133 ಪ್ರಯಾಣಿಕರಿದ್ದ ಚೀನಾದ ವಿಮಾನವು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಸೋಮವಾರ ಪತನಗೊಂಡಿದೆ.
ಚೈನಾ ಈಸ್ಟರ್ನ್ ಏರ್‌ಲೈನ್ಸ್ ಬೋಯಿಂಗ್-737 ವಿಮಾನವು ಟೆಂಗ್ ಕೌಂಟಿಯ ವುಝೌ ನಗರದಲ್ಲಿ ಅಪಘಾತಕ್ಕೀಡಾಗಿದೆ. ಇದ್ದಕ್ಕಿದ್ದಂತೆ ವಿಮಾನ ಪರ್ವತಕ್ಕೆ ಅಪ್ಪಳಿಸಿದೆ. ವಿಮಾನ ಬಿದ್ದ ರಭಸಕ್ಕೆ ಪರ್ವತದ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ.
ಸ್ಥಳಕ್ಕೆ ರಕ್ಷಣಾ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಮೃತರು ಮತ್ತು ಗಾಯಾಳುಗಳ ಸಂಖ್ಯೆ ಮಾಹಿತಿ ನಿಖರವಾಗಿ ಲಭಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ನಿಯಂತ್ರಣ ಕಳೆದುಕೊಂಡ ವಿಮಾನವು ಸುಮಾರು 3,225 ಅಡಿ ಆಳದ ಪರ್ವತಾರಣ್ಯ ಪ್ರಪಾತಕ್ಕೆ ಕೇವಲ 3 ನಿಮಿಷದಲ್ಲಿ ಅಪ್ಪಳಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel