ಗುಜರಾತ್‌ನ ಜುಮ್ನಾರ್ಗ ಮೂಲದ ಆಯುರ್ವೇದ ಯೂನಿವರ್ಸಿಟಿಯ(Ayurvedic University) ಖ್ಯಾತ ಸಂಶೋಧಕ ಡಾ. ಹಿತೇಶ್ ಜಾನಿ, ಗೋವುಗಳ(Cattle) ಕುರಿತಂತೆ ನಡೆಸಿದ ಸಂಶೋಧನೆಯ(Research) ವರದಿ ವಿಶ್ವವ್ಯಾಪಿ ಚರ್ಚೆಯಾಗುತ್ತಿದೆ. ವಿಶ್ವದ ಖ್ಯಾತ ಸಂಶೋಧಕರು ಈ ಮಾಹಿತಿಯನ್ನು ಕಂಡು ಒಂದು ಕ್ಷಣ ಹೌಹಾರಿದ್ದಾರೆ. ಆ ವರದಿಯಲ್ಲಿ ವಿದೇಶಿ ತಳಿಗಳ ಹಾಲಿನಲ್ಲಿ ಬಿಸಿಎಂ-7 ಎಂಬ ರಾಸಾಯನಿಕ(Chemical) ಅಂಶವಿದ್ದು, ಇದರ ಸೇವನೆಯಿಂದ ದೇಹ ರೋಗಗಳ(Disease) ಗೂಡಾಗುತ್ತಿದೆ. ಅದರಲ್ಲೂ ಹೆಚ್ಚಾಗಿ ಮಕ್ಕಳ ಆರೋಗ್ಯದ(Children health) ಮೇಲೆ ಇದು ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ರೋಗಗಳಿಗೆ ಮಕ್ಕಳು ತುತ್ತಾಗುತ್ತಿದ್ದಾರೆ.
ವಯಸ್ಸಿಗೆ ಮೀರಿದ ದೇಹ ರಚನೆಯೂ ಸೇರಿ ಸಾಕಷ್ಟು ಕಿವಿ ಹಾಗೂ ಮಿದುಳಿಗೆ ಸಂಬಂಧಿಸಿದ ರೋಗಗಳಿಗೆ ಮಕ್ಕಳು ಮತ್ತು ವಯಸ್ಕರು ಒಳಗಾಗುತ್ತಿದ್ದಾರೆ. ಅದೇ ಭಾರತೀಯ ಗೋತಳಿಗಳ ಹಾಲಿನ ಸೇವನೆಯು ಎಲ್ಲ ರೀತಿಯಲ್ಲಿಯೂ ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು, ಇದರ ಹಾಲಿನಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶ ಕಂಡುಬರುವುದಿಲ್ಲ.
ಹಾಗೆಯೇ, ನಮ್ಮ ನಮ್ಮ ಕ್ಷೇತ್ರದ ತಳಿಯ ಗೋವುಗಳು ಹಾಲು ಆಯಾ ಪ್ರದೇಶದ ಸಿಗುವ ಹಾಲು ಮಕ್ಕಳಿಗೆ ಅತೀ ಶ್ರೇಷ್ಠ. ಇದು ಭಾರತೀಯರಿಗೆ ಪಕೃತಿ ನೀಡಿದ ಕೊಡುಗೆ. ಉದಾಹರಣೆ, ಕರ್ನಾಟಕ-ಮಹಾರಾಷ್ಟ್ರ ಮದ್ಯ ಸಿಗುವ ಕಿಲಾರ, ಮಲ್ಲಾಡ ಗಿಡ್ಡ, ಮೈಸೂರು ಹಳ್ಳಿಕಾರ, ಅಮೃತಮಹಲ, ಹೈದರಾಬಾದ್-ಕರ್ನಾಟಕ ದೇವಣಿ, ಗುಜರಾತ ಗೀರ, ರಾಜಸ್ಥಾನದ ಕಾಂಗ್ರಿಜ, ಪಂಗನೂರ್, ಶಾಹಿವಾಲ, ಶಿಂದಿ, ತಾರಪಾರಕರ, ವೆಂಚುರ, ರಾಟಿ ಇಂತಹ ಹಲವಾರು ದೇಶಿಯ ಗೋತಳಿ ನಮ್ಮನ್ನು ಅನಾದಿ ಕಾಲದಿಂದ ರಕ್ಷಣೆ ಮಾಡಿಕೊಂಡು ಬಂದಿದೆ. ಯಾವಾಗ ಮಿಶ್ರ ತಳಿಯ ಉಗಮವಾಯಿತೋ ಅಲ್ಲಿಂದ ಆರೋಗ್ಯ, ಆರ್ಥಿಕ, ಸಂಸ್ಕೃತಿಕ ಅಧಃಪತನ ಆರಂಭವಾಯಿತು. ಕಾರಣ ನಮ್ಮ ನಮ್ಮ ಕ್ಷೇತ್ರದಲ್ಲಿ ಗೋತಳಿ ಸಾಕಿ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ಮತ್ತು ವೈವಿಧ್ಯಮಯ ಜೀವ ವೈವಿಧ್ಯತೆ ಕಾಪಾಡುವ ಜವಾಬ್ದಾರಿ ನಮ್ಮದಲ್ಲವೆ? ಆ ಮೂಲಕ ಸ್ಥಳೀಯ ವೈವಿಧ್ಯಮಯ ಗೋತಳಿ ಬೆಳೆಸಿ.. ಮಕ್ಕಳು ಹಾಗೂ ನಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾಗೋಣ….