ಹವಾಮಾನ ಬದಲಾವಣೆಯ ಕಾರಣದಿಂದ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಭಣವಾಗುತ್ತಿದೆ ಎಂದು ಆಫ್ರಿಕನ್ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಆಫ್ರಿಕಾ ಖಂಡವನ್ನು ಗಮನದಲ್ಲಿರಿಸಿ ವಿಜ್ಞಾನಿಗಳು ಈ ಬಗ್ಗೆ ಎಚ್ಚರಿಸಿದ್ದಾರೆ, ಆದರೆ ವಿಶ್ವದಾದ್ಯಂತ ಇಂದು ಹವಾಮಾನ ಬದಲಾವಣೆಯ ಕಾರಣದಿಂದ ಸೊಳ್ಳೆಗಳಿಂದ ಹರಡುವ ರೋಗಗಳು ಹೆಚ್ಚಾಗುತ್ತಿದೆ ಎಂದು ಅಧ್ಯಯನವು ಹೇಳಿದೆ. ಈಗ ಆಫ್ರಿಕಾ ಖಂಡವು ಸೊಳ್ಳೆಗಳಿಂದ ಹರಡುವ ಸೋಂಕುಗಳ ಹೆಚ್ಚಳವನ್ನು ಎದುರಿಸುತ್ತಿದೆ, ಮಲೇರಿಯಾ ಮತ್ತು ಡೆಂಗ್ಯು ಜ್ವರ ಸೇರಿದಂತೆ, ಸಾರ್ವಜನಿಕರ ಆರೋಗ್ಯ ವ್ಯವಸ್ಥೆಗಳ ಮೇಲೆ ಪರಿಣಾಮವನ್ನು ಉಂಟುಮಾಡುತ್ತಿದೆ ಎಂದು ವಿಜ್ಞಾನಿಗಳು ಸೋಮವಾರ ವರ್ಚುವಲ್ ಫೋರಂನಲ್ಲಿ ಎಚ್ಚರಿಸಿದ್ದಾರೆ.
ಹವಾಮಾನ ಬದಲಾವಣೆಯು ಆಫ್ರಿಕಾದಲ್ಲಿ ಮಲೇರಿಯಾ ಮತ್ತು ಡೆಂಗ್ಯು ಜ್ವರ ಹರಡುವಿಕೆಗೆ ಕಾರಣವಾದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ, ಇದು ಆರ್ಥಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಂತರಾಷ್ಟ್ರೀಯ ಆರೋಗ್ಯ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕೆಲ್ ಚಾರ್ಲ್ಸ್ ಹೇಳಿದ್ದಾರೆ.
ಜಾಗತಿಕವಾಗಿ, 3,500 ಜಾತಿಯ ಸೊಳ್ಳೆಗಳಿವೆ, ಅವುಗಳಲ್ಲಿ 837 ಸೊಳ್ಳೆಗಳು ಆಫ್ರಿಕಾದಲ್ಲಿ ಕಂಡುಬರುತ್ತವೆ. ಏರುತ್ತಿರುವ ತಾಪಮಾನ, ಜೀನ್ ರೂಪಾಂತರಗಳು ಮತ್ತು ಕೀಟನಾಶಕ ಪ್ರತಿರೋಧದಿಂದಾಗಿ ಈ ಸೊಳ್ಳೆಗಳನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳು ಹೆಚ್ಚು ಸವಾಲಾಗುತ್ತಿವೆ ಎಂದು ಚಾರ್ಲ್ಸ್ ಹೇಳಿದ್ದಾರೆ.
ಹವಾಮಾನ ಕಾರಣದಿಂದ ಭವಿಷ್ಯದಲ್ಲಿ ಮಲೇರಿಯಾ, ಡೆಂಗ್ಯು ಜ್ವರ, ಕಾಲರಾ ಮತ್ತು ಜಿಕಾ ವೈರಸ್‌ನಂತಹ ಸಾಂಕ್ರಾಮಿಕ ರೋಗಗಳ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಫೋರಂ ಅಭಿಪ್ರಾಯಪಟ್ಟಿದೆ.
African scientists have cautioned that mosquito-borne diseases are increasing as a result of climate change.