ಕಳೆದ ಎರಡು ದಿನಗಳಿಂದ ಸದ್ದು ಮಾಡಿದ ಸುದ್ದಿ ಭಾರೀ ಮಳೆ..!. ಮಲೆನಾಡು, ಕರಾವಳಿ ಪ್ರದೇಶದಲ್ಲಿ ರೆಡ್ ಎಲರ್ಟ್ ಸೇರಿದಂತೆ ವಿವಿಧ ಬಗೆಯ ಎಚ್ಚರಿಕೆಗಳು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಹಾಗಿದ್ದರೆ ಮಳೆಯಾಗದೇ ಇರಲು ಕಾರಣವೇನು..? ಹವಾಮಾನ ಇಲಾಖೆ, ವೆದರ್ ಮಾಹಿತಿ ಪ್ರಕಾರ ಕರಾವಳಿ, ಮಲೆನಾಡು ಭಾಗಕ್ಕೆ ಮೋಡಗಳ ಚಲನೆ ಇತ್ತು. ಎಲ್ಲವೂ ನಿರೀಕ್ಷೆ ಇತ್ತು. ಕೊನೆಯ ಕ್ಷಣದಲ್ಲಿ ಮಳೆ ಮಾತ್ರಾ ಬರಲಿಲ್ಲ..!. ಈ ಬಗ್ಗೆ ಹವಾಮಾನ ವಿಶ್ಲೇಷಕ ಸಾಯಿಶೇಖರ್ ಕರಿಕಳ ಅವರ ಜೊತೆಗಿನ ಮಾತುಕತೆ ಇಲ್ಲಿದೆ….
ಐಎಂಡಿ ಮಾಹಿತಿ ಪ್ರಕಾರ ಹಾಗೂ ಉಪಗ್ರಹದ ಮಾಹಿತಿ ಪ್ರಕಾರ ಶನಿವಾರದಿಂದ ಉತ್ತಮ ಮಳೆ ಕರಾವಳಿ, ಮಲೆನಾಡು ಭಾಗದಲ್ಲಿ ಇರಬೇಕಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮಳೆಗಾಲದ ಈ ಅವಧಿಯಲ್ಲಿ ಸಾಮಾನ್ಯವಾಗಿ ಉತ್ತಮವಾದ ಮಳೆ ನಿರೀಕ್ಷೆಯಂತೆಯೇ ಆಗುತ್ತದೆ. ಆದರೆ ಈಚೆಗೆ ಒಂದೆರಡು ವರ್ಷಗಳಿಂದ ಹವಾಮಾನದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆಯಾಗುತ್ತಿದೆ. ಈ ಬಾರಿಯೂ ಅದೇ ರೀತಿಯ ಸಂದರ್ಭ ಎದುರಾಗಿದೆ. ಸಾಯಿಶೇಖರ್ ಅವರು ಹೇಳುವ ಪ್ರಕಾರ, ಮೋಡಗಳ ಚಲನೆ ಉಪಗ್ರಹದಲ್ಲಿ ತೋರಿಸಿದಂತೆಯೇ ಇತ್ತು. ಆದರೆ ಈಗಲೂ ಸಮುದ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಬಗ್ಗೆ ಹೇಳಬಹುದು, ಮೋಡಗಳು ಸಮುದ್ರದಿಂದ ಮುಂದೆ ಬಂದಿಲ್ಲ, ಇದಕ್ಕೆ ಗಾಳಿಯ ಕೊರತೆ ಕಾರಣವಿದೆ. ಉತ್ತಮ ಗಾಳಿ ಬೀಸಿದರೆ ಮೋಡದ ಚಲನೆಯಾಗು ಮಳೆಯಾಗಬೇಕಿತ್ತು. ಆದರೆ ಗಾಳಿಯ ಒತ್ತಡ ಕಡಿಮೆ ಇರಲು ಕಾರಣವೇನು? ಈ ಬಗ್ಗೆ ತಜ್ಞರು ವಿಶ್ಲೇಷಣೆ ಮಾಡಬೇಕಿದೆ, ವಿಜ್ಞಾನಿಗಳು ಈ ಬಗ್ಗೆ ತಿಳಿಸಬೇಕಿದೆ ಎನ್ನುತ್ತಾರೆ ಸಾಯಿಶೇಖರ್.…….ಮುಂದೆ ಓದಿ…..
ಈಗ ಉತ್ತರ ಭಾರತದಲ್ಲಿ ಬಿಸಿಗಾಳಿಯ ವಾತಾವರಣ ಇದೆ. ಹೀಗಾಗಿ ಗಾಳಿಯ ಒತ್ತಡ ಸಹಜವಾಗಿಯೇ ಕಡಿಮೆಯಾಗುವ ಸಾಧ್ಯತೆ ಉದೆ. ಈ ಕಾರಣದಿಂದಲೂ ಈಗ ಮಳೆಯ ಸೂಚನೆ ಇದ್ದರೂ ಗಾಳಿಯ ಒತ್ತಡ ಕಡಿಮೆಯಾಗಿರುವ ಸಾಧ್ಯತೆ ಇದೆ. ಹಾಗೆಂದು ಇದು ಅಧಿಕೃತವಾಗಿ ನಾವು ಹೇಳಲು ಬರುವುದಿಲ್ಲ, ತಜ್ಞರ ಅಧ್ಯಯನದ ಮೂಲಕವೇ ಸರಿಯಾದ ಮಾಹಿತಿ ಸಿಗಬಹುದು.
ಇಲಾಖೆಗಳ ಪ್ರಕಾರ ಈ ಬಾರಿ ಉತ್ತಮ ಮಳೆಯಾಗಬೇಕಿತ್ತು. ಇದುವರೆಗೂಈ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ. ಇದಕ್ಕೆ ಕಾರಣ ಏನು..? ಎಂಬುದರ ಮಾಹಿತಿ ಲಭ್ಯವಾದರೆ ರೈತರು ಕೂಡಾ ಮುಂಜಾಗ್ರತಾ ಕ್ರಮಗಳೊಂದಿಗೆ ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗಬಹುದು.