ತನ್ನ ಸ್ವರದಿಂದ ಸುತ್ತಮುತ್ತಲು ಪರಿಚಿತವಾಗಿರುವ ಹಕ್ಕಿ ಈ ಗೊರವಂಕ, ಮೈನಾ(Common Myna, Indian Myna) ಎಂಬಿತ್ಯಾದಿ ಹೆಸರುಗಳಿಂದ ಗುರುತಿಸಿಕೊಳ್ಳುವುದು. ಈ ಹಕ್ಕಿಯ ಮೂಲ ಏಶಿಯಾ. ಸಾಮಾನ್ಯವಾಗಿ ಭಾರತ, ಇರಾನ್, ಕಜಖಸ್ತಾನದಿಂದ ಮಲೇಶಿಯ ಹಾಗೂ ಚೀನಾದಲ್ಲಿ ಕಂಡುಬರುವುದಾದರೂ ಪ್ರಪಂಚದ ಇನ್ನಿತರ ಪ್ರದೇಶಗಳಲ್ಲೂ ಇದರ ವಾಸ್ತವ್ಯ ವಿಸ್ತರಿಸಿದೆ.
ಕಪ್ಪಗಿನ ಮಿರುಗುವ. ಮೈ ಬಣ್ಣ, ಚೆಂದದ, ಗಟ್ಟಿಯಾದ ಕೇಸರಿ ಕೊಕ್ಕು, ಕಣ್ಣಿನ ಸುತ್ತ ಕೇಸರಿಯ ವೃತ್ತ, ಕಣ್ಣಿನ ಕೆಳಭಾಗದಲ್ಲಿ ಹಾಗೂ ಹಿಂಬದಿ ಅರಶಿನ ಬಣ್ಣದ ಚಿತ್ತಾರ ಕಾಲುಗುರಿನ ಬಣ್ಣವೂ ಕೇಸರಿ ರೆಕ್ಕೆಯ ಕೆಳಭಾಗದಲ್ಲಿ ಸಣ್ಣಕಿರುವ ಬಿಳಿಯ ಬಣ್ಣದ ಮಚ್ಚೆಯಂತ ಪುಟ್ಟ ಪುಕ್ಕಗಳು ಇದು ಗೊರವಾಂಕ ಹಕ್ಕಿ. ಈ ಹಕ್ಕಿಯು ಸುಮಾರು 29 ಸೆ.ಮೀ ನಷ್ಟು ಉದ್ದವಾಗಿರುತ್ತವೆ. ಸಂಸ್ಕೃತ ದಲ್ಲಿ ಶಾರಿಕಾ, ಸಾರಿಕಾ ಗೋರಾಟಿಕಾ,ತೆಲುಗಿನಲ್ಲಿ ಗೊರಿಂಕಾ ಎಂದೂ, ಹಲಸಿನ ಹಕ್ಕಿ, ಉಣ್ಣೆ ಗೊರವಾ, ಕಾಮಳ್ಳಿ ಹಕ್ಕಿ, ಪೀತ ನೇತ್ರ ಮೊದಲಾದ ಹೆಸರುಗಳಿಂದ ಗುರುತಿಸಿ ಕೊಂಡಿದೆ.ಜನವಸತಿ ಪ್ರದೇಶದಲ್ಲೇ ಹೆಚ್ಚಾಗಿ ಇರ ಬಯಸುವ ಹಕ್ಕಿ ಇದಾಗಿದೆ. ಭಯಂಕರ ಸ್ವರದ ಹಕ್ಕಿ ಇದು. ಎಲ್ಲಿದೆಯೋ ಅಲ್ಲಿ ದೊಡ್ಡ ಸ್ವರದಲ್ಲಿ ಕಿರುಚುವ ಈ ಹಕ್ಕಿ ತನ್ನಿರವನ್ನು ಎಲ್ಲರ ಅರಿವಿಗೆ ಬರುವಂತೆ ಮಾಡುತ್ತದೆ.
ಹುಳು ಹುಪ್ಪಟೆ ಮುಖ್ಯ ಆಹಾರ. ಹುಳಗಳು ಸಿಕ್ಕಿಲ್ಲವೆಂದರೆ ಧಾನ್ಯಗಳನ್ನೇ ಹುಡುಕಿ ತಿನ್ನುತ್ತವೆ. ಈ ಹಕ್ಜಿ ಪೂರ್ತಿ ಶಾಕಾಹಾರಿಯೂ ಅಲ್ಲ, ಮಾಂಸಾಹಾರಿಯೂ ಅಲ್ಲ, ಮಿಶ್ರಾಹಾರಿ. ಹಾಗಾಗಿ ಹೊಸ ಪ್ರದೇಶಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಆಹಾರ ಸಮಸ್ಯೆ ಕಾಡದು. ನೆಲದಲ್ಲಿ ಬಿದ್ದಿರುವ ಕಸಕಡ್ಡಿಗಳು, ನಾರು ಮತ್ತಿತರ ವಸ್ತುಗಳನ್ನು ಉಪಯೋಗಿಸಿ ಗೂಡು ಕಟ್ಟುತ್ತವೆ. ಬೇಸಿಗೆಯಲ್ಲಿ ಮೊಟ್ಟೆ ಇಡುತ್ತವೆ. ಶತ್ರುಗಳಿಂದ ಮೊಟ್ಟೆಯನ್ನು ಕಾಪಾಡಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತವೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ : ಯು ರಾಧಾಕೃಷ್ಣ ರಾವ್ ಬಾಳಿಲ.
ದರ್ಶಿತ್ ಕೆ ಎಸ್, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ಬೆಳ್ಳಾರೆದರ್ಶಿತ್…
ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…
ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳ ಮತ್ತು ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕನಿಷ್ಠ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳ ಘಾಟಿ ಕ್ಷೇತ್ರದ…
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಮಳೆ ಹಾಗು ದಟ್ಟ ಮಂಜು ಆವರಿಸಿದ…
ಓರ್ವ ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ್ ದಿ.ಪೆರುವಡಿ ನಾರಾಯಣ ಭಟ್ಟರು…