ್
March 28, 2026
9:12 AM
by: ದ ರೂರಲ್ ಮಿರರ್.ಕಾಂ
ಸಂಸ್ಥೆಯ ನಿಜವಾದ ಶಕ್ತಿ : ಮಾನವ ಸಂಪನ್ಮೂಲವೇ ಯಶಸ್ಸಿನ ಮೂಲಾಧಾರ
March 27, 2026
2:05 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್
March 21, 2026
5:00 PM
by: ದಿವ್ಯ ಮಹೇಶ್
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?
March 20, 2026
8:07 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror