ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುತ್ತಿಗಾರು ಪೇಟೆಯ ಸ್ವಚ್ಛತಾ ಅಭಿಯಾನ ಮಂದುವರಿದಿದೆ. ಸ್ವಚ್ಛ ಗ್ರಾಮ ಟಾಸ್ಕ್ ಫೋರ್ಸ್ ಕಳೆದ 2 ತಿಂಗಳಿನಿಂದ ನಿರಂತರವಾಗಿ ಪ್ರತೀ ಗುರುವಾರ ಗುತ್ತಿಗಾರು ಪೇಟೆಯಲ್ಲಿ ಸ್ವಚ್ಛತಾ ಜಾಗೃತಿ ಕೆಲಸ ಮಾಡುತ್ತಿದೆ. ಇದೀಗ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಜಾಗೃತಿ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುತ್ತಿದೆ.
ಗುತ್ತಿಗಾರಿನಲ್ಲಿ ಸ್ವಚ್ಛತಾ ಟಾಸ್ಕ್ ಫೋರ್ಸ್ ತಂಡದ ಸದಸ್ಯರಿಂದ ಸ್ವಚ್ಛತಾ ಕಾರ್ಯ. @ZP_DaksnKannada @BJPBhagirathi
Cleaning work by members of the TaskForce team at Guthigar in Sulya, Dakshina Kannada district #GuthigarGramaPanchayath #guthigar #SwachhSurvekshan2023 @PMOIndia pic.twitter.com/213xLBRRKgAdvertisement— theruralmirror (@ruralmirror) August 17, 2023
ಗುತ್ತಿಗಾರು ಗ್ರಾಮ ಪಂಚಾಯತ್, ಸ್ವಚ್ಛಗ್ರಾಮ ಟಾಸ್ಕ್‌ಫೋರ್ಸ್, ವರ್ತಕ ಸಂಘ ಗುತ್ತಿಗಾರು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ಇತರ ಎಲ್ಲಾ ಸಂಘಟನೆಗಳ ಪ್ರಮುಖರು ಪ್ರತೀ ಗುರುವಾರ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ಮೂಲಕ ಸ್ವಚ್ಛ ಗ್ರಾಮದ ಉದ್ದೇಶವನ್ನು ಹೊಂದಿದ್ದಾರೆ. ಈಗಾಗಲೇ ವರ್ತಕರಿಗೆ, ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು, ಬಟ್ಟೆ ಚೀಲಗಳ ಬಳಕೆ ಸೇರಿದಂತೆ ಪರಿಸರ ಸ್ನೇಹಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ. ಇದೀಗ ಪೊರಕೆಯಿಂದ ಸ್ವಚ್ಛತೆ ಮಾಡುವ ಮೂಲಕ ಇನ್ನೊಂದು ಸುತ್ತಿನ ಅಭಿಯಾನ ಆರಂಭಿಸಿದೆ.