ಅಡಿಕೆ ಆಮದು ಹೆಚ್ಚಿಸಿಕೊಂಡಿರುವ ಚೀನಾ..? ಕಾರಣ ಏನು..?

December 20, 2024
6:33 AM
ಅಡಿಕೆ ಹಾನಿಕಾರಕ ಸೇರಿದಂತೆ ಇತ್ಯಾದಿ ಸಂಗತಿಗಳ ಬಗ್ಗೆ ಚೀನಾ ತಲೆಕೆಡಿಸಿಕೊಂಡಿಲ್ಲ.‌ ಚೀನಾವು ಅಡಿಕೆ ಆಮದು ಪ್ರಮಾಣ ಹೆಚ್ಚಿಸಿಕೊಂಡಿದೆ. ಅಡಿಕೆಯ ಮೌಲ್ಯವರ್ಧನೆಯ ಕಡೆಗೆ ಗಮನಹರಿಸಿದೆ.

ಚೀನಾವು ವಿಯೆಟ್ನಾಂನಿಂದ ಅಡಿಕೆ ಆಮದು ಮಾಡುವ ಪ್ರಕ್ರಿಯೆಲ್ಲಿ ಹೆಚ್ಚು ಆಸಕ್ತಿ ತೋರಿಸಿದೆ. ಈ ಬಾರಿ ಅಂದರೆ ಕಳೆದ 9 ತಿಂಗಳಲ್ಲಿ ವಿಯೆಟ್ನಾಂನಿಂದ ಅಧಿಕ ಪ್ರಮಾಣದಲ್ಲಿ ಅಡಿಕೆ ಆಮದು ಮಾಡಿಕೊಂಡಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಡಿಕೆಯ ಪೂರೈಕೆಯಲ್ಲಿನ ವ್ಯತ್ಯಾಸದ  ಕಾರಣದಿಂದ ಆಮದು ಹೆಚ್ಚಿಸಿಕೊಂಡಿದೆ.…..ಮುಂದೆ ಓದಿ….

ಚೀನಾದ ಲ್ಲಿ ಹೆಚ್ಚು ಅಡಿಕೆ ಉತ್ಪಾದಿಸುವ ಹೈಯಾನ್ ದ್ವೀಪ ಪ್ರಾಂತ್ಯವು ಚಂಡಮಾರುತಗಳಿಂದ ಹಾನಿಗೊಳಗಾಗಿತ್ತು, ಹಾಗೂ ಹವಾಮಾನದ ಕಾರಣದಿಂದ ಉತ್ಪಾದನೆಯಲ್ಲಿ ಕೊರತೆಯೂ ಕಂಡುಬಂದಿತ್ತು. ಹೀಗಾಗಿ ಚೀನಾವು ವಿಯೆಟ್ನಾಂ ಮತ್ತು ಇಂಡೋನೇಷ್ಯಾದಂತಹ ಇತರ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ. ಚೀನಾ ಆಮದು ಕಾರಣದಿಂದ ವಿಯೆಟ್ನಾಂನಲ್ಲೂ ಅಡಿಕೆ ಧಾರಣೆ ಏರಿಕೆಯಾಗಿದೆ.

ಚೀನಾದಲ್ಲಿ ಅಡಿಕೆಯನ್ನು ಕ್ಯಾಂಡಿ ತಯಾರಿಸಲು ಬಳಕೆ ಮಾಡಲಾಗುತ್ತದೆ. ಅಡಿಕೆಯಲ್ಲಿ ಅರೆಕೋಲಿನ್‌ ಅಂಶಗಳ ಪ್ರಭಾವ ಕಡಿಮೆ ಮಾಡಲು ಮೌಲ್ಯವರ್ಧನೆ ಮಾಡಿ ಎಚ್ಚರಿಕೆಯಿಂದ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಚೀನಾದಲ್ಲಿ ಅಡಿಕೆಯ ಮೌಲ್ಯವರ್ಧನೆಯು ವೇಗ ಪಡೆದಿದೆ, ಕ್ಯಾಂಡಿ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಅಡಿಕೆ ಆಮದು ಪ್ರಮಾಣವೂ ಏರಿಕೆಯಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror