ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್ ಗಂಟಿ ಹೊಳೆ ಅವರು ಸೋಮೇಶ್ವರ ಕಡಲ ತೀರದಲ್ಲಿ ಚಾಲನೆ ನೀಡಿದರು. ಈ ಸಂದರ್ಭ ಕಡಲಿನ ಸುತ್ತ ಸಂಗ್ರಹವಾದ ಕಸವನ್ನು ಸಂಗ್ರಹಿಸಿ, ವಿಲೇವಾರಿ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ, ಕ್ಲೀನ್ ಕಿನಾರೆ ಕಾರ್ಯಕ್ರಮದ ಮೂಲಕ ಕಡಲಿನ ಪರಿಸರ ಸ್ವಚ್ಛವಾಗಿದ್ದು, ಕಡಲಾಮೆಗಳು ಸಮುದ್ರ ತೀರಕ್ಕೆ ಬಂದು ಮೊಟ್ಟೆ ಇಡುತ್ತಿರುವುದು ಸಂತಸದ ಸಂಗತಿ ಎಂದರು.
ಬೈಂದೂರು ಕ್ಷೇತ್ರದ ಶಿರೂರಿನಿಂದ ಗಂಗೊಳ್ಳಿವರೆಗಿನ ಕಡಲ ತಡಿ ಸ್ವಚ್ಛತೆ ಮಾಡಲಾಗಿದ್ದು, ಸುಮಾರು 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ ಎಂದು ಕ್ಲೀನ್ ಕಿನಾರ ಸಂಯೋಜಕ ಸುಬ್ರಹ್ಮಣ್ಯ ಶ್ಯಾನುಭಾಗ್ ತಿಳಿಸಿದರು.
ಕ್ಲೀನ್ ಕಿನಾರೆ ಸದಸ್ಯೆ ಸೌಮ್ಯ ಗುರುರಾಜ್, ಪ್ರಕೃತಿ ಎಲ್ಲರಿಗೂ ಜೀವಿಸುವ ಹಕ್ಕು ನೀಡಿದೆ. ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ವೇಳೆ ಪರಿಸರ ಪ್ರೇಮಿ ಮಾನಸ ಭಟ್, ಕರಾವಳಿ ಕಾವಲು ಪಡೆಯ ಉಪ ನಿರೀಕ್ಷಕ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.