MIRROR FOCUS

ಚೀನಾದಲ್ಲಿ ಸತತ ಎರಡನೇ ವರ್ಷದಿಂದ ಕುಸಿಯುತ್ತಿರುವ ಜನಸಂಖ್ಯೆ | ದೇಶದ ಆರ್ಥಿಕತೆ ಮೇಲೆ ದೊಡ್ಡ ಸವಾಲು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಮ್ಮ ನೆರೆಯ ದೇಶ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಜನಸಂಖ್ಯೆ(Population) ಹೊಂದಿದ್ದ ಚೀನಾದಲ್ಲಿ(China) ಸತತ ಎರಡನೇ ವರ್ಷವೂ ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. ಹೊಸ ಜನನ ದರದಲ್ಲೂ(Birth Rate) ಭಾರಿ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಅಂಕಿ ಅಂಶಗಳ ಬ್ಯೂರೋ (NBS) ಪ್ರಕಟಿಸಿದೆ.

Advertisement

ಎನ್​ಬಿಸಿ ವರದಿ ಪ್ರಕಾರ, 2023ರಲ್ಲಿ ಜನಸಂಖ್ಯೆ 1,409 ಬಿಲಿಯನ್​ ಇತ್ತು. ಇದೀಗ ಕಳೆದ ವರ್ಷಕ್ಕಿಂತ 2.08 ಮಿಲಿಯನ್‌ಗಳಷ್ಟು​ ಕುಸಿದಿದೆ. ಜನನ ದರವೂ ಕುಸಿದಿದ್ದು, ಹೊಸ ವರದಿಯಂತೆ 1,000 ಜನರಿಗೆ 6.39 ಜನನ ಪ್ರಮಾಣವಿದೆ. ಕಳೆದ ವರ್ಷ ಈ ದರ 6.77ರಷ್ಟಿತ್ತು. 1949ರ ಬಳಿಕ ಅತ್ಯಂತ ಕಡಿಮೆ ಜನನ ದರ ಈ ಬಾರಿ ದಾಖಲಾಗಿದೆ.

2023ರಲ್ಲಿ 9.2 ಮಿಲಿಯನ್​ ಮಕ್ಕಳು ಜನಿಸಿದರೆ, 2022ರಲ್ಲಿ 9.56 ಮಿಲಿಯನ್​ ಮಕ್ಕಳು ಜನಿಸಿದ್ದರು. 2022ರಿಂದ ಮೊದಲ ಬಾರಿಗೆ ಚೀನಾ ಜನಸಂಖ್ಯೆ ತಗ್ಗಿದೆ. ಜನಸಂಖ್ಯೆ ವಿಪರೀತ ಹೆಚ್ಚಿದ ಹಿನ್ನೆಲೆಯಲ್ಲಿ 1980ರಲ್ಲಿ ಚೀನಾ ಸರ್ಕಾರ ಕಟ್ಟುನಿಟ್ಟಿನ ‘ಒಂದು ಮಗು ಕಾನೂನ’ ಜಾರಿಗೆ ತಂದಿತ್ತು. ದುಡಿಯುವ ವರ್ಗದ ಸಂಖ್ಯೆ ಕ್ಷೀಣಿಸಿದ ಕಾರಣ ಈ ನಿಯಮವನ್ನು ಸಡಿಲಿಸಿದ ಸರ್ಕಾರ 2021ರಲ್ಲಿ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು.

ಜನಸಂಖ್ಯೆ ಕುಸಿತಕ್ಕೆ ಕಾರಣವೇನು?: ಜೀವನ ಮಟ್ಟದ ಸುಧಾರಣೆ, ಮಹಿಳೆಯರ ಉದ್ಯೋಗ ಮತ್ತು ಉನ್ನತ ಶಿಕ್ಷಣ ಜನನ ದರ ಇಳಿಕೆಗೆ ಕಾರಣವಾಗಿದೆ. ಪ್ರಸ್ತುತ ದೇಶದ ಜನಸಂಖ್ಯೆ ಕುಸಿತ ಕಾಣುತ್ತಿದ್ದು, ಇದನ್ನು ಹಳೆಯ ಮಾದರಿಗೆ​​ ಮರಳಿಸುವುದು ಕಷ್ಟಸಾಧ್ಯವಾಗಿದೆ. ಚೀನಾದಲ್ಲಿ ಸಂತಾನಕ್ಕೆ ಪ್ರೋತ್ಸಾಹ ನೀಡಿದರೂ ಯುವ ಪೀಳಿಗೆ ತಮ್ಮ ಮನಸ್ಥಿತಿ ಬದಲಾಯಿಸಿದ್ದಾರೆ. ಅವರು ಮಗು ಹೊಂದಲು ಒಲವು ಹೊಂದಿಲ್ಲ ಎಂದು ಜನಸಂಖ್ಯಾಶಸ್ತ್ರಜ್ಞರು ತಿಳಿಸಿದ್ದಾರೆ. ವಿಶ್ಲೇಷಕರ ಪ್ರಕಾರ, 1967ರಲ್ಲಿ ಚೀನಾದಲ್ಲಿ ಉಂಟಾದ ಕ್ಷಾಮದಲ್ಲಿ ಮಿಲಿಯಗಟ್ಟಲೆ ಜನರು ಸಾವನ್ನಪ್ಪಿದ ಬಳಿಕ ಕಳೆದೆರಡು ವರ್ಷದಿಂದ ಜನಸಂಖ್ಯೆ ಕುಸಿತ ಕಂಡಿದೆ.

ಆರ್ಥಿಕತೆ ಮೇಲೆ ಪರಿಣಾಮ: ಚೀನಾದಲ್ಲಿ ದುಡಿಯುವ ವರ್ಗದ ಜನರು 16ರಿಂದ 59 ವರ್ಷದವರಾಗಿದ್ದು, ಈ ಸಂಖ್ಯೆ 2022ರಲ್ಲಿ 10.76 ಮಿಲಿಯನ್​ ಕುಸಿತವಾಗಿದೆ. 2022ರಲ್ಲಿ ದೇಶದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 16.93 ಮಿಲಿಯನ್​ ಇತ್ತು. ಜನಸಂಖ್ಯೆ ಕುಸಿತ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಚೀನಾಕ್ಕೆ ಅನೇಕ ಸವಾಲುಗಳನ್ನು ತಂದೊಡ್ಡಿದೆ. ಇದು ದುಡಿಯುವ ವರ್ಗ, ಗ್ರಾಹಕರ ವೆಚ್ಚ ಕಡಿತ ಮತ್ತು ಸಾಮೂಹಿಕ ಭದ್ರತೆಯ ಒತ್ತಡವನ್ನು ಹೇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಚೀನಾದಲ್ಲಿ ಜನಸಂಖ್ಯೆ 2016ರಿಂದ ಕುಸಿತ ಕಾಣುತ್ತಿದೆ. ಮಕ್ಕಳನ್ನು ಬೆಳೆಸುವುದು ವೆಚ್ಚದಾಯಕವಾಗಿದ್ದು, ಜನರ ಜೀವನ ಶೈಲಿಯಲ್ಲಾದ ಬದಲಾವಣೆ, ಸ್ವತಂತ್ರ ಜೀವನ ನಿರ್ವಹಣೆಗಳು ಇದಕ್ಕೆ ಕೊಡುಗೆ ನೀಡಿವೆ. 2020 ಮತ್ತು 2022ರ ಬಳಿಕದ ಶೂನ್ಯ ಕೋವಿಡ್​​ ನಿಯಮವೂ ಪರಿಣಾಮ ಬೀರಿದೆ.

(ಐಎಎನ್​ಎಸ್​)

China, which had the highest population in our neighboring country and the world, has seen a huge decline in population for the second year in a row. The National Bureau of Statistics (NBS) has announced that there has been a huge decrease in the new birth rate.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…

1 hour ago

ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

7 hours ago

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

14 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

15 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

1 day ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

1 day ago