ಚಿಲಿಪಿಲಿ | ಮಟ ಪಕ್ಷಿ ನೋಡಿದ್ದೀರಾ ?

April 30, 2021
2:48 PM
ಅಂಗಳದಲ್ಲಿನ ತೆಂಗಿನ ಮರದ ಗರಿಗಳಲ್ಲಿ ಎರಡು ಹಕ್ಕಿಗಳು ಜಗಳ ಮಾಡುತ್ತಿದ್ದುವು. ಅವುಗಳಲ್ಲಿ  ಒಂದು ಕಾಗೆ ಇನ್ನೊಂದು  ಹಕ್ಕಿಯ ಹೆಸರು ಗೊತ್ತಿರಲಿಲ್ಲ. ಅದೇನೆಂದು  ಹುಡುಕಿದಾಗ ಮಟಪಕ್ಷಿಯೆಂದರೆ ಇದೇ ಹಕ್ಕಿ ಎಂದು ತಿಳಿಯಿತು.
ಕನ್ನಡದಲ್ಲಿ ಮರಕೋಗಿಲೆ, ಮಟ ಪಕ್ಷಿ, ಕದುಗನ ಪಕ್ಷಿ,  ತುಳುವಿನಲ್ಲಿ ಕುಟ್ಟ್ಲುಂಕು, ಕೆತ್ತಿಕಳುವೆ, ಕೊಡವ ಭಾಷೆಯಲ್ಲಿ  ನೂಕರಬಾಲ ಎಂಬ ಹೆಸರುಗಳಿವೆ. ಈ ಹಕ್ಕಿಗೆ ಉದ್ದವಾದ ಕಪ್ಪು ಬಿಳುಪಿನ ಆಕರ್ಷಕವಾದ   ಬಾಲ(30 ಸೆ ಮೀ) ವಿದೆ. ಒಟ್ಟು 50 ಸೆ ಮೀ ಉದ್ದವಿದೆ.  ಮೈಬಣ್ಣ  ಕಂದು, ಬಿಳುಪು ಕಪ್ಪು ಬಣ್ಣಗಳ ಚೆಲುವಿನ ಚಿತ್ತಾರದ  ಪ್ರತೀಕವೇ  ಮರ ಕೋಗಿಲೆ.
ಈ ಹಕ್ಕಿ ನೋಡಲು ಮಾತ್ರ ಸುಂದರವಾಗಿಲ್ಲ, ರೈತನ ಮಿತ್ರನೂ ಹೌದು.  ತೆಂಗಿನ ಮರವನ್ನು ಕೊರೆಯುವ ಕೆಂಪು ಹುಳುಗಳನ್ನು(Red palm weevil) ಹುಡುಕಿ ಹುಡುಕಿ  ತಿನ್ನುತ್ತವೆ. ಅಲ್ಲದೆ ಇತರ ಮರಕೊರೆಯುವ ಹುಳು ಹುಪ್ಪಟೆಗಳನ್ನು ಭಕ್ಷಿಸಿ ರೈತನ ಬೆಳೆಗಳ ರಕ್ಷಣೆಯನ್ನು ಮಾಡುತ್ತವೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?
September 13, 2026
12:16 PM
by: ಸಾಯಿಶೇಖರ್ ಕರಿಕಳ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror