ಇಂದು ಇಡೀ ಪ್ರಪಂಚದಲ್ಲಿ ಹವಾಮಾನ ಬದಲಾವಣೆ ಬಹುದೊಡ್ಡ ಸವಾಲಾಗಿದೆ. ಭಾರತದಲ್ಲಿ ಕೃಷಿ ಬೆಳವಣಿಗೆಯ ಮೇಲೆ ಹವಾಮಾನ ಬದಲಾವಣೆ ಗಂಭೀರ ಪರಿಣಾಮ ಬೀರಿದರೆ ವಿವಿಧ ದೇಶದಲ್ಲಿ ಬೇರೆ ಬೇರೆ ಸವಾಲುಗಳು ಹವಾಮಾನದ ಕಾರಣದಿಂದ ಇದೆ. ಬಾಂಗ್ಲಾದೇಶಕ್ಕೆ ಚಂಡಮಾರುತ ಸವಾಲಾಗಿ ಪರಿಣಮಿಸಲಿದೆ. ಮುಂದಿನ ದಿನಗಳಲ್ಲಿ ಚಂಡಮಾರುತಗಳು 10 ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿ ಹೇಳಿದೆ.…..ಮುಂದೆ ಓದಿ….
ಹವಾಮಾನ ಬದಲಾವಣೆಯ ಕಾರಣದಿಂದ ಬಾಂಗ್ಲಾದೇಶದಲ್ಲಿ ಚಂಡಮಾರುತದ ಸೃಷ್ಟಿ ಹಾಗೂ ಚಂಡಮಾರುತದ ಹೊಡೆತ ಈಗಿನ ಸ್ಥಿತಿಗಿಂತ 10 ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಒನ್ ಅರ್ಥ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ತಿಳಿಸಲಾಗಿದೆ. ಪ್ರತಿ 100 ವರ್ಷಗಳಿಗೊಮ್ಮೆ ಸಂಭವಿಸುತ್ತಿದ್ದ ಭೀಕರ ಚಂಡಮಾರುತಗಳು ಮುಂದೆ ಪ್ರತಿ 10 ವರ್ಷಗಳಿಗೊಮ್ಮೆ ಬಾಂಗ್ಲಾದೇಶವನ್ನು ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನ ವರದಿ ಹೇಳಿದೆ.
ಈ ಅಧ್ಯಯನದ ಪ್ರಕಾರ, ತೀವ್ರವಾದ ಚಂಡಮಾರುತಗಳು ಇನ್ನೂ ಹೆಚ್ಚಾಗಿ ಸಂಭವಿಸಬಹುದು ಎಂದು ಹೇಳಿದೆ. ಚಂಡಮಾರುತಗಳ ಸಂಖ್ಯೆ ಹೆಚ್ಚಾಗುವುದರಿಂದ ಬಿರುಗಾಳಿ ಮತ್ತು ಪ್ರವಾಹದ ಪರಿಣಾಮಗಳು ಹೆಚ್ಚಾಗಬಹುದು ಎಂದು ವಿಜ್ಞಾನಿಗಳ ಹೇಳಿದ್ದಾರೆ. ಇದೇ ರೀತಿ ಮುಂದುವರಿದರೆ
ಸುಮಾರು ಎಂಟು ಮಿಲಿಯನ್ ಜನರಿಗೆ ನೆಲೆಯಾಗಿರುವ ಬಾಂಗ್ಲಾದೇಶದ ತಗ್ಗು ಪ್ರದೇಶದ ಕರಾವಳಿಯು, ಚಂಡಮಾರುತ ಮತ್ತು ಚಂಡಮಾರುತದ ಹಾನಿಗಳಿಗೆ ಗುರಿಯಾಗುವ ಸಾಧ್ಯತೆ ಇದೆ. ಈಗಾಗಲೇ ಬಂಗಾಳಕೊಲ್ಲಿಯಲ್ಲಿ ಆರು ಚಂಡಮಾರುತಗಳು ಸುಮಾರು 140,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿವೆ.
ಭೂಮಿಯು ಬಿಸಿಯಾದಂತೆಯೇ ಚಂಡಮಾರುತಗಳ ಸಂಖ್ಯೆಯೂ ಹೆಚ್ಚಾಗುತ್ತಾ ಸಾಗುತ್ತದೆ. ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಾನ್ಸೂನ್ ಸಂಭವಿಸಿದರೆ, ಬಂಗಾಳಕೊಲ್ಲಿಯಲ್ಲಿ ಉಷ್ಣವಲಯದ ಚಂಡಮಾರುತಗಳು ಸಾಮಾನ್ಯವಾಗಿ ಮೇ ಮತ್ತು ಜೂನ್ ನಡುವಿನ ಮಾನ್ಸೂನ್ ಪೂರ್ವ ಮತ್ತು ಅಕ್ಟೋಬರ್-ನವೆಂಬರ್ ನಡುವಿನ ಮಾನ್ಸೂನ್ ನಂತರದ ಅವಧಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ. ಹವಾಮಾನ ಬದಲಾವಣೆಯು ಮುಂಗಾರು ವಿಳಂಬಕ್ಕೆ ಹಾಗೂ ಮುಂದೂಡುವುದಕ್ಕೂ ಕಾರಣವಾಗುತ್ತದೆ. ಹೀಗಾಗಿ ಮಳೆಯ ಪರಿವರ್ತನೆ, ಮಳೆಯ ಕಾಲದ ಪರಿವರ್ತನೆ ಕೂಡಾ ಸಾಧ್ಯವಿದೆ. ಹೀಗಾಗಿ ಹವಾಮಾನ ಬದಲಾವಣೆಯು ವಿವಿಧ ರೀತಿಯಲ್ಲಿ ಪರಿಣಾಮವನ್ನು ನೀಡುತ್ತಿದೆ. ಈಚೆಗಿನ ದಿನಗಳಲ್ಲಿ ಈ ಬದಲಾವಣೆಗಳು ಹೆಚ್ಚಾಗುತ್ತಿರುವುದು ಭವಿಷ್ಯದಲ್ಲಿ ಯೋಚಿಸಬೇಕಾದ ವಿಷಯವಾಗಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…
ಅಂಚೆ ಇಲಾಖೆಯಿಂದ ಬೆಳೆಗಾರರಿಂದ ಗ್ರಾಹಕರು ನೇರ ಮಾವು ಮಾರಾಟ ಯಶಸ್ವೀ ಸೇವೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು : ಗುಜ್ಜೆ 1 ಕಪ್ ಬೇಯಿಸಿ…
ಜಮ್ಮು- ಕಾಶ್ಮೀರದ ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…
23.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…