ಹವಾಮಾನ ವೈಪರೀತ್ಯವು ಅಡುಗೆ ಮನೆಗೂ ಪರಿಣಾಮವನ್ನು ಬೀರಿದೆ. ಹೌದು..! ,ಹವಮಾನ ಬದಲಾವಣೆಯಿಂದ ಟೊಮೆಟೊದಿಂದ ಈರುಳ್ಳಿವರೆಗೆ ಸಮಸ್ಯೆ ಆಗಿದೆ. ಹವಾಮಾನ ಆಘಾತದ ಕಾರಣದಿಂದ ಭಾರತೀಯರು ದಿನನಿತ್ಯದ ಊಟಕ್ಕೆ ಎಷ್ಟು ಹೆಚ್ಚುವರಿ ಪಾವತಿಸಬೇಕಾಗುತ್ತದೆ..?. ಬೆಲೆ ಏರಿಕೆ ಹೆಚ್ಚಾಗುತ್ತಲೇ ಇದೆ, ಇಳುವರಿಯೂ ಕುಸಿತವಾಗುತ್ತಲೇ ಇದೆ. ಇದರ ಎರಡು ಮುಖ್ಯ ಅಂಶಗಳು…
- ಬೆಲೆಗಳು ಮತ್ತು ಹವಾಮಾನ: ಭಾರತದ ಅತ್ಯಂತ ಮುಖ್ಯ ಹಾಗೂ ಮಹತ್ವದ ಬೆಳೆಗಳಾದ ಟೊಮೆಟೊ , ಈರುಳ್ಳಿ ಮತ್ತು ಆಲೂಗಡ್ಡೆ ಕೃಷಿಯು ಹವಾಮಾನಕ್ಕೆ ಹೆಚ್ಚು ವೇಗವಾಗಿ ವರ್ತಿಸುತ್ತಿವೆ. ಹೀಗಾಗಿ ಇಳುವರಿ ಮತ್ತು ಗುಣಮಟ್ಟದಲ್ಲೂ ಬದಲಾವಣೆಯಾಗುತ್ತದೆ. ಇದಕ್ಕೆ ಹವಮಾನ ವೈಪರೀತ್ಯವೇ ದೊಡ್ಡ ಕಾರಣವಾಗಿದೆ. ಹಠಾತ್ ಮಳೆ, ಶಾಖದ ಅಲೆಗಳು ಅಥವಾ ಬಿರುಗಾಳಿಗಳು ಮತ್ತು ಇತರ ಹವಾಮಾನ ಪರಿಣಾಮಗಳು ಹೆಚ್ಚಿನ ಸಮಸ್ಯೆಯನ್ನು ತಂದಿದೆ. ಇದು ಬೆಳೆದು ನಿಂತಿರುವ ಬೆಳೆಗಳನ್ನು ನಾಶಮಾಡುತ್ತಿದೆ.
- ಆಹಾರದ ಬೆಲೆ ಏರಿಕೆ ಮತ್ತು ಹವಾಮಾನ ಬದಲಾವಣೆ : ಭಾರತ ಇನ್ನೂ ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ದೇಶವನ್ನು ಸಣ್ಣ ಹವಾಮಾನ ವೈಪರೀತ್ಯಗಳಿಗೂ ಅತ್ಯಂತ ದುರ್ಬಲಗೊಳಿಸುತ್ತದೆ. ಇದರರ್ಥ ಅನಿಯಮಿತ ಮಾನ್ಸೂನ್ ಅಥವಾ ಹಠಾತ್ ಶಾಖದ ಅಲೆ, ಇವೆರಡೂ ಈ ವರ್ಷ ಸಂಭವಿಸಿದೆ. ಮುಂದೆ ಮತ್ತೆ ಮತ್ತೆ ಅಪ್ಪಳಿಸುವ ನಿರೀಕ್ಷೆಯಿದೆ. ಈ ಕಾರಣದಿಂದ ಉತ್ವಾದನೆಯಲ್ಲಿ ಬದಲಾವಣೆ ತರಬಹುದು.
ಈ ಹವಾಮಾನ ಬದಲಾವಣೆಯಿಂದ ಬೆಲೆ ಏರಿಕೆ ಯಾಕೆ: ಹವಾಮಾನ ಬದಲಾವಣೆಯು ಅದೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ಯಾವುದೋ ಒಂದು ಕಡೆ ಸಂಭವಿಸುವ ಹವಾಮಾನ ವೈಪರೀತ್ಯ ಇನ್ನು ಯಾವುದೋ ಕಡೆ ಪರಿಣಾಮ ಬೀರುತ್ತದೆ. ಯಾವುದೇ ಪ್ರದೇಶದ ಕೃಷಿ ಹಾನಿ, ಇನ್ಯಾವುದೋ ಪ್ರದೇಶದ ದಿನಸಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅನಿರೀಕ್ಷಿತ ದಿನಸಿ ಬಿಲ್ ಗಳು ಮತ್ತು ಅದರ ಪರಿಣಾಮಗಳು ಕೇವಲ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿಲ್ಲ. ಮಹಾರಾಷ್ಟ್ರದಲ್ಲಿ ಹಠಾತ್ ಬಿರುಗಾಳಿ ಅಥವಾ ಆಂದ್ರಪ್ರದೇಶದಲ್ಲಿ ಬಿಸಿಲಿನ ಅಲೆಯು ದೆಹಲಿ ಅಥವಾ ಬೆಂಗಳೂರಿನಲ್ಲಿ ಕೆಲವೇ ದಿನಗಳಲ್ಲಿ ತರಕಾರಿಯ ಬೆಲೆಯನ್ನು ದ್ವಿಗುಣಗೊಳಿಸಬಹುದು.
ಸಾಲಗಳನ್ನು ಮಾಡಿಕೊಂಡ ರೈತರು, ಹವಾಮಾನ ಪ್ರಭಾವದಿಂದ ಸಾಲ ತೀರಿಸುವುದು ಹೇಗೆ ಎಂಬುದರ ಬಗ್ಗೆ ಚಿಂತಿಸುತ್ತಾರೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಗುತ್ತದೆ. ಭಾರತದ ಕೃಷಿ ಕ್ಷೇತ್ರದ ಬಹುಪಾಲು ಭಾಗವಾಗಿರುವ ಸಣ್ಣ ಮತ್ತು ಅತೀಸಣ್ಣ ರೈತರು ಇಂತಹ ಹವಾಮಾನ ಆಘಾತಗಳನ್ನು ಸಹಿಸಿಕೊಳ್ಳಲು ಹಾಗೂ ಅವುಗಳಿಂದ ರಕ್ಷಿಸಿಕೊಳ್ಳಲು ಯಾವುದೇ ಪರಿಹಾರ ಮಾರ್ಗಗಳನ್ನು ಸದ್ಯ ಹೊಂದಿಲ್ಲ. ಹೀಗಾಗಿ ಭಾರತವು ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹವಾಮಾನ ಸ್ಥಿತಿಸ್ಥಾಕತ್ವವನ್ನು ಬೆಳೆಸಲು ಪ್ರಯತ್ನಿಸುತ್ತಿದೆ. ಕೃಷಿಕರೂ ಸುಧಾರಣೆಯ ಕಡೆಗೆ ಗಮನಹರಿಸಬೇಕಿದೆ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel