Advertisement
MIRROR FOCUS

ಹವಾಮಾನ ಬದಲಾವಣೆ | ಸೊಳ್ಳೆಗಳಿಂದ ಹರಡುವ ರೋಗಗಳ ಉಲ್ಬಣ | ಆಫ್ರಿಕನ್ ವಿಜ್ಞಾನಿಗಳಿಂದ ಎಚ್ಚರಿಕೆ |

Share

ಹವಾಮಾನ ಬದಲಾವಣೆಯ ಕಾರಣದಿಂದ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಭಣವಾಗುತ್ತಿದೆ ಎಂದು  ಆಫ್ರಿಕನ್ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಆಫ್ರಿಕಾ ಖಂಡವನ್ನು ಗಮನದಲ್ಲಿರಿಸಿ ವಿಜ್ಞಾನಿಗಳು ಈ ಬಗ್ಗೆ ಎಚ್ಚರಿಸಿದ್ದಾರೆ, ಆದರೆ ವಿಶ್ವದಾದ್ಯಂತ ಇಂದು ಹವಾಮಾನ ಬದಲಾವಣೆಯ ಕಾರಣದಿಂದ ಸೊಳ್ಳೆಗಳಿಂದ ಹರಡುವ ರೋಗಗಳು ಹೆಚ್ಚಾಗುತ್ತಿದೆ ಎಂದು ಅಧ್ಯಯನವು ಹೇಳಿದೆ. ಈಗ  ಆಫ್ರಿಕಾ ಖಂಡವು ಸೊಳ್ಳೆಗಳಿಂದ ಹರಡುವ ಸೋಂಕುಗಳ ಹೆಚ್ಚಳವನ್ನು ಎದುರಿಸುತ್ತಿದೆ, ಮಲೇರಿಯಾ ಮತ್ತು ಡೆಂಗ್ಯು ಜ್ವರ ಸೇರಿದಂತೆ, ಸಾರ್ವಜನಿಕರ ಆರೋಗ್ಯ ವ್ಯವಸ್ಥೆಗಳ ಮೇಲೆ ಪರಿಣಾಮವನ್ನು ಉಂಟುಮಾಡುತ್ತಿದೆ ಎಂದು ವಿಜ್ಞಾನಿಗಳು ಸೋಮವಾರ ವರ್ಚುವಲ್ ಫೋರಂನಲ್ಲಿ ಎಚ್ಚರಿಸಿದ್ದಾರೆ.

ಹವಾಮಾನ ಬದಲಾವಣೆಯು ಆಫ್ರಿಕಾದಲ್ಲಿ ಮಲೇರಿಯಾ ಮತ್ತು ಡೆಂಗ್ಯು ಜ್ವರ ಹರಡುವಿಕೆಗೆ ಕಾರಣವಾದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ, ಇದು ಆರ್ಥಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು  ಅಂತರಾಷ್ಟ್ರೀಯ ಆರೋಗ್ಯ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕೆಲ್ ಚಾರ್ಲ್ಸ್ ಹೇಳಿದ್ದಾರೆ.

ಜಾಗತಿಕವಾಗಿ, 3,500 ಜಾತಿಯ ಸೊಳ್ಳೆಗಳಿವೆ, ಅವುಗಳಲ್ಲಿ 837 ಸೊಳ್ಳೆಗಳು ಆಫ್ರಿಕಾದಲ್ಲಿ ಕಂಡುಬರುತ್ತವೆ. ಏರುತ್ತಿರುವ ತಾಪಮಾನ, ಜೀನ್ ರೂಪಾಂತರಗಳು ಮತ್ತು ಕೀಟನಾಶಕ ಪ್ರತಿರೋಧದಿಂದಾಗಿ ಈ ಸೊಳ್ಳೆಗಳನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳು ಹೆಚ್ಚು ಸವಾಲಾಗುತ್ತಿವೆ ಎಂದು ಚಾರ್ಲ್ಸ್ ಹೇಳಿದ್ದಾರೆ.

ಹವಾಮಾನ ಕಾರಣದಿಂದ ಭವಿಷ್ಯದಲ್ಲಿ ಮಲೇರಿಯಾ, ಡೆಂಗ್ಯು ಜ್ವರ, ಕಾಲರಾ ಮತ್ತು ಜಿಕಾ ವೈರಸ್‌ನಂತಹ ಸಾಂಕ್ರಾಮಿಕ ರೋಗಗಳ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಫೋರಂ ಅಭಿಪ್ರಾಯಪಟ್ಟಿದೆ.

African scientists have cautioned that mosquito-borne diseases are increasing as a result of climate change.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ, ಹೊರನಾಡು, ಕಟೀಲು ಮತ್ತು ಕೊಲ್ಲೂರು ಸೇರಿದಂತೆ…

12 minutes ago

ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಧರಣಿಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು…

26 minutes ago

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

20 hours ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

20 hours ago

ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

ಎಲ್‌ನಿನೋ ವಿದ್ಯಮಾನವು ಡಿಸೆಂಬರ್‌ನಲ್ಲಿ ಗರಿಷ್ಠ ತೀವ್ರತೆ ತಲುಪುವ ಸಾಧ್ಯತೆಯಿದ್ದು, 2027ರ ಫೆಬ್ರವರಿವರೆಗೆ ಮುಂದುವರಿಯಬಹುದು…

20 hours ago