ಸಾಮಾನ್ಯ ಜೇನುನೊಣ ಬಾಕವೆಂದೇ ಈ ಫೋಟೋಗಳನ್ನು ಕ್ಲಿಕ್ಕಿಸಿದ್ದು. ಆಮೇಲೆ ಕಂಪ್ಯೂಟರ್ ನಲ್ಲಿ ದೊಡ್ಡದು ಮಾಡಿ ನೋಡಿದಾಗಲೇ ತಿಳಿದದ್ದು ಇದು ನಾವು ನಿತ್ಯ ನೋಡುವ ಜೇನುನೊಣಬಾಕ ಅಲ್ಲ, ಇವುಗಳು ಯುರೋಪಿಯನ್ ಜೇನುನೊಣಬಾಕಗಳೆಂದು…!
ಇವುಗಳು ವಲಸೆ ಹಕ್ಕಿಗಳು. ಚಳಿಗಾಲದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಚಳಿ ಕಡಿಮೆ ಇರುವ ಪ್ರದೇಶಕ್ಕೆ ವಲಸೆ ಬರುತ್ತವೆ.
ಯುರೋಪಿಯನ್ ರೋಲರ್ ವಲಸೆ ಹಕ್ಕಿಯಾಗಿದೆ . ಪಾರಿವಾಳ ಗಾತ್ರದ (31cm) ಹಕ್ಕಿಯಾಗಿದೆ. ಹಸಿರು, ನೀಲಿ, ಚಿನ್ನದ ಬಣ್ಣಗಳಿಂದ ಕೂಡಿದೆ. ಕಾಮನಬಿಲ್ಲಿನಂತಹ ಹಕ್ಕಿ.ಉದ್ದ ಕೊಕ್ಕು ಹಕ್ಕಿಯಾಗಿದೆ.
ನೀಳವಾದ ಗರಿಗಳು ಈ ಹಕ್ಕಿಯ ವಿಶೇಷತೆ.ಎತ್ತರದ ಪ್ರದೇಶಗಳಲ್ಲಿ , ಮರದ ಗೆಲ್ಲುಗಳಲ್ಲಿ, ವಿದ್ಯುತ್ ತಂತಿಗಳ ಮೇಲೆ ಬೇಟೆಗಾಗಿ ಕಾಯುತ್ತವೆ. ಬೇಟೆಯನ್ನು ನಿಖರವಾಗಿ ಗುರುತಿಸಿ ಹಿಡಿಯುತ್ತವೆ. ಗುರಿ ತಪ್ಪುವ ಮಾತೇ ಇಲ್ಲ. ಆಕಾಶದಲ್ಲಿ ಹಾರುವಾಗ ಜೇನ್ನೋಣಗಳನ್ನು , ಮಿಡತೆ, ಜೀರುಂಡೆಗಳು ಹಿಡಿದು ತಿನ್ನುತ್ತವೆ. ನಿಖರವಾದ ಬೇಟೆಯನ್ನು ಕುಳಿತ ಜಾಗದಿಂದಲೇ ಗುರುತಿಸಿ ಹಿಡಿಯುತ್ತವೆ ಮತ್ತು ಪುನಃ ಅದೇ ಸುರಕ್ಷಿತ ಜಾಗದಲ್ಲಿ ಬಂದು ಬೇಟೆಯನ್ನು ತಿನ್ನುತ್ತವೆ. ಈ ಹಕ್ಕಿಗಳು ಗುಂಪಾಗಿರುತ್ತವೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ : ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ