ಹವಾಮಾನ ಬದಲಾವಣೆಯ ಪರಿಣಾಮ | ಬಾಂಗ್ಲಾದಲ್ಲಿ ಹೆಚ್ಚಾಗಲಿರುವ ಚಂಡಮಾರುತ |

April 15, 2025
2:16 PM
ಹವಾಮಾನ ಬದಲಾವಣೆ ಪ್ರಪಂಚದ ಎಲ್ಲೆಡೆಯೂ ಸವಾಲಾಗುತ್ತಿದೆ.ತಾಪಮಾನ ಏರಿಕೆಯ ಕಾರಣದಿಂದ ಚಂಡಮಾರುತಗಳ ಸಂಖ್ಯೆ  ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಬಿರುಗಾಳಿ ಮತ್ತು ಪ್ರವಾಹದ ಪರಿಣಾಮಗಳು ಹೆಚ್ಚಾಗಬಹುದು ಎಂದು ವಿಜ್ಞಾನಿಗಳ ಹೇಳಿದ್ದಾರೆ.

ಇಂದು ಇಡೀ ಪ್ರಪಂಚದಲ್ಲಿ ಹವಾಮಾನ ಬದಲಾವಣೆ ಬಹುದೊಡ್ಡ ಸವಾಲಾಗಿದೆ. ಭಾರತದಲ್ಲಿ ಕೃಷಿ ಬೆಳವಣಿಗೆಯ ಮೇಲೆ ಹವಾಮಾನ ಬದಲಾವಣೆ ಗಂಭೀರ ಪರಿಣಾಮ ಬೀರಿದರೆ  ವಿವಿಧ ದೇಶದಲ್ಲಿ ಬೇರೆ ಬೇರೆ ಸವಾಲುಗಳು ಹವಾಮಾನದ ಕಾರಣದಿಂದ ಇದೆ. ಬಾಂಗ್ಲಾದೇಶಕ್ಕೆ ಚಂಡಮಾರುತ ಸವಾಲಾಗಿ ಪರಿಣಮಿಸಲಿದೆ. ಮುಂದಿನ ದಿನಗಳಲ್ಲಿ ಚಂಡಮಾರುತಗಳು 10 ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿ ಹೇಳಿದೆ.…..ಮುಂದೆ ಓದಿ….

Advertisement
Advertisement

ಹವಾಮಾನ ಬದಲಾವಣೆಯ ಕಾರಣದಿಂದ ಬಾಂಗ್ಲಾದೇಶದಲ್ಲಿ ಚಂಡಮಾರುತದ ಸೃಷ್ಟಿ ಹಾಗೂ ಚಂಡಮಾರುತದ ಹೊಡೆತ ಈಗಿನ ಸ್ಥಿತಿಗಿಂತ  10 ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಒನ್ ಅರ್ಥ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ತಿಳಿಸಲಾಗಿದೆ. ಪ್ರತಿ 100 ವರ್ಷಗಳಿಗೊಮ್ಮೆ ಸಂಭವಿಸುತ್ತಿದ್ದ ಭೀಕರ ಚಂಡಮಾರುತಗಳು ಮುಂದೆ ಪ್ರತಿ 10 ವರ್ಷಗಳಿಗೊಮ್ಮೆ  ಬಾಂಗ್ಲಾದೇಶವನ್ನು ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನ ವರದಿ ಹೇಳಿದೆ.

ಈ ಅಧ್ಯಯನದ ಪ್ರಕಾರ, ತೀವ್ರವಾದ ಚಂಡಮಾರುತಗಳು ಇನ್ನೂ ಹೆಚ್ಚಾಗಿ ಸಂಭವಿಸಬಹುದು ಎಂದು ಹೇಳಿದೆ. ಚಂಡಮಾರುತಗಳ ಸಂಖ್ಯೆ  ಹೆಚ್ಚಾಗುವುದರಿಂದ ಬಿರುಗಾಳಿ ಮತ್ತು ಪ್ರವಾಹದ ಪರಿಣಾಮಗಳು ಹೆಚ್ಚಾಗಬಹುದು ಎಂದು ವಿಜ್ಞಾನಿಗಳ ಹೇಳಿದ್ದಾರೆ. ಇದೇ ರೀತಿ ಮುಂದುವರಿದರೆ
ಸುಮಾರು ಎಂಟು ಮಿಲಿಯನ್ ಜನರಿಗೆ ನೆಲೆಯಾಗಿರುವ ಬಾಂಗ್ಲಾದೇಶದ ತಗ್ಗು ಪ್ರದೇಶದ ಕರಾವಳಿಯು,  ಚಂಡಮಾರುತ ಮತ್ತು ಚಂಡಮಾರುತದ ಹಾನಿಗಳಿಗೆ ಗುರಿಯಾಗುವ ಸಾಧ್ಯತೆ ಇದೆ. ಈಗಾಗಲೇ ಬಂಗಾಳಕೊಲ್ಲಿಯಲ್ಲಿ ಆರು ಚಂಡಮಾರುತಗಳು ಸುಮಾರು 140,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿವೆ.

ಕೃಷಿ-ಗ್ರಾಮೀಣ-ಪರಿಸರ ಸುದ್ದಿಗೆ ಆದ್ಯತೆ ನೀಡುವ ನಮ್ಮ www.theruralmirror.com ಡಿಜಿಟಲ್‌ ಮಾಧ್ಯಮದ WhatsApp Channel ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ಭೂಮಿಯು ಬಿಸಿಯಾದಂತೆಯೇ ಚಂಡಮಾರುತಗಳ ಸಂಖ್ಯೆಯೂ ಹೆಚ್ಚಾಗುತ್ತಾ ಸಾಗುತ್ತದೆ. ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಾನ್ಸೂನ್ ಸಂಭವಿಸಿದರೆ, ಬಂಗಾಳಕೊಲ್ಲಿಯಲ್ಲಿ ಉಷ್ಣವಲಯದ ಚಂಡಮಾರುತಗಳು ಸಾಮಾನ್ಯವಾಗಿ ಮೇ ಮತ್ತು ಜೂನ್ ನಡುವಿನ ಮಾನ್ಸೂನ್ ಪೂರ್ವ ಮತ್ತು ಅಕ್ಟೋಬರ್-ನವೆಂಬರ್ ನಡುವಿನ ಮಾನ್ಸೂನ್ ನಂತರದ ಅವಧಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ. ಹವಾಮಾನ ಬದಲಾವಣೆಯು ಮುಂಗಾರು ವಿಳಂಬಕ್ಕೆ ಹಾಗೂ ಮುಂದೂಡುವುದಕ್ಕೂ ಕಾರಣವಾಗುತ್ತದೆ. ಹೀಗಾಗಿ ಮಳೆಯ ಪರಿವರ್ತನೆ, ಮಳೆಯ ಕಾಲದ ಪರಿವರ್ತನೆ ಕೂಡಾ ಸಾಧ್ಯವಿದೆ. ಹೀಗಾಗಿ ಹವಾಮಾನ ಬದಲಾವಣೆಯು ವಿವಿಧ ರೀತಿಯಲ್ಲಿ ಪರಿಣಾಮವನ್ನು ನೀಡುತ್ತಿದೆ. ಈಚೆಗಿನ ದಿನಗಳಲ್ಲಿ ಈ ಬದಲಾವಣೆಗಳು ಹೆಚ್ಚಾಗುತ್ತಿರುವುದು ಭವಿಷ್ಯದಲ್ಲಿ ಯೋಚಿಸಬೇಕಾದ ವಿಷಯವಾಗಿದೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group