ಸುಳ್ಯ ತಾಲೂಕಿನ ಚೊಕ್ಕಾಡಿಯ ಶ್ರೀರಾಮ ದೇವಾಲಯದಲ್ಲಿ ಮಾ.16 ರಂದು ಲೋಕಕಲ್ಯಾಣಾರ್ಥವಾಗಿ ಅಹರ್ನಿಶಿ ರುದ್ರ ಪಾರಾಯಣ ನಡೆಯಲಿದೆ. ರಾಮಸ್ಮರಣ-ರುದ್ರಪಠನ ಕಾರ್ಯಕ್ರಮದ ಮೂಲಕ ರುದ್ರಾಧ್ಯಾಯಿಗಳು ನಿರಂತರ ರುದ್ರಪಾರಾಯಣ ಮಾಡುವರು ಎಂದು ಚೊಕ್ಕಾಡಿಯ ಶ್ರೀರಾಮ ದೇವಾಲಯದ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಚೂಂತಾರು ತಿಳಿಸಿದ್ದಾರೆ.
ಶ್ರೀ ರಾಮಚಂದ್ರಾಪುರ ಮಠದ ಅಧೀನ ಸಂಸ್ಥೆಯಾದ ಚೊಕ್ಕಾಡಿಯ ಶ್ರೀ ರಾಮ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ನಿರಂತರ ರುದ್ರಪಠಣ ನಡೆಯಲಿದೆ. ಶಿವೋಪಾಸನೆಯ ಈ ಕಾರ್ಯದಲ್ಲಿ 24 ಗಂಟೆಗಳ ಕಾಲ ನಿರಂತರವಾಗಿ ರುದ್ರ ಪಠಣ ನಡೆಯಲಿದೆ. ಊರಿನ ಹಾಗೂ ಪರವೂರಿನ ರುದ್ರಾಧ್ಯಾಯಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರುದ್ರ ಪಠಣ ನಡೆಸುವರು. ಅತ್ಯಂತ ವಿಶಿಷ್ಟ ಹಾಗೂ ಅಪರೂಪದ ಈ ಕಾರ್ಯಕ್ರಮಕ್ಕೆ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದೆ. ಮಾರ್ಚ್ 16 ರ ಸೂರ್ಯೋದಯದಿಂದ ಆರಂಭವಾಗಿ ಮಾರ್ಚ್ 17 ಸೂರ್ಯೋದಯದವರೆಗೆ ಈ ರುದ್ರ ಪಠಣ ನಡೆಯಲಿದೆ.
ಲೋಕಕಲ್ಯಾಣ ಹಾಗೂ ಶ್ರೀ ಕ್ಷೇತ್ರದ ಅಭಿವೃದ್ಧಿಯ ಸಂಕಲ್ಪದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರುದ್ರ ಪಾರಾಯಣ ನಡೆಸುವ ಭಕ್ತರು ಚೊಕ್ಕಾಡಿಯ ಶ್ರೀ ರಾಮ ದೇವಾಲಯದ ಶ್ರೀರಾಮ ಸೇವಾ ಸಮಿತಿಯನ್ನು ಸಂಪರ್ಕ ಮಾಡಬಹುದು. ಅಂದು ರುದ್ರ ಪಠಣವು ಸೇವಾ ರೂಪದಲ್ಲಿ ನಡೆಯಲಿದ್ದು ಶ್ರೀ ದೇವತಾ ಕಾರ್ಯಗಳೆಲ್ಲವೂ ಸೇವಾ ರೂಪದಲ್ಲಿ ನಡೆಯಲಿದೆ ಎಂದು ಮಹೇಶ್ ಭಟ್ ಚೂಂತಾರು ತಿಳಿಸಿದ್ದಾರೆ.
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…