Advertisement
The Rural Mirror ವಾರದ ವಿಶೇಷ

ಹವಾಮಾನ ಬದಲಾವಣೆಯಿಂದ ನಿದ್ರೆಯ ಮೇಲೆ ಪರಿಣಾಮ – ಅಧ್ಯಯನ ವರದಿ

Share

ಹವಾಮಾನ ಬದಲಾವಣೆಯಿಂದ  ಹಾಗೂ ತಾಪಮಾನದ ದಿಢೀರ್‌ ಬದಲಾವಣೆಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಪ್ರಕರಣ ಹೆಚ್ಚಾಗುತ್ತಿದೆ ಮಾತ್ರವಲ್ಲ ಮನುಷ್ಯನ ನಿದ್ರೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ನೇಚರ್‌ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.

ಈ ಅಧ್ಯಯನವು ಹಲವಾರು ದೇಶಗಳ 1,15,000 ಕ್ಕೂ ಹೆಚ್ಚು ಜನರನ್ನು ಎರಡು ವರ್ಷಗಳವರೆಗೆ ಗಮನಿಸಿದೆ ಹಾಗೂ ಡಾಟಾಗಳನ್ನು ಸಂಗ್ರಹಿಸಿದ ಆಧಾರದಲ್ಲಿ ಈ ಮಾಹಿತಿಯನ್ನು  ತಿಳಿಸಿದೆ. ಹಾಸಿಗೆಯ ಕೆಳಗೆ ನಿದ್ರೆಯ ಮಾನಿಟರ್‌ಗಳೊಂದಿಗೆ ಅವರ ನಿದ್ರೆಯ ಗುಣಮಟ್ಟವನ್ನು ಅಳೆಯಲಾಗಿತ್ತು. ನಂತರ ತಾಪಮಾನ ಮತ್ತು ನಿದ್ರೆಯ ನಡುವಿನ ಸಂಬಂಧವನ್ನು ಮೌಲ್ಯಮಾಪನ ಮಾಡಲು ಹವಾಮಾನದ ಡಾಟಾಗಳೊಂದಿಗೆ ಈ ಮಾಹಿತಿಯನ್ನು ತಾಳೆ ಮಾಡಿ ಅಧ್ಯಯನ ನಡೆಸಿದ ವರದಿಯಾಗಿದೆ.

26 ಡಿಗ್ರಿಯ ವಾತಾವರಣದಲ್ಲಿ 40 ರ ದಶಕಗಳ ಹಿಂದಿನ ದಿನಗಳಿಗೆ ಹೋಲಿಸಿದಾಗ, ನಿದ್ರೆಯ ಗುಣಮಟ್ಟ ಅಥವಾ  ನಿದ್ರೆಯ ಸಮಯ 40 ರಿಂದ 45% ಹೆಚ್ಚಳ ಅಂದು ಕಂಡುಬಂದಿದೆ. ಈಗಿನ ದಿನಗಳಲ್ಲಿ ಅತಿಯಾದ ಉಷ್ಣತೆಯು ನಿದ್ರೆಯನ್ನು ಕೆಡಿಸುವ ಮೂಲಕ ನಿದ್ರೆ ಮಾಡುವುದನ್ನು ಕಷ್ಟಕರವಾಗಿಸುತ್ತದೆ ಎಂದು ಅಧ್ಯಯನವು ಗಮನಿಸಿದೆ. ಹೆಚ್ಚಿನ ತಾಪಮಾನವು ರಾತ್ರಿಯ ಸಮಯದಲ್ಲಿ ದೇಹವು ತಣ್ಣಗಾಗುವ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ, ಇದು ನೈಸರ್ಗಿಕ ನಿದ್ರೆಯ ಚಕ್ರಕ್ಕೆ ಅಡ್ಡಿಪಡಿಸುತ್ತದೆ. ಇದರಿಂದ ಆಗಾಗ್ಗೆ ಎಚ್ಚರಗೊಳ್ಳುವಿಕೆ, ದೀರ್ಘವಾದ ನಿದ್ರೆ ಮತ್ತು ಉಸಿರಾಟದ ಅಸ್ಥಿರತೆಗೆ ಕಾರಣವಾಗುತ್ತದೆ, ಇದರ ಪರಿಣಾಮವಾಗಿ ಹೆಚ್ಚಿನ ಉಸಿರುಕಟ್ಟುವಿಕೆ ಘಟನೆಗಳು ನಡೆಯುತ್ತಿದೆ ಎಂದು ವರದಿ ಹೇಳಿದೆ.

ಹೀಗೇ ನಿದ್ರೆಯ ಸಮಸ್ಯೆ ಹಾಗೂ ಹವಾಮಾನ ಬದಲಾವಣೆಯು ಜಾಗತಿಕವಾಗಿ ಸುಮಾರು 1 ಬಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತಿದೆ ಮತ್ತು  80% ಜನರಿಗೆ ಈ ಬಗ್ಗೆ ತಿಳಿದಿಲ್ಲ , ಚಿಕಿತ್ಸೆಯೂ ಇಲ್ಲ. ಈ ಕಾರಣದಿಂದ ಇಂದು ಹೃದ್ರೋಗ, ಪಾರ್ಶ್ವವಾಯು, ಬುದ್ಧಿಮಾಂದ್ಯತೆ, ಮಧುಮೇಹ ಮತ್ತು ಖಿನ್ನತೆಯ ಅಪಾಯವನ್ನು ಹೆಚ್ಚಿಸಿದೆ ಎಂದು ಅಧ್ಯಯನ ವರದಿ ಹೇಳಿದೆ.

ಹೀಗಾಗಿ ಇಂದು ಹವಾಮಾನ ಬದಲಾವಣೆ, ತಾಪಮಾನ ಏರಿಕೆ ಕೃಷಿಗೆ ಮಾತ್ರವಲ್ಲ ಪರಿಸರದ ಜೀವಿಗಳ ಮೇಲೂ ಪರಿಣಾಮ ಬೀರುವುದು  ಈಗಾಗಲೇ ವರದಿಯಾಗಿದೆ. ಇದೀಗ ಮನುಷ್ಯದ ಮೇಲೂ ಪರಿಣಾಮ ಬೀರುವುದು ಗಮನಕ್ಕೆ ಬರುತ್ತಿದೆ. ಇದೀಗ ಈ ಅಧ್ಯಯನ ವರದಿಯನ್ನೂ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ ಇದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸುಳ್ಯ ಅಡಿಕೆ ಕೃಷಿಗೆ ಎಲೆಚುಕ್ಕಿ ಸಂಕಷ್ಟ | ಬೆಳೆಸಾಲ ಮನ್ನಾ ಮಾಡಲು ಆಗ್ರಹ – ಸಮೀಕ್ಷೆಗೆ ಸಹಕರಿಸುವಂತೆ ಕೃಷಿಕರಿಗೆ ಮನವಿ

ಸುಳ್ಯ ತಾಲೂಕಿನ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗದಿಂದ ಭಾರೀ ನಷ್ಟ. ಬೆಳೆಸಾಲ ಮನ್ನಾ,…

21 minutes ago

ಹವಾಮಾನ ವರದಿ | 10-01-2026 | ತುಂತುರು ಮಳೆ ಇದೆ..! ಎಲ್ಲೆಲ್ಲಿ ಮಳೆ ಇದೆ…?

ಜನವರಿ 11 ಮತ್ತು 12ರಂದು ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ…

44 minutes ago

ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!

ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…

13 hours ago

ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…

14 hours ago

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

22 hours ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

23 hours ago