21 ವರ್ಷಗಳಿಂದ ಕ್ರಿಸ್‌ ಮಸ್‌ ಶುಭಾಶಯ ಹೇಳುವ ಸಾಂತಾಕ್ಲಾಸ್ |

December 25, 2021
11:02 AM

ಉದ್ದನೆಯ ಕೆಂಪು ಬಿಳುಪಿನ ಅಂಗಿ, ತಲೆಗೊಂದು ಕೆಂಪನೆ ಟೋಪಿ ಬಿಳುಪಾದ ಉದ್ದನೆಯ ಗಡ್ಡ, ಗಾಡಿಯ ತುಂಬೆಲ್ಲ ಬಲೂನುಗಳ ಅಲಂಕಾರ .ಹೀಗೆ ಅನೇಕ ವರ್ಷಗಳಿಂದ ಕೊಕ್ಕಡ , ನೆಲ್ಯಾಡಿ ಪರಿಸರದಲ್ಲಿ ಕ್ರಿಸ್ಮಸ್ ಸಂದೇಶವನ್ನು ಸಾರುತ್ತಿದ್ದ ಸಾಂತಾಕ್ಲಾಸ್ ನಿರೀಕ್ಷೆಯಲ್ಲಿ ನೀವಿದ್ದರೆ ಈ ವರ್ಷ ನಿರಾಸೆಯಾಗುವುದು ಖಂಡಿತ.

Advertisement
Advertisement
Advertisement

ಹೌದು, ಸುಮಾರು 21 ವರ್ಷಗಳ ಕಾಲ ಕೊಕ್ಕಡ ನೆಲ್ಯಾಡಿ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಲ್ಲಿ ಕ್ರಿಸ್ಮಸ್ ಆಚರಣೆಯನ್ನು ವಿಭಿನ್ನವಾಗಿ ಆಚರಿಸಿ, ಕ್ರಿಸ್ಮಸ್ ಸಂದೇಶವನ್ನು ಎಲ್ಲಾ ಪ್ರದೇಶಗಳಿಗೂ ಎಲ್ಲಾ ಧರ್ಮದವರಿಗೂ ಸಾರುವ ಸಾಂತಕ್ಲಾಸ್ ವೇಷದಾರಿ ಕೊಕ್ಕಡದ ವಿನ್ಸೆಂಟ್ ಮಿನೇಜಸ್ ಈ ವರ್ಷ ತಮ್ಮ ಅನಾರೋಗ್ಯ ನಿಮಿತ್ತ ಸಾಂತಾಕ್ಲಾಸ್ ವೇಷ ಧರಿಸುವುದನ್ನು ಸ್ಥಗಿತಗೊಳಿಸಿದ್ದಾರೆ.

Advertisement

2000ನೇ ಇಸವಿಯಲ್ಲಿ ಆರಂಭಿಸಿದ ಇವರ ಈ ಸಂದೇಶ ಯಾತ್ರೆ ಇದೀಗ 22ನೇ ವರ್ಷಕ್ಕೆ ಮುಂದುವರೆದಿದೆ. ಆದರೆ ಕೆಲ ತಿಂಗಳುಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ವೈದ್ಯರ ಸಲಹೆ ಮೇರೆಗೆ ಇದೀಗ ಮೂರು ವಾರಗಳ ವಿಶ್ರಾಂತಿಯಲ್ಲಿದ್ದಾರೆ ಹಾಗಾಗಿ ಈ ಬಾರಿ ತಿರುಗಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಿಸುತ್ತಾರೆ. ಆದರೆ ಸಾಂಕೇತಿಕವಾಗಿ ತಮ್ಮ ಅಕ್ಕಪಕ್ಕದ ಮನೆಗಳಿಗೆ ಹೋಗಿ ಕ್ರಿಸ್ಮಸ್ ಸಂದೇಶವನ್ನು ಸಾರಿ ಸಿಹಿಯನ್ನು ಹಂಚುತ್ತೇನೆ ಎನ್ನುತ್ತಾರೆ ಅವರು.

Advertisement

ಮೂಲತಹ ವಿನ್ಸೆಂಟ್ ಅವರು ಪದವೀಧರ ಕೃಷಿಕ. ಒಳ್ಳೆಯ ನಿರೂಪಕ ಕಲಾವಿದ. ತಮ್ಮ ಕೃಷಿ ಹಾಗೂ ಪ್ರವೃತ್ತಿಯಲ್ಲಿ ಬಂದ ಹಣವನ್ನು ಸಾಂತಾಕ್ಲಾಸ್ ಯಾತ್ರೆಗೆ ಮೀಸಲಿಡುತ್ತಾರೆ. ಯಾರ ಬಳಿಯೂ ಕೈಚಾಚಿ ಕೇಳುವುದಿಲ್ಲ. ಯಾರಾದರೂ ಕೊಟ್ಟರೆ ವಿನಂಬ್ರ ದಿಂದ ಸ್ವೀಕರಿಸುತ್ತಾರೆ ಮತ್ತು ಅದನ್ನು ಸಿಹಿ ಹಂಚುವ ಕಾರ್ಯಕ್ಕೆ ವಿನಿಯೋಗಿಸುತ್ತಾರೆ.

ಕ್ರಿಸ್ಮಸ್ ಸಮಯದಲ್ಲಿ ವಾರಕ್ಕೆ ಮುಂಚೆಯೇ ತಯಾರಿ ನಡೆಸುತ್ತಿದ್ದ ವಿನ್ಸೆಂಟ್ ತಮ್ಮ ದ್ವಿಚಕ್ರವಾಹನವನ್ನು ಅಲಂಕರಿಸುವ ಪರಿಯೇ ವಿಭಿನ್ನ. ಗಾಡಿಯ ಸುತ್ತಲೂ ಕೋಲುಗಳನ್ನು ಕಟ್ಟಿ ಅದಕ್ಕೆ ಬಣ್ಣಬಣ್ಣದ ಬಲೂನುಗಳನ್ನು ಕಟ್ಟಿಕೊಂಡು ಗಾಡಿಯ ತುಂಬೆಲ್ಲ ಚಾಕ್ಲೆಟ್ ಬಾಕ್ಸ್ ಗಳು, ಸ್ವೀಟ್ ಬಾಕ್ಸ್ ಗಳನ್ನು ತುಂಬಿಕೊಂಡು ಕೊಕ್ಕಡದ ಅವರ ಮನೆಯಿಂದ ಆರಂಭಿಸಿ ರಿಕ್ಷ ತಂಗುದಾಣ ಬಸ್ ತಂಗುದಾಣ ಶಾಲೆಗಳು ವೃದ್ಧಾಶ್ರಮ ಹೈವೇ ರಸ್ತೆಗಳು ಹೀಗೆ ಎಲ್ಲಾ ಕಡೆಯೂ ಪ್ರಯಾಣಿಸಿ ಕ್ರಿಸ್ತ ಹುಟ್ಟಿದ ಸಂತೋಷವನ್ನು ಜನತೆಗೆ ಸಾರಿಕೊಂಡು ಹೋಗುತ್ತಾರೆ.

Advertisement

ಈಗಾಗಲೇ ಧರ್ಮಸ್ಥಳ ವೇಣೂರು ಬೆಳ್ತಂಗಡಿ ಉಪ್ಪಿನಂಗಡಿ ಪುತ್ತೂರು ಮಂಗಳೂರು ಸಾಂತಾಕ್ಲಾಸ್ ಯಾತ್ರೆಯನ್ನು ಕೈಗೊಂಡ ವಿನ್ಸೆಂಟ್ ಮಿನೇಜಸ್ ಅನಾಥಾಶ್ರಮಗಳಲ್ಲಿ ಹೋದಾಗ ಅಲ್ಲಿನ ವೃದ್ಧೆಯರು ಭಾವನಾತ್ಮಕವಾಗಿ ಮಾತನಾಡುವಾಗ ತಾವು ಕೂಡ ಕಣ್ಣೀರಾಗುತ್ತಾರೆ. ಸಂದೇಶಗಳ ಜೊತೆ ಸಾಂತ್ವನವನ್ನು ಕೂಡ ನೀಡುವ ಇವರು ಈ ಸೇವೆಯಲ್ಲಿ ನನಗೆ ಆತ್ಮ ತೃಪ್ತಿ ಇದೆ ಎಂದು ಹೇಳಿಕೊಳ್ಳುತ್ತಾರೆ. ಯಾತ್ರೆ ಮುಗಿಸಿ ದೇವರ ಧ್ಯಾನದಲ್ಲಿ ಕುಳಿತುಕೊಳ್ಳುವಾಗ ಕ್ರಿಸ್ತ ಹುಟ್ಟಿದ ಸಂತೋಷವನ್ನು ಎಲ್ಲರಿಗೂ ಹಂಚಿ ಬಂದು ನಾನಿಲ್ಲಿ ಧ್ಯಾನಸ್ಥನಾಗಿ ಇದ್ದೇನೆ ಅನ್ನುವ ಭಾವನೆ ನನ್ನಲ್ಲಿದೆ. ಎನ್ನುತ್ತಾರೆ.

ಸಾಂತಕ್ಲಾಸ್ ವಿಶೇಷತೆ...
2000 ಇಸವಿಯಲ್ಲಿ ಕೊಕ್ಕಡದಲ್ಲಿ ಅಂದಿನ ಧರ್ಮಗುರುಗಳಾದ ದಿವಂಗತ ಫಾದರ್ ಅವರು ನನಗೆ ಸಾಂತಕ್ಲಾಸ್ ನಿಲುವಂಗಿ ಡ್ರೆಸ್ ತಂದುಕೊಟ್ಟು ಇದನ್ನು ಹಾಕಿ ನೀನು ಚರ್ಚ್ ಒಳಗೆ ಜನರಿಗೆ ಕ್ರಿಸ್ಮಸ್ ಸಂದೇಶ ಸಾರಬೇಕು ಎಂದು ಹೇಳಿದರು ನಂತರ ಇತರ ಧರ್ಮದವರಿಗೂ ಕ್ರಿಸ್ಮಸ್ ಸಂದೇಶ ಶುಭಾಶಯ ತಿಳಿಸಲು ಹೊರಗಡೆ ಹೋಗಬೇಕು ಎಂದರು. ಅವರ ಸೂಚನೆಯಂತೆ ಯಾತ್ರೆಯನ್ನು ಕೈಗೊಂಡು ಈಗ 22ನೇ ವರ್ಷದ ಹೊಸ್ತಿಲಲ್ಲಿ ಇದ್ದೇನೆ. ತಿಂಗಳ ಹಿಂದೆ ವಲೇರಿಯನ್ ಫಾದರ್ ಹೃದಯಾಘಾತದಿಂದ ನಿಧನ ಹೊಂದಿದ್ದು ಅವರು ನೀಡಿದ್ದ ಅಂದಿನ ಉಡುಗೆ ಇನ್ನೂ ನನ್ನಲ್ಲಿ ಜೋಪಾನವಾಗಿ ಇರಿಸಿಕೊಂಡಿದ್ದೇನೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಸಮನ್ವಯ

ಮಿರರ್‌ ನ್ಯೂಸ್ ನೆಟ್ವರ್ಕ್

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror