ಮಲೆನಾಡಿನಲ್ಲಾಗಿರುವ ಹವಾಮಾನ ಬದಲಾವಣೆ | ಕೃಷಿಯ ಮೇಲಿನ ಪರಿಣಾಮಗಳು ಏನು ? | ಅಡಿಕೆ ಬೆಳೆಯ ರೋಗಕ್ಕೆ ಕಾರಣಗಳು ಏನು..? | ಚಿಂತನ ಆರಂಭ |

January 10, 2024
8:42 PM
ಹವಾಮಾನ ಬದಲಾವಣೆಯಿಂದ ಮಲೆನಾಡು ಭಾಗಗಳಲ್ಲಿ ಆಗಿರುವ ವಿಶೇಷ ಬದಲಾವಣೆಗಳು ಹಾಗೂ ಕೃಷಿಯ ಮೇಲಿನ ಪರಿಣಾಮಗಳ ಬಗ್ಗೆ ಚಿಂತನೆ ನಡೆಸಲು ಆರಂಭವಾಗಿದೆ.

ಕಳೆದ ಕೆಲವು ವರ್ಷಗಳಿಂದ ದೇಶದಾದ್ಯಂತ ಹವಾಮಾನ ಬದಲಾವಣೆಯ ಪರಿಣಾಮಗಳು ಕಂಡುಬರುತ್ತಿದೆ. ಇದರಿಂದ ಕೃಷಿ, ಪರಿಸರ  ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಹಲವು ಆಯಾಮಗಳಿಂದ ಸಮಸ್ಯೆಗಳಾಗುತ್ತಿದೆ. ಈಗ ಹವಾಮಾನ ಬದಲಾವಣೆಯಿಂದ ಮಲೆನಾಡು ಭಾಗಗಳಲ್ಲಿ ಆಗಿರುವ ವಿಶೇಷ ಬದಲಾವಣೆಗಳು ಹಾಗೂ ಕೃಷಿಯ ಮೇಲಿನ ಪರಿಣಾಮಗಳ ಬಗ್ಗೆ ಚಿಂತನೆ ನಡೆಸಲು ಆರಂಭವಾಗಿದೆ. ಇದಕ್ಕಾಗಿ ಆರಂಭ ಹಂತದ ಚಿಂತನಾ ಸಭೆ ನಡೆಯಿತು. 

Advertisement

ತಾಪಮಾನ ಏರಿಕೆ, ಇದರಿಂದಾಗಿ ಹವಾಮಾನ ಬದಲಾವಣೆ. ಈ ಕಾರಣದಿಂದ ಹವಾಮಾನ ಏರುಪೇರು. ಮಳೆಯ ಪರಿಸ್ಥಿತಿ ಬದಲಾವಣೆ. ಚಳಿ ಇರಬೇಕಾದ ಕಾಲದಲ್ಲಿ ಮಳೆ, ಮಳೆಯಾಗಬೇಕಾದ ಕಾಲದಲ್ಲಿ ಬಿಸಿಲು. ಇದೆಲ್ಲಾ ಕೃಷಿಯ ಮೇಲೆ, ಗ್ರಾಮೀಣ ಭಾಗದ ಹಲವು ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈಚೆಗೆ ಕೆಲವು ಸಮಯಗಳಿಂದ ಮಳೆಯ ಪ್ಯಾಟರ್ನ್‌ ಕೂಡಾ ಬದಲಾಗಿದೆ. ಹೀಗಾಗಿ ಬಹುವಾರ್ಷಿಕ ಬೆಳೆಗಳಾದ ಅಡಿಕೆ, ರಬ್ಬರ್‌, ಕಾಫಿ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಇದಕ್ಕೆ ಕಾರಣ ಹಾಗೂ ಮುಂದೆ ಅಳವಡಿಸಿಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧ್ಯಯನ ಹಾಗೂ ಎಚ್ಚರಿಕೆಗಳ ಬಗ್ಗೆ ಚರ್ಚಿಸಲು ಕೃಷಿಕರ ಸಂವಾದ -ಚಿಂತನೆ ಆರಂಭವಾಗಿದೆ.

ಸುಳ್ಯ ತಾಲೂಕಿನ ಬಾಳಿಲದಲ್ಲಿ  ಕಳೆದ 48 ವರ್ಷಗಳಿಂದ ಮಳೆ ದಾಖಲೆ ಮಾಡುತ್ತಿರುವ ಪಿಜಿಎಸ್‌ಎನ್‌ ಪ್ರಸಾದ್‌ ಅವರ ಮಳೆ ದಾಖಲೆಗಳನ್ನು ಆಧಾರವಾಗಿರಿಸಿಕೊಂಡು ಚರ್ಚೆ ಆರಂಭಿಸಲಾಗಿದೆ.  ಚಿಂತನಾ ಸಭೆಯಲ್ಲಿ ಐಬಿಬಿಎನ್‌ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಪಣೀಶ್ ಕೃಷ್ಣ ಮತ್ತು ಕೃಷಿ ಗ್ರಾಮೀಣ ಅಭಿವೃದ್ಧಿ ವಿಶ್ಲೇಷಕ ಕೆ.ಪಿ.ಸುರೇಶ್ ಕಂಜರ್ಪಣೆ,  ಕೃಷಿಕರಾದ ವಿನಯಚಂದ್ರ ಕಿಲಂಗೋಡಿ, ಸುರೇಶ್ಚಂದ್ರ ಕಲ್ಮಡ್ಕ, ಪ್ರಸನ್ನ ಎಣ್ಮೂರು, ಸಾಯಿಶೇಖರ್‌ ಕರಿಕಳ , ಮಹೇಶ್‌ ಪುಚ್ಚಪ್ಪಾಡಿ ಇದ್ದರು.

ಕಳೆದ ಸುಮಾರು 50 ವರ್ಷಗಳಿಂದ ಮಳೆಯ ಪ್ಯಾಟರ್ನ್‌ನಲ್ಲಿ ಬದಲಾವಣೆ ಹಾಗೂ ಮಳೆಯ ಬದಲಾವಣೆಗೆ ಕಾರಣಗಳು ಏನು ಎಂಬುದರ ಬಗ್ಗೆ ಚರ್ಚಿಸಲಾಯಿತು. ಇದರಿಂದಾಗಿ ಕೃಷಿಯ ಮೇಲೆ ಆಗುತ್ತಿರುವ ಪರಿಣಾಮಗಳು, ಬಹುವಾರ್ಷಿಕ ಬೆಳೆಯಾದ ಅಡಿಕೆಯ ಮೇಲೆ ಆಗುತ್ತಿರುವ ಪರಿಣಾಮಗಳು, ಅಡಿಕೆಯ ಮೇಲೆ ಬರುತ್ತಿರುವ ಈಚೆಗಿನ ರೋಗಗಳಾದ ಸಿಂಗಾರ ಒಣಗುವಿಕೆ, ಎಲೆಚುಕ್ಕಿ ರೋಗದ ಕಾರಣ ಹಾಗೂ ಅಡಿಕೆ ಒಡೆದು ಬೀಳುವುದು ಇತ್ಯಾದಿಗಳು, ರಬ್ಬರ್‌ ಕೃಷಿಯ ಮೇಲೆ ಆಗುತ್ತಿರುವ ಪರಿಣಾಮಗಳು, ಕಾಫಿ ಬೆಳೆಯಲ್ಲಿ ಆಗುವ ಬದಲಾವಣೆಗಳು, ಇಳುವರಿ ಕೊರತೆ ಇದಕ್ಕೆಲ್ಲಾ ಪ್ರಮುಖವಾದ ಕಾರಣಗಳು ಹವಾಮಾನದ ಬದಲಾವಣೆ. ಇದಕ್ಕಾಗಿ ಮುಂದೆ ಏನು ತಕ್ಷಣದ ಕ್ರಮಗಳು ಕೈಗೊಳ್ಳಬಹುದು ಹಾಗೂ ದೀರ್ಘಾವಧಿಯಾಗಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ಸೂಕ್ಷ್ಮವಾಗಿ ಚರ್ಚಿಸಲಾಯಿತು.

ಇದಕ್ಕಾಗಿ ಮುಂದೆ ಸುಳ್ಯ, ಪುತ್ತೂರು ಸೇರಿದಂತೆ ಕರಾವಳಿ, ಮಲೆನಾಡು ಭಾಗದ ಕೃಷಿಕರ ಅಭಿಪ್ರಾಯವೂ ಅಗತ್ಯವಿದೆ. ಈ ನೆಲೆಯಲ್ಲಿ  ಕೃಷಿಯನ್ನು ಉಳಿಸುವ, ಗ್ರಾಮೀಣ , ಪರಿಸರ ಬದಲಾವಣೆಯನ್ನು ತಡೆಯುವ ಪ್ರಯತ್ನ ನಡೆಯಬೇಕಿದೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ
ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |
April 16, 2025
8:14 AM
by: The Rural Mirror ಸುದ್ದಿಜಾಲ
ಹೊಸರುಚಿ| ಗುಜ್ಜೆ ರೋಲ್
April 16, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group