ಚಿಲಿಪಿಲಿ | ಈ ಜಾಗದ ಒಡೆಯ ಯಾರೆಂದು ಬಲ್ಲಿರೇನು? |

September 11, 2021
11:38 AM

ತನ್ನ ಸ್ವರದಿಂದ ಸುತ್ತಮುತ್ತಲು ಪರಿಚಿತವಾಗಿರುವ ಹಕ್ಕಿ ಈ ಗೊರವಂಕ, ಮೈನಾ(Common Myna, Indian Myna) ಎಂಬಿತ್ಯಾದಿ ಹೆಸರುಗಳಿಂದ ಗುರುತಿಸಿಕೊಳ್ಳುವುದು. ಈ ಹಕ್ಕಿಯ ಮೂಲ ಏಶಿಯಾ. ಸಾಮಾನ್ಯವಾಗಿ ಭಾರತ, ಇರಾನ್, ಕಜಖಸ್ತಾನದಿಂದ ಮಲೇಶಿಯ ಹಾಗೂ ಚೀನಾದಲ್ಲಿ ಕಂಡುಬರುವುದಾದರೂ ಪ್ರಪಂಚದ ಇನ್ನಿತರ ಪ್ರದೇಶಗಳಲ್ಲೂ ಇದರ ವಾಸ್ತವ್ಯ ವಿಸ್ತರಿಸಿದೆ.

Advertisement

Advertisement

ಕಪ್ಪಗಿನ ಮಿರುಗುವ. ಮೈ ಬಣ್ಣ, ಚೆಂದದ, ಗಟ್ಟಿಯಾದ ಕೇಸರಿ ಕೊಕ್ಕು, ಕಣ್ಣಿನ ಸುತ್ತ ಕೇಸರಿಯ ವೃತ್ತ, ಕಣ್ಣಿನ ಕೆಳಭಾಗದಲ್ಲಿ ಹಾಗೂ ಹಿಂಬದಿ ಅರಶಿನ ಬಣ್ಣದ ಚಿತ್ತಾರ ಕಾಲುಗುರಿನ ಬಣ್ಣವೂ ಕೇಸರಿ ‌ರೆಕ್ಕೆಯ ಕೆಳಭಾಗದಲ್ಲಿ ಸಣ್ಣಕಿರುವ ಬಿಳಿಯ ಬಣ್ಣದ ಮಚ್ಚೆಯಂತ ಪುಟ್ಟ ಪುಕ್ಕಗಳು ಇದು ಗೊರವಾಂಕ ಹಕ್ಕಿ. ಈ ಹಕ್ಕಿಯು ಸುಮಾರು 29 ಸೆ.ಮೀ ನಷ್ಟು ಉದ್ದವಾಗಿರುತ್ತವೆ.  ಸಂಸ್ಕೃತ ದಲ್ಲಿ ಶಾರಿಕಾ, ಸಾರಿಕಾ ಗೋರಾಟಿಕಾ,ತೆಲುಗಿನಲ್ಲಿ ಗೊರಿಂಕಾ ಎಂದೂ, ಹಲಸಿನ ಹಕ್ಕಿ, ಉಣ್ಣೆ ಗೊರವಾ, ಕಾಮಳ್ಳಿ ಹಕ್ಕಿ, ಪೀತ ನೇತ್ರ ಮೊದಲಾದ ಹೆಸರುಗಳಿಂದ ಗುರುತಿಸಿ ಕೊಂಡಿದೆ.ಜನವಸತಿ ಪ್ರದೇಶದಲ್ಲೇ ಹೆಚ್ಚಾಗಿ ಇರ ಬಯಸುವ ಹಕ್ಕಿ ಇದಾಗಿದೆ. ಭಯಂಕರ ಸ್ವರದ ಹಕ್ಕಿ ಇದು. ಎಲ್ಲಿದೆಯೋ ಅಲ್ಲಿ ದೊಡ್ಡ ಸ್ವರದಲ್ಲಿ ಕಿರುಚುವ ಈ ಹಕ್ಕಿ ತನ್ನಿರವನ್ನು ಎಲ್ಲರ ಅರಿವಿಗೆ ಬರುವಂತೆ ಮಾಡುತ್ತದೆ.

ಹುಳು ಹುಪ್ಪಟೆ ಮುಖ್ಯ ಆಹಾರ. ಹುಳಗಳು ಸಿಕ್ಕಿಲ್ಲವೆಂದರೆ ಧಾನ್ಯಗಳನ್ನೇ ಹುಡುಕಿ ತಿನ್ನುತ್ತವೆ. ಈ ಹಕ್ಜಿ ಪೂರ್ತಿ ಶಾಕಾಹಾರಿಯೂ ಅಲ್ಲ, ಮಾಂಸಾಹಾರಿಯೂ ಅಲ್ಲ, ಮಿಶ್ರಾಹಾರಿ. ಹಾಗಾಗಿ ಹೊಸ ಪ್ರದೇಶಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಆಹಾರ ಸಮಸ್ಯೆ ಕಾಡದು. ನೆಲದಲ್ಲಿ ಬಿದ್ದಿರುವ ಕಸಕಡ್ಡಿಗಳು, ನಾರು ಮತ್ತಿತರ ವಸ್ತುಗಳನ್ನು ಉಪಯೋಗಿಸಿ ಗೂಡು ಕಟ್ಟುತ್ತವೆ. ಬೇಸಿಗೆಯಲ್ಲಿ ಮೊಟ್ಟೆ ಇಡುತ್ತವೆ. ಶತ್ರುಗಳಿಂದ ಮೊಟ್ಟೆಯನ್ನು ಕಾಪಾಡಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತವೆ.

Advertisement

# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ : ಯು ರಾಧಾಕೃಷ್ಣ ರಾವ್ ಬಾಳಿಲ.

Advertisement
Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಡಿಕೆಯ ವೈರಲ್‌ ರೋಗಗಳಿಗೆ ಸೂಕ್ತ ಪರಿಹಾರಕ್ಕೆ ಚಿಂತನೆ | ಅಡಿಕೆ ಹಾನಿಕಾರಕವಲ್ಲ- ತಕ್ಷಣ ವರದಿಗೆ ಸೂಚನೆ | ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ |
August 21, 2025
11:13 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ 13,644 ಕೆರೆಗಳ ಒತ್ತುವರಿ | ಈ ಪೈಕಿ 7,986 ಕೆರೆಗಳ ಒತ್ತುವರಿ ತೆರವು
August 21, 2025
10:01 PM
by: The Rural Mirror ಸುದ್ದಿಜಾಲ
ಅಂತರ್ಜಲ ವಿನಿಮಯ, ನಿಯಂತ್ರಣ ತಿದ್ದುಪಡಿ ವಿಧೇಯಕ | ವಿಧಾನಪರಿಷತ್ ನಲ್ಲಿ ಅಂಗೀಕಾರ | ಬೋರ್ ವೆಲ್ ಕೊರೆಯಲು ಇನ್ನು ಅನುಮತಿ ಬೇಕು |
August 21, 2025
9:58 PM
by: The Rural Mirror ಸುದ್ದಿಜಾಲ
ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ
August 21, 2025
9:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group