ಚಿಲಿಪಿಲಿ | ಕೆಮ್ಮಂಡೆ ಜೇನ್ನೊಣ ಬಾಕ

December 2, 2020
9:30 AM

ಇವುಗಳು ಕೆಮ್ಮಂಡೆಜೇನ್ನೊಣ ಬಾಕಗಳು.  ಕೆಂದಲೆ ಕಳ್ಳಿಪೀರ ಮೈ ಬಣ್ಣ ಹಸಿರು, ನೆತ್ತಿಯ ಮೇಲೆ ಕಂದು ಬಣ್ಣ, ಮೊನಚಾದ ಕೊಕ್ಕುಗಳು ಇದರ ವಿಶೇಷತೆ.

Advertisement
Advertisement

ತೀಕ್ಷವಾದ ಕಣ್ಣುಗಳಿರುವ ಇವುಗಳು ಬೇಟೆಯನ್ನು ಸುಮಾರು 60 ಮೀಟರ್ ದೂರದಿಂದಲೇ ಗುರುತಿಸುವ ಸಾಮರ್ಥ್ಯ ಹೊಂದಿವೆ. ಆಕಾಶದಲ್ಲಿ ಹಾರುತ್ತಲೇ ಬೇಟೆಯನ್ನು ಹಿಡಿದು ಬಿಡುತ್ತವೆ.  ಗಾತ್ರದಲ್ಲಿ ಪುಟ್ಟಹಕ್ಕಿಯಾಗಿದೆ(21cm)

 

Advertisement

 

ಸಾಮಾನ್ಯವಾಗಿ ಇವುಗಳು ಐದರಿಂದ ಹತ್ತರವರೆಗೆ ಗುಂಪಾಗಿ ಇರುತ್ತವೆ. ಎತ್ತರದ ಅಪಾಯಮುಕ್ತ ಪ್ರದೇಶಗಳಲ್ಲಿ ಗೂಡು ಕಟ್ಟುತ್ತವೆ.  ವಿದ್ಯುತ್ ತಂತಿಗಳ ಮೇಲೆ,  ಎತ್ತರದ ಮರದ ಗೆಲ್ಲುಗಳ ಮೇಲೆ ಕುಳಿತು ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲೋಕಿಸಿ ತಮ್ಮ ಬೇಟೆಯನ್ನು ಹಿಡಿಯುತ್ತವೆ. ಇವುಗಳು ಗಂಟೆಗೆ ನೂರರ ಮೇಲೆ ನೊಣ ಅಥವಾ ಕೀಟಗಳನ್ನು ಭಕ್ಷಿಸುತ್ತವೆ. ಆಹಾರ ಕ್ರಮ ಹಸಿರು ಜೇನ್ನೊಣಬಾಕದಂತೆಯೇ ಇದೆ. ಇದರ ಸ್ವರ ಸಾಮಾನ್ಯವಾಗಿ ನೀಲಿ ಬಾಲದ ಜೇನ್ನೋಣಬಾಕದಂತಿದೆ.

ಇವುಗಳ ಚಲನೆ zig zag  ರೀತಿಯಲ್ಲಿರುತ್ತವೆ. ತನ್ನ ಸೌಂದರ್ಯದೊಂದಿಗೆ ಬುದ್ಧಿವಂತ ಪಕ್ಷಿಯಾಗಿಯೂ ಗುರುತಿಸಿ ಕೊಂಡಿದೆ.  ಈ ಪಕ್ಷಿ  camera friendly ಎಂದೇ ಪ್ರಸಿದ್ಧವಾಗಿದೆ.

#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.

ಛಾಯಾಚಿತ್ರ : ರಾಧಾಕೃಷ್ಣ ರಾವ್ ಯು, ಬಾಳಿಲ. 

Advertisement

ರಾಧಾಕೃಷ್ಣ ರಾವ್‌ ಯು , ಬಾಳಿಲ

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಕೊಳೆರೋಗ | ಮಳೆಯಲ್ಲೂ ಇವರು ಔಷಧಿ ಸಿಂಪಡಿಸುತ್ತಾರೆ..!
July 24, 2025
4:42 PM
by: The Rural Mirror ಸುದ್ದಿಜಾಲ
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror

Join Our Group