ಹವಾಮಾನ ಬದಲಾವಣೆಯು ಪ್ರಪಂಚಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಅದರಲ್ಲೂ ಕೃಷಿ ಕ್ಷೇತ್ರದ ಮೇಲೆ ಗಂಭೀರವಾದ ಪರಿಣಾಮಗಳನ್ನು ತಂದೊಡ್ಡುತ್ತಿದೆ.ಇದರಿಂದಾಗಿ ಕೃಷಿ ಆದಾಯದ ಮೇಲೆ ಪರಿಣಾಮ, ಹೆಚ್ಚು ರಾಸಾಯನಿಕ ಸಿಂಪಡಣೆಯೂ ಅನಿವಾರ್ಯವಾಗಿದೆ. ಆದರೂ ಉಷ್ಣತೆಯ ಕಾರಣದಿಂದ ಕೃಷಿ ಇಳುವರಿಯ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಈಗ ಪಶ್ಚಿಮಘಟ್ಟಗಳ ರಕ್ಷಣೆಯೇ ಮೊದಲ ಆದ್ಯತೆಯಾಗಿದೆ.…..ಮುಂದೆ ಓದಿ….
ಹವಾಮಾನ ಬದಲಾವಣೆಯನ್ನು ತಡೆಯಲು ಪಶ್ಚಿಮ ಘಟ್ಟಗಳ ರಕ್ಷಣೆಯೇ ಸದ್ಯದ ಪರಿಹಾರ ಎಂಬುದರ ಕಡೆಗೆ ತಜ್ಞರು ಈಗಾಗಲೇ ಸಲಹೆ ನೀಡಿದ್ದಾರೆ. ಪ್ರಪಂಚದ ಎಲ್ಲೋ ನಡೆಯುವ ಹವಾಮಾನ ಘಟನೆಗಳು ಇನ್ನೆಲ್ಲೋ ಪರಿಣಾಮ ಬೀರುತ್ತದೆ. ಆದರೆ ಪರಿಸರವು ತಡೆಗೋಡೆಯಾಗಿ ನಿಂತರೆ ಆಯಾ ಪ್ರದೇಶದಲ್ಲಿ ಸ್ವಲ್ಪಮಟ್ಟಿನ ಪರಿಹಾರವು ಕಾಣಲು ಸಾಧ್ಯವಿದೆ. ಹೀಗಾಗಿ ಪಶ್ಚಿಮ ಘಟ್ಟಗಳ ರಕ್ಷಣೆ, ಅಲ್ಲಿರುವ ಹಾಗೂ ಆಸುಪಾಸಿನ ಪ್ರದೇಶದಲ್ಲಿರುವ ಅರಣ್ಯ, ಮರಗಳ ರಕ್ಷಣೆ ಇಂದಿನಿ ಅನಿವಾರ್ಯವಾಗಿದೆ. 2025 ಪರಿಸರ ರಕ್ಷಣೆಯ ವರ್ಷವಾಗಲಿ. ಈಗಾಗಲೇ ಒಡಿಸ್ಸಾ ಸರ್ಕಾರದ ಪರಿಸರ ಸಚಿವರು ಉಡುಗೊರೆಯಾಗಿ ಗಿಡಗಳನ್ನು ನೀಡಿ ಎಂದು ಕರೆ ನೀಡಿದ್ದಾರೆ. ಅದೇ ಮಾದರಿಗಳು ಪರಿಸರ ಪ್ರೀತಿಯನ್ನು ಹೆಚ್ಚಿಸಲಿ.
ಕಳೆದ ವರ್ಷವು ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗುವ ನೈಸರ್ಗಿಕ ರೋದನಗಳ ಪಟ್ಟಿಯೇ ದೊಡ್ಡದಿದೆ. ಈ ತಾಪಮಾನವು ಅರಣ್ಯದ ಆರೋಗ್ಯದ ಮೇಲೆಯೂ ಪರಿಣಾಮ ಬೀರಿದೆ. ಜುಲೈನಲ್ಲಿ 400 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ವಯನಾಡ್ ಭೂಕುಸಿತವು ಕೂಡಾ ಇದರದ್ದೇ ಒಂದು ಭಾಗ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪರಿಸರ ವಿಪತ್ತು ಸುಮಾರು 11 ಪ್ರತಿಶತದಷ್ಟು ಉಲ್ಬಣಗೊಂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪಶ್ಚಿಮ ಘಟ್ಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವಿಜ್ಞಾನಿಗಳಿಗೆ, ಇತ್ತೀಚಿನ ವರ್ಷಗಳಲ್ಲಿ ಸಂಭವಿಸುವ ಪ್ರತಿಯೊಂದು ಭೂಕುಸಿತಕ್ಕೂ, ಪರಿಸರ ದುರಂತಗಳಿಗೂ ಜಾಗತಿಕ ತಾಪಮಾನವು ಕಾರಣವಾಗಿದೆ.
2018 ರಿಂದ ದಿನಕ್ಕೆ 300 ಮಿಮೀ ಗಿಂತ ಹೆಚ್ಚಿನ ಮಳೆ ಸುರಿದ ಕಡೆಗಳಲ್ಲಿ ಭೂಕುಸಿತಗಳು ಹೆಚ್ಚಾಗಿವೆ. ಇದಕ್ಕೆ ಪ್ರಮುಖ ಕಾರಣ ಆಯಾ ಪ್ರದೇಶದ ಪರಿಸರ, ಅರಣ್ಯ. ಹೀಗಾಗಿ ಈಚೆಗಿನ ದಿನಗಳಲ್ಲಿ ಕರ್ನಾಟಕ ಮತ್ತು ಕೇರಳದ ಪಶ್ಚಿಮ ಘಟ್ಟಗಳ ಉದ್ದಕ್ಕೂ ಇರುವ ಆರು ಅರಣ್ಯ ಪ್ರದೇಶಗಳು ಭಾರತೀಯ ಅರಣ್ಯ ಸಮೀಕ್ಷೆ ಸಿದ್ಧಪಡಿಸಿದ “ಹವಾಮಾನ ಬದಲಾವಣೆಯ ಹಾಟ್‌ಸ್ಪಾಟ್‌ಗಳು” ನಕ್ಷೆಯಲ್ಲಿ ಸ್ಥಾನ ಪಡೆದಿವೆ. ಇಂದು ಇಲ್ಲಿನ ಅರಣ್ಯಗಳಲ್ಲಿ 1.5 ಕ್ಕಿಂತ ಹೆಚ್ಚು ತಾಪಮಾನ ಏರಿಕೆ ದಾಖಲಾಗಿದೆ ಎಂದು ಸೂಚಿಸುತ್ತದೆ. ಅದರ ಜೊತೆಗೆ ಇತ್ತೀಚಿನ ದಶಕಗಳಲ್ಲಿ ಶೇಕಡ 20 ಅಥವಾ ಅದಕ್ಕಿಂತ ಹೆಚ್ಚಿನ ಮಳೆಯೂ ದಾಖಲಾಗಿದೆ. ಇದಕ್ಕೆ ಸರಿಯಾಗಿ ಕಳೆದ 3-4 ವರ್ಷಗಳಲ್ಲಿ ಮಳೆಯ ಏರುಪೇರು ಸ್ಥಳೀಯವಾಗಿಯೂ ಕಂಡುಬರುತ್ತದೆ.
2020 ರಲ್ಲಿಯೇ ಸಿದ್ಧಪಡಿಸಲಾದ ವರದಿಯ ಪ್ರಕಾರ ಅರುಣಾಚಲ ಪ್ರದೇಶ, ನೈಋತ್ಯ ಹಿಮಾಚಲ ಪ್ರದೇಶ, ದಕ್ಷಿಣ ಛತ್ತೀಸ್‌ಗಢ, ಈಶಾನ್ಯ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಪಕ್ಕದ ಭಾಗಗಳು, ಉತ್ತರ ತಮಿಳುನಾಡು ಮತ್ತು ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವನ್ನು ಹವಾಮಾನ ಬದಲಾವಣೆಯ ಹಾಟ್‌ಸ್ಪಾಟ್ ಪ್ರದೇಶಗಳು ಎಂದು ವರ್ಗೀಕರಿಸಲಾಗಿತ್ತು. ಅಲ್ಲಿಯೂ ಕುಸಿತಗಳು, ಪರಿಸರ ದುರಂತಗಳು ಕಂಡುಬಂದಿದ್ದವು. ಈಚೆಗೆ ಕೇರಳ ಮತ್ತು ಕರ್ನಾಟಕದಲ್ಲಿಯೂ ಹವಾಮಾನ ಬದಲಾವಣೆಯ ಹಾಟ್‌ಸ್ಪಾಟ್ ಮತ್ತು ಬಿಕ್ಕಟ್ಟು ವ್ಯಾಪಕವಾಗಿದೆ. ಇದಕ್ಕೆ ಪ್ರಮುಖವಾದ ಕಾರಣ ಅರಣ್ಯದ ನಾಶ. ಮರಗಳ ನಾಶ. ಪರಿಸರದ ನಡುವೆ ನಡೆಯುವ ವಿಪರೀತವಾದ ಮಾನವ ಹಸ್ತಕ್ಷೇಪ.
ಹೀಗಾಗಿ ಈ ಬಾರಿ ಅಂದರೆ 2025 ರಲ್ಲಿ ಹೆಚ್ಚು ಗಿಡಗಳನ್ನು ನೆಡುವ ಮೂಲಕ, ಕಡಿಮೆ ಮರಗಳನ್ನು ನಾಶ ಮಾಡುವ ಮೂಲಕ ಪರಿಸರ ಬದಲಾವಣೆ, ತಾಪಮಾನ ಏರಿಕೆ ತಡೆಗೆ ಪ್ರತಿಯೊಬ್ಬರೂ ಕೆಲಸ ಮಾಡುವ ಮೂಲಕ ಕೃಷಿ ಕ್ಷೇತ್ರವನ್ನೂ ಉಳಿಸುವ, ಬೆಳೆಸುವ ಕೆಲಸ ನಡೆಯಬೇಕಿದೆ.
Agriculture is in trouble. Crop loss is increasing. Either excessive rain or drought. Arecanut growers who were growing Arecanut comfortably in Western Ghats are facing many problems recently. As a solution to this, various chemical sprays are thought to be the solution. Thus further difficulties are increasing.
ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಜ. 4 ಮತ್ತು 5 ರಂದು…
ಡಿಜಿಟಲ್ ಗೀಳು ಮಕ್ಕಳ ಬುದ್ಧಿಯನ್ನು ಹಾಳು ಮಾಡುವ ಒಂದು ಕಾಯಿಲೆ. ಮನೆಯಲ್ಲಿ ಕಲಿತು…
ಭಾರತದ ರಫ್ತು ಪದಾರ್ಥಗಳಲ್ಲಿ ಕಾಫಿ ಮುಖ್ಯ ಬೆಳೆಗಳಲ್ಲಿ ಒಂದಾಗಿದ್ದು, 2021-22ನೇ ಸಾಲಿನಲ್ಲಿ ಒಂದು…
ಮಲೇಷ್ಯಾದಿಂದ ಬೆಂಗಳೂರಿಗೆ ಕಳ್ಳಸಾಗಣೆಯಾಗುತ್ತಿದ್ದ ಅಳಿವಿನಂಚಿನಲ್ಲಿರುವ 379 ವನ್ಯಜೀವಿಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.ರೈತರ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು…