ಬಿಳಿ ಬೆನ್ನಿನ ರಾಟವಾಳ (White rumped munia) Lonchura striata)
Advertisement
ಗುಂಪು ಗುಂಪಾಗಿ ಈ ಹಕ್ಕಿಗಳು ಕಾಣಸಿಗುತ್ತವೆ. ಹಾರುತ್ತಾ ಬಂದು , ಬಾಗಿದ ಹುಲ್ಲಿನಲ್ಲಿರುವ ಹುಲ್ಲಕ್ಕಿಯನ್ನು ತಿನ್ನುವುದನ್ನು ನೋಡುವುದೇ ಚೆಂದ.
Advertisement
ಕಪ್ಪು , ಬಿಳುಪಿನ ಸುಂದರ ವಿನ್ಯಾಸದಲ್ಲಿರುವ ಪುಟ್ಟ (10cm) ಹಕ್ಕಿ ಇದಾಗಿದೆ. ಹಕ್ಕಿಯ ಹೊಟ್ಟೆಯ ಭಾಗ ಬಿಳುಪಾಗಿರುತ್ತದೆ.

ಪುಟಪುಟನೆ ನೆಲದಲ್ಲಿ ನಡೆಯುವ ಈ ಹಕ್ಕಿ ಗಾತ್ರದಲ್ಲಿ ಗುಬ್ಬಚ್ಚಿಗಿಂತಲೂ ಸ್ವಲ್ಪ ಚಿಕ್ಕದು. ಇವುಗಳ ಕೊಕ್ಕು ದಪ್ಪವಾಗಿದೆ. ಹುಲ್ಲಕ್ಕಿಯೇ ಮುಖ್ಯವಾಗಿ ಇವುಗಳ ಆಹಾರವಾಗಿದೆ. ಗದ್ದೆ, ತೋಟಗಳಲ್ಲಿ ಇವುಗಳನ್ನು ಕಾಣಬಹುದು. ಈ ಹಕ್ಕಿಗಳು ಹುಲ್ಲುಕಡ್ಡಿಗಳನ್ನು ಬಳಸಿ ಮರಗಿಡಗಳಲ್ಲಿ ಗೂಡು ಕಟ್ಟುತ್ತವೆ. ಇದರಲ್ಲಿ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಗಂಡು, ಹೆಣ್ಣುಗಳೆರಡರಲ್ಲಿಯೂ ಹೆಚ್ಚಿನ ವ್ಯತ್ಯಾಸಗಳಿಲ್ಲ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ : ರಾಧಾಕೃಷ್ಣ ಉಡುವೆಕೋಡಿ


Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement