Advertisement
ಸುದ್ದಿಗಳು

ಕೃಷಿಯ ಮೇಲೆ ಹೆಚ್ಚುತ್ತಿರುವ ಹವಾಮಾನ ಬದಲಾವಣೆಯ ಪರಿಣಾಮ | ನಮಗೆ ಹವಾಮಾನ ನಿರೋಧಕ ಕೃಷಿ ಏಕೆ ಬೇಕು?

Share

ಜಾಗತಿಕವಾದ ಹವಾಮಾನ ಬದಲಾವಣೆ ಪರಿಣಾಮಗಳು ಈಚೆಗೆ ಗಂಭೀರವಾಗುತ್ತಿದೆ. ಎಲ್ಲಾ ಕೃಷಿಯ ಮೇಲೂ ಪರಿಣಾಮ ಬೀರುತ್ತಿದೆ. ತೋಟಗಾರಿಕಾ ಬೆಳೆಗಳ ಮೇಲೆ  ಹೆಚ್ಚಾಗಿ ಪರಿಣಾಮ ಬೀರಿದರೆ , ಅದರ ನಂತರ ಆಹಾರ ಧಾನ್ಯದ ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಜಾಗತಿಕ ಆಹಾರ ಪೂರೈಕೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಈಗ ಗಂಭೀರ ವಿಷಯವಾಗಿದೆ. ಹೀಗಾಗಿ ಈಗ ಹವಾಮಾನ ಬದಲಾವಣೆಯ ನಿರೋಧಕ ಕೃಷಿಯ ಬಗ್ಗೆ ಹೆಚ್ಚು ಚರ್ಚೆ ಆರಂಭವಾಗಿದೆ.

ಜಾಗತಿಕವಾಗಿ ಈಗ ಹವಾಮಾನ ಬದಲಾವಣೆಯ ಬಗ್ಗೆ ಚರ್ಚೆ ಆರಂಭವಾಗಿದೆ. ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮ ಗಂಭೀರ ಸ್ಥಿತಿಗೆ ಬರುತ್ತಿದೆ. ಮಳೆ ದೂರವಾಗಬೇಕಾದ ಕಾಲದಲ್ಲಿ ಭಾರೀ ಮಳೆ, ಗಾಳಿಯ ಅಬ್ಬರಗಳು, ವಿಪರೀತ ಬಿಸಿಲು, ನೀರಿನ ಕೊರತೆ ಇದೆಲ್ಲಾ ಕಾರಣಗಳಿಂದ ಕೃಷಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಈಚೆಗೆ ಭಾರೀ ಮಳೆ ಹಾಗೂ ಭಾರೀ ಬಿಸಿಲು ಎಲ್ಲಾ ಕೃಷಿಗೂ ಸಮಸ್ಯೆಯಾಗಿದೆ. ಕರ್ನಾಟಕದಲ್ಲಿ ಭಾರೀ ಬಿಸಿಲು ಈಗ ಬಹುದೊಡ್ಡ ಸಮಸ್ಯೆಯಾಗುತ್ತಿದೆ. ಇಡೀ ದೇಶದಲ್ಲೂ ಇದೇ ಸಮಸ್ಯೆ ಇದೆ. ಈ ಕಾರಣದಿಂದಲೇ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಕಳೆದ ದಶಕಗಳಲ್ಲಿ ವಿಶ್ವ ನಾಯಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗಳಲ್ಲಿ ಚರ್ಚೆಗಳ ಭಾಗವಾಗಿದೆ. ಆದರೆ ಇದು ಇನ್ನೂ ಎಲ್ಲರಲ್ಲೂ ಗಂಭೀರವಾದ ಎಚ್ಚರಿಕೆಯನ್ನು ಉಂಟು ಮಾಡಿಲ್ಲ.

ಇದೀಗ , ಹವಾಮಾನ ಬದಲಾವಣೆಯ ಕಾರಣದಿಂದ ಕೃಷಿಯು  ದುರ್ಬಲವಾಗುತ್ತಿದೆ. ಭಾರತದಲ್ಲೂ ಈ ಬಗ್ಗೆ ಗಂಭೀರವಾದ ಚಿಂತನೆ ಆರಂಭವಾಗಿದೆ. ಅಧ್ಯಯನದ ಪ್ರಕಾರ 2050 ರ ವೇಳೆಗೆ ಮಳೆಯಾಶ್ರಿತ ಅಕ್ಕಿಯ ಇಳುವರಿ ಶೇಕಡ 2.5  ಮತ್ತು ನೀರಾವರಿ ಅಕ್ಕಿಯ ಇಳುವರಿಯು ಶೇ.7 ರಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಿದೆ. 2100 ರ ವೇಳೆಗೆ ಗೋಧಿ ಮತ್ತು ಜೋಳದ ಇಳುವರಿಗಳ ಸಂಖ್ಯೆಗಳು ಕ್ರಮವಾಗಿ 6-25 ಪ್ರತಿಶತ ಮತ್ತು 18-23 ಪ್ರತಿಶತದಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.  ಹವಾಮಾನ ಬದಲಾವಣೆಯ ಪರಿಣಾಮಗಳಿಂದ ತೋಟಗಾರಿಕಾ ಬೆಳೆಗಳೂ ಅಪಾಯದಲ್ಲಿದೆ. ಅನಿರೀಕ್ಷಿತವಾಗಿ ಹೆಚ್ಚಿನ ತಾಪಮಾನ ಮತ್ತು ಮಳೆಯ ಕಾರಣಗಳಿಂದ ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಅಡಿಕೆ, ರಬ್ಬರ್‌ ಮೇಲೆಯೂ ಗಂಭೀರವಾದ ಪರಿಣಾಮ ಉಂಟಾಗುತ್ತದೆ. ತಾಪಮಾನ ಹೆಚ್ಚಳದ ಕಾರಣದಿಂದ ಕೆಲವು ಬೆಳೆಗಳು ವೇಗವಾಗಿ ಹಣ್ಣಾಗಲು ಕಾರಣವಾಗಬಹುದು, ಪರಾಗಸ್ಪರ್ಶದ ಮೇಲೂ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಅಡಿಕೆಯಂತಹ ಬೆಳೆಗಳಲ್ಲಿ ಕಾಯಿ ಕಟ್ಟದೇ ಇರಬಹುದು. ದ್ರಾಕ್ಷಿ,  ಕಲ್ಲಂಗಡಿಗಳಂತಹ ಹಣ್ಣುಗಳು ಬೇಗನೆ ಹಣ್ಣಾದರೆ, ಹೆಚ್ಚಿನ ತಾಪಮಾನ ಮತ್ತು ತೇವಾಂಶದ ಒತ್ತಡವು  ಕೆಲವು ಹಣ್ಣಗಳನ್ನು ಹಾಳು ಮಾಡುತ್ತದೆ. ರಬ್ಬರ್‌ ನಂತಹ ಕೃಷಿಯಲ್ಲಿ ಇಳುವರಿ ಕಡಿಮೆಯಾಗುತ್ತದೆ. ಭಾರತವು ಪ್ರಪಂಚದಲ್ಲಿ ಹಣ್ಣುಗಳು ಮತ್ತು ತರಕಾರಿಗಳ 2 ನೇ ಅತಿದೊಡ್ಡ ಉತ್ಪಾದಕನಾಗಿರುವುದರಿಂದ, ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಈಗಲೇ ಗಮನಿಸದಿದ್ದರೆ ನಮ್ಮ ಕೃಷಿ ಆರ್ಥಿಕತೆಯು ಕುಸಿಯುವ ಅಪಾಯವಿದೆ ಎಂದು ವರದಿ ಹೇಳಿದೆ.

ಈಗ ನಮಗೆ ಹವಾಮಾನ-ನಿರೋಧಕ ಕೃಷಿ ಅಥವಾ ಹವಾಮಾನ ಬದಲಾವಣೆ ಒಗ್ಗಿಕೊಳ್ಳುವ ಕೃಷಿಯ ಅಗತ್ಯವಿದೆ.ಜಾಗತಿಕ ತಾಪಮಾನ ಏರಿಕೆಯು ದೀರ್ಘಾವಧಿಯ  ಪರಿಣಾಮಗಳನ್ನು ಉಂಟುಮಾಡುತ್ತದೆ. ಪ್ರಸ್ತುತ ಅಂತಹ ದೊಡ್ಡ ಪರಿಣಾಮಗಳು ಇಲ್ಲದೇ ಇರಬಹುದು, ಆದರೆ  ಮುಂಬರುವ ದಿನಗಳಲ್ಲಿ ಹವಾಮಾನ ವೈಪರೀತ್ಯವೇ ಕೃಷಿಗೆ ಬಹುದೊಡ್ಡ ಸಮಸ್ಯೆಯಾಗಬಹುದು. ಅದರಲ್ಲಿ ಆಹಾರ ಭದ್ರತೆಯೂ ಒಂದು. ಆಹಾರ ಭದ್ರತೆಯು ಈಗ  ಜಾಗತಿಕ ಕಾಳಜಿಯಾಗಿದೆ. ಹೀಗಾಗಿ ಈ ಬದಲಾವಣೆ ನಿಯಂತ್ರಣಕ್ಕೆ  ಸಂಘಟಿತ ಪ್ರಯತ್ನ ಅಗತ್ಯ ಇದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಅಥವಾ ತಗ್ಗಿಸಲು ಕೃಷಿ ಕಾರ್ಯಾಚರಣೆಗಳ ಮೇಲೆ ಪ್ರಮುಖ ನಿರ್ಧಾರಗಳ ಅಗತ್ಯ ಇದೆ. ಇದರ ಜೊತೆಗೆ ವಿಜ್ಞಾನ, ತಂತ್ರಜ್ಞಾನದ ಬಳಕೆಯ ಕಾರಣದಿಂದ ಕೃಷಿಯ ಉತ್ಪಾದನೆಯಲ್ಲಿ ಹೆಚ್ಚಿನ ಗುಣಮಟ್ಟ ಮತ್ತು ಇಳುವರಿ ಪ್ರಮಾಣ ಹೆಚ್ಚು ಮಾಡುವುದು ಮತ್ತು  ರಸಗೊಬ್ಬರಗಳು ಮತ್ತು ಕೀಟನಾಶಕಗಳ ಕಡಿಮೆ ಬಳಕೆಯ ಮೂಲಕ ಪರಿಸರದ ಮೇಲೆ ಕೃಷಿಯ ಒಟ್ಟಾರೆ ಪರಿಣಾಮವನ್ನು ಕಡಿಮೆ ಮಾಡಬೇಕು, ಇದು  ಅನಿಲಗಳ  ಹೊರಸೂಸುವಿಕೆ  ಕಡಿಮೆ ಮಾಡಿ ಮಣ್ಣು ಮತ್ತು ಜಲಮೂಲಗಳ ರಕ್ಷಣೆಗೂ ಕಾರಣವಾಗುತ್ತದೆ ಎನ್ನುವುದು  ಸಲಹೆಯಾಗಿದೆ.

ಹವಾಮಾನ ಬದಲಾವಣೆಯು ಒಬ್ಬರ ಸಮಸ್ಯೆ ಮಾತ್ರವಲ್ಲ. ಅದು ಎಲ್ಲರ ಸಮಸ್ಯೆ. ಹಾಗಾಗಿ ಇಲ್ಲಿ ಸಾಮೂಹಿಕವಾದ ನಿರ್ಧಾರಗಳು ಅಗತ್ಯವಿದೆ.  ಹವಾಮಾನ ಬದಲಾವಣೆಗಳ ಕಾರಣದಿಂದ ಕೃಷಿಯಲ್ಲಿ ರೋಗಗಳ ಮಟ್ಟವೂ ಏರಿಕೆಯಾಗುತ್ತಿದೆ. ಹೀಗಾಗಿ ಹಲವು ರೋಗಗಳು ನಿಯಂತ್ರಣಕ್ಕೂ ಬಾರದೇ ವಿಪರೀತ ಪ್ರಮಾಣದಲ್ಲಿ ವಿಷ, ರಾಸಾಯನಿಕ ಬಳಕೆ ಅನಿವಾರ್ಯವಾಗುತ್ತದೆ. ಇದು ಇನ್ನಷ್ಟು ಪರಿಸರ ಮಾಲಿನ್ಯ, ಹವಾಮಾನ ಉಷ್ಣತೆ ಏರಿಕೆಗೆ ಕಾರಣವಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಯಾವುದೇ ಕೃಷಿ ರೋಗಗಳಲ್ಲಿ ಆರಂಭಿಕ ರೋಗದ ಮುನ್ಸೂಚನೆ ಮತ್ತು ಸ್ಥಳೀಯ ಹವಾಮಾನ ಮುನ್ಸೂಚನೆಯು ನಿಖರವಾದ ಮಾಹಿತಿಯ ಜೊತೆಗೆ ರೋಗ ತಡೆಗಟ್ಟಲು ಸಿದ್ಧವಾಗಬೇಕು. ಇದರಿಂದ ಕೃಷಿ ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು  ಹೆಚ್ಚಿಸಲು ಸಲಹೆ ನೀಡುತ್ತದೆ ವರದಿಗಳು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ

ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…

9 hours ago

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ

ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…

9 hours ago

ಭಾರತೀಯ ಕೊಕ್ಕೋಗೆ ಜಾಗತಿಕ ಮಟ್ಟದ ಮಾನ್ಯತೆ | ಈಗ ಮೌಲ್ಯವರ್ಧನೆಯೇ ರೈತರಿಗೆ ಹೊಸ ದಾರಿ

ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…

10 hours ago

ಹವಾಮಾನ ವರದಿ | 12-03-2026 | ಮಾರ್ಚ್‌ 14–15 ರಿಂದ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್‌ 14 ಅಥವಾ 15ರಿಂದ ಹಲವೆಡೆ…

19 hours ago

ಗ್ಯಾಸ್‌ ಸರಬರಾಜು ಆತಂಕ : ಹೋಟೆಲ್‌ ಉದ್ಯಮಕ್ಕೆ ಹೊಡೆತ, ಗೃಹ ಬಳಕೆದಾರರಿಗೆ ಆದ್ಯತೆ

ದೇಶದ ಹಲವು ನಗರಗಳಲ್ಲಿ ವಾಣಿಜ್ಯ LPG ಕೊರತೆಯಿಂದ ಹೋಟೆಲ್‌ ಮತ್ತು ಆಹಾರ ವಿತರಣೆ…

19 hours ago

ದೇಶೀಯ ಗ್ರಾಹಕರಿಗೆ ಇಂಧನ ಕೊರತೆ ಇಲ್ಲ: CNG – PNG ಪೂರೈಕೆ ನಿರಂತರ – ಸಚಿವ ಹರ್ದೀಪ್ ಸಿಂಗ್ ಪುರಿ

ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…

23 hours ago