ಚಿಲಿಪಿಲಿ | ಮರಕುಟಿಗ ಹಕ್ಕಿಯನ್ನು ನೋಡಿದ್ದೀರಾ?

February 23, 2021
10:39 AM
ಹೊಂಬೆನ್ನಿನ ಮರಕುಟಿಕ(Black rumped flame back)
ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳು ಒಂದಕ್ಕೊಂದು ಅವಲಂಬಿತವೇ. ಮರಕುಟಿಕ ಹೆಸರು ಕೇಳುವಾಗ ಒಂದು ಪುಟ್ಟ ಕಥೆ ನೆನಪಿಗೆ ಬರುತ್ತದೆ. ಗೂಡು ಕಟ್ಟ ಬೇಕೆಂಬ ಇಚ್ಚೆಯಿಂದ ಮರಗಳ ಬಳಿ ಹೋಗಿ ಕೇಳಿದರೆ ಯಾವ ಮರಗಳೂ ಬಿಡಲಿಲ್ಲ. ಕೊನೆಗೆ ಒಂದು ಮರ ಜಾಗ ಕೊಟ್ಟಿತು. ಉಳಿದ ಮರಗಳೆಲ್ಲ ಕೊಡಲಿಯೇಟಿಗೆ ಬಲಿಯಾಗಿ, ಮರಕುಟಿಕದ ಪೊಟರೆ ಇರುವ ಮರ ಮಾತ್ರ ಉಳಿಯಿತು ಇದು ಕತೆ.
ವಾಸ್ತವ ಏನೆಂದರೆ ಈ ಹಕ್ಕಿ ಒಣಮರಗಳಲ್ಲೇ ಪೊಟರೆ ಕೊರೆಯುತ್ತವೆ. ಸೆಕುಂಡಿಗೆ 20 ಬಾರಿ , ಗಂಟೆಗೆ 18 ಕಿ.ಮೀ ವೇಗದಲ್ಲಿ , ದಿನವೊಂದಕ್ಕೆ 8 ರಿಂದ 12 ಸಾವಿರ ಬಾರಿ ಕೊಕ್ಕಿನಿಂದ ಕುಟ್ಟುತ್ತವೆ. ಪೊಟರೆ ಕೊರೆಯುವ ಕಾರ್ಯ ದಲ್ಲಿ ಗಂಡು ,ಹೆಣ್ಣು ಹಕ್ಕಿಗಳೆರಡೂ ಪಾಲ್ಗೊಳ್ಳುತ್ತವೆ. ಬಲಿಷ್ಟವಾದ , ನೇರವಾದ ಕೊಕ್ಕು ಇವುಗಳದಾಗಿದ್ದು ದೇಹರಚನೆ ಮರಕೊರೆಯಲು ಅನುಕೂಲವಾಗುವಂತಿದೆ.

ದಕ್ಷಿಣ ಏಷ್ಯಾದಲ್ಲಿ ಕಂಡು ಬರುವ ಈ ಹಕ್ಕಿ ದೊಡ್ಡ(26- 29 ಸೆ.ಮೀ) ಹಕ್ಕಿಯಾಗಿದೆ. 1200 ಮೀಟರ್ ಎತ್ತರದಲ್ಲಿಯೂ ಹಾರುವ ಸಾಮರ್ಥ್ಯ ಈ ಹಕ್ಕಿಗಿದೆ.
ಈ ಹಕ್ಕಿಗಳು ಆಸ್ಟ್ರೇಲಿಯಾ ಹೊರತುಪಡಿಸಿ ಎಲ್ಲೆಡೆ ಕಂಡು‌ ಬರುತ್ತವೆ. ಸುಮಾರು 200 ವಿವಿಧ ಪ್ರಭೇದಗಳನ್ನು ಗುರುತಿಸಲಾಗಿದೆ.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಛಾಯಾಚಿತ್ರ : ರಾಧಾಕೃಷ್ಣ ರಾವ್ ಯು ‌ಬಾಳಿಲ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ತೆಂಗು ಬೆಳೆ ಬಾಧಿಸುವ ಕೀಟಗಳನ್ನು ಹತೋಟಿಗೆ ತರಲು ಕ್ರಮ
July 7, 2025
11:01 AM
by: The Rural Mirror ಸುದ್ದಿಜಾಲ
ಕೋಲಾರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ ಹಾಲಿನ ಸಂಗ್ರಹ 10 ಲಕ್ಷಕ್ಕೆ ಏರಿಸುವ ಗುರಿ
July 7, 2025
10:58 AM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಪ್ರಣಾಮ್‌ ಎಂ ಪಿ ಮಠದಗದ್ದೆ, ಶೃಂಗೇರಿ
July 7, 2025
10:53 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ನಿರ್ವಿ ಜಿ ಎಂ
July 7, 2025
10:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group