ಚೀನಾದ 54 ಆಪ್‌ಗಳನ್ನು ನಿಷೇಧಿಸಲು ಕೇಂದ್ರ ಸರಕಾರ ಹೊಸ ಸೂಚನೆಗಳನ್ನು ಹೊರಡಿಸಿದೆ. ಅವು ಖಾಸಗಿತನ ಮತ್ತು ರಾಷ್ಟ್ರೀಯ ಭದ್ರತೆಗೆ ದಕ್ಕೆ ತಂದಿವೆ ಎಂದು ಮೂಲಗಳು ಸೋಮವಾರದಂದು ತಿಳಿಸಿದೆ.
ವರದಿಯ ಪ್ರಕಾರ, ಹೆಚ್ಚಿನ ಸಂಖ್ಯೆಯ ಈ ಮೊಬೈಲ್ ಅಪ್ಲಿಕೇಶನ್‌ಗಳು ಟೆನ್ಸೆಂಟ್, ಅಲಿಬಾಬಾ ಮತ್ತು ನೆಟ್‌ಈಸ್‌ನಂತಹ ಟೆಕ್ ದೈತ್ಯರಿಗೆ ಸೇರಿದೆ. ಈ ಅಪ್ಲಿಕೇಶನ್‌ಗಳಲ್ಲಿ ಕೆಲವು ಬ್ಯೂಟಿ ಕ್ಯಾಮೆರಾ, ಸ್ವೀಟ್ ಸೆಲ್ಫಿ ಎಚ್‌ಡಿ, ಬ್ಯೂಟಿ ಕ್ಯಾಮೆರಾ-ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್, ಸೇಲ್ಸ್ ಫೋರ್ಸ್ ಇತ್ಯಾದಿಗಳನ್ನು ರದ್ದುಗೊಳಿಸಲಾಗಿದೆ.
ಈ ಅಪ್ಲಿಕೇಶನ್‌ಗಳು ಹೆಚ್ಚಾಗಿ 2020 ರಿಂದ ದೇಶದಲ್ಲಿ ನಿಷೇಧಿಸಲ್ಪಟ್ಟಿರುವ ಅಪ್ಲಿಕೇಶನ್‌ಗಳ ಮರು ನಾಮಕರಣಗೊಂಡವುಗಳಾಗಿವೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ತನ್ನ ಇತ್ತೀಚಿನ ಆದೇಶದಲ್ಲಿ ಈ ಅಪ್ಲಿಕೇಶನ್‌ಗಳು ಭಾರತೀಯ ಸೂಕ್ಷ್ಮ ಡೇಟಾವನ್ನು ಚೀನಾದಂತಹ ವಿದೇಶಗಳಲ್ಲಿನ ಸರ್ವರ್‌ಗಳಿಗೆ ವರ್ಗಾಯಿಸುತ್ತಿದೆ ಎಂದು ಹೇಳಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel