ಹವಾಮಾನ ಬದಲಾವಣೆಯು ಭವಿಷ್ಯದಲ್ಲಿ ಬಹುದೊಡ್ಡ ಆರ್ಥಿಕ ಪರಿಣಾಮ ಬೀರಲಿದೆ..! |

June 20, 2024
10:25 AM
ಹವಾಮಾನ ಬದಲಾವಣೆಯು ಮುಂದಿನ 25 ವರ್ಷಗಳಲ್ಲಿ ಭವಿಷ್ಯದ ಜಾಗತಿಕ ಆದಾಯವನ್ನು ಸುಮಾರು 20 ಶೇಕಡಾ ಕಡಿಮೆ ಮಾಡುತ್ತದೆ.ಅದಕ್ಕಾಗಿಯೇ ಈಗ ಹವಾಮಾನ ಬದಲಾವಣೆಯ ನಿಯಂತ್ರಣದ ಕಡೆಗೆ ಹೋರಾಡುವುದು ಇಂದಿನ ಅತೀ ತುರ್ತಿನ ಕೆಲಸವಾಗಿದೆ ಎಂದು ಅಧ್ಯಯನಕಾರರು ಎಚ್ಚರಿಸಿದ್ದಾರೆ.

ಹವಾಮಾನ ಬದಲಾವಣೆಯು ಪ್ರಪಂಚದಲ್ಲಿ ಬಹುದೊಡ್ಡ ಆರ್ಥಿಕವಾದ ಹೊಡೆತವು ಮುಂದಿನ 25 ವರ್ಷದಲ್ಲಿ ನೀಡಲಿದೆ ಎಂದು ಅಧ್ಯಯನವೊಂದು ಹೇಳಿದೆ.

Advertisement
Advertisement
Advertisement

ಹವಾಮಾನ ಬದಲಾವಣೆಯು ಮುಂದಿನ 25 ವರ್ಷಗಳಲ್ಲಿ ಭವಿಷ್ಯದ ಜಾಗತಿಕ ಆದಾಯವನ್ನು ಸುಮಾರು 20 ಶೇಕಡಾ ಕಡಿಮೆ ಮಾಡುತ್ತದೆ. ಜರ್ಮನಿಯ ಪಾಟ್ಸ್‌ಡ್ಯಾಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್‌ನ ಸಂಶೋಧಕರು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಿದ ಅಧ್ಯಯನ ವರದಿಯ ಪ್ರಕಾರ, ಹವಾಮಾನ ಬದಲಾವಣೆಯ ಆರ್ಥಿಕ ಕಡಿತವು 2049 ರ ವೇಳೆಗೆ ವರ್ಷಕ್ಕೆ ಸುಮಾರು $38 ಟ್ರಿಲಿಯನ್‌ಗೆ ತಲುಪಬಹುದು.

Advertisement

“ಹವಾಮಾನ ಬದಲಾವಣೆಯು ಮುಂದಿನ 25 ವರ್ಷಗಳಲ್ಲಿ ಪ್ರಪಂಚದಾದ್ಯಂತದ ಬಹುತೇಕ ಎಲ್ಲಾ ದೇಶಗಳಲ್ಲಿ ಭಾರಿ ಆರ್ಥಿಕ ಹಾನಿಯನ್ನು ಉಂಟುಮಾಡುತ್ತದೆ ಎಂದು ವಿಶ್ಲೇಷಣೆ ಹೇಳುತ್ತದೆ. ಜರ್ಮನಿ ಮತ್ತು ಯುಎಸ್‌ನಂತಹ ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 11% ಮತ್ತು ಫ್ರಾನ್ಸ್‌ನ ಸರಾಸರಿ ಆದಾಯ ಕಡಿತ 13% ಇರಬಹುದು ಎಂದು ಅಧ್ಯಯನದ ಸಹ-ಲೇಖಕಿ, ಹವಾಮಾನ ವಿಜ್ಞಾನಿ ಲಿಯೋನಿ ವೆನ್ಜ್ ಹೇಳಿದ್ದಾರೆ.

ಕಳೆದ ಹನ್ನೆರಡು ವರ್ಷಗಳಿಂದ, ವಿಜ್ಞಾನಿಗಳು ಮತ್ತು ಇತರರು ಹೀಟ್‌ವೇವ್, ಪ್ರವಾಹಗಳು, ಬರಗಳು, ಚಂಡಮಾರುತಗಳು ಅತಿ ದೊಡ್ಡ ಹವಾಮಾನ ಪ್ರಭಾವ‌ದ ಮೇಲೆ ಕೇಂದ್ರೀಕರಿಸಿ ಅಧ್ಯಯನ ನಡೆಸಿದ್ದರು. ಆರ್ಥಿಕ ಹೊಡೆತಕ್ಕೂ ಕಾರಣ ನೀಡಿದ ಸಂಶೋಧಕರು,  ಮುಖ್ಯವಾಗಿ ಸರಾಸರಿ ತಾಪಮಾನ ಏರಿಕೆಯಿಂದಲೇ ಹೆಚ್ಚಿನ ಹಾನಿಗಳು ನಡೆಯುತ್ತವೆ. ಪ್ರಮುಖವಾಗಿ ಬೆಳೆಗಳಿಗೆ ಹಾನಿ ಮಾಡುತ್ತದೆ ಮತ್ತು ಕಾರ್ಮಿಕರಿಗೆ, ಸಾಮಾನ್ಯ ಜನರಿಗೆ ಸಂಬಂಧಿಸಿದ್ದಾಗಿರುತ್ತದೆ ಎಂದು ವರದಿಯಲ್ಲಿ ಹೇಳಿದ್ದಾರೆ.

Advertisement

ವಿಶ್ವದ ಬಡ ದೇಶಗಳು ಶ್ರೀಮಂತ ದೇಶಗಳಿಗಿಂತ 61% ದೊಡ್ಡ ಆದಾಯ ನಷ್ಟವನ್ನು ಅನುಭವಿಸುತ್ತವೆ ಎಂದು ಅಧ್ಯಯನವು ಲೆಕ್ಕಾಚಾರ ಮಾಡಿದೆ. ಬಡ ದೇಶಗಳು ಹೆಚ್ಚು ಪ್ರಮಾಣದ ನಷ್ಟವನ್ನು ಹವಾಮಾನದ ವೈಪರೀತ್ಯದ ಕಾರಣದಿಂದ ಅನುಭವಿಸುತ್ತಿವೆ. ಉತ್ಪಾದನೆ, ಉತ್ಪಾದಕತೆ ಎರಡೂ ಇಳಿಕೆಯಾಗುತ್ತಿದೆ.

ಹವಾಮಾನ ಬದಲಾವಣೆಯು ನಿಧಾನಪ್ರಕ್ರಿಯೆಯಲ್ಲ. ಅವು ತಕ್ಷಣವೇ ಗೋಚರವಾಗುತ್ತದೆ, ಪರಿಣಾಮಗಳು ನಿಧಾನವಾಗಿವೆ. ತಾಪಮಾನ ಹೆಚ್ಚಾದಂತೆಯೇ ಅದರ ನಿಯಂತ್ರಣದ ಮೇಲೆ ಕ್ರಮ ಕೈಗೊಳ್ಳದೇ ಹೋದರೆ ಅಪಾಯವೂ ಹೆಚ್ಚಾಗಲಿದೆ ಎಂದು ಪರಿಸರ ಅಧ್ಯಯನದ ಪ್ರಮುಖರು ಹೇಳಿದ್ದಾರೆ. ಅದಕ್ಕಾಗಿಯೇ ಈಗ ಹವಾಮಾನ ಬದಲಾವಣೆಯ ನಿಯಂತ್ರಣದ ಕಡೆಗೆ ಹೋರಾಡುವುದು ಇಂದಿನ ಅತೀ ತುರ್ತಿನ ಕೆಲಸವಾಗಿದೆ ಎಂದು ಅಧ್ಯಯನಕಾರರು ಎಚ್ಚರಿಸಿದ್ದಾರೆ.

Advertisement

Source :AP

Climate change is projected to have far-reaching economic consequences in the next 25 years. From increased natural disasters to decreased agricultural productivity, the financial toll of climate change is expected to be substantial. A recent report by the World Bank estimates that the global economy could shrink by as much as 5% by 2050 if no action is taken to mitigate climate change. Furthermore, developing countries are likely to be hit the hardest, as they often lack the resources to adapt to changing environmental conditions. It is imperative that world leaders take swift and decisive action to address climate change and protect the global economy from its devastating effects.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror