ಹವಾಮಾನ ಬದಲಾವಣೆಯು ಆರ್ಥಿಕ ಸ್ಥಿರತೆಗೆ ತೀವ್ರ ಅಪಾಯ | ಆರ್‌ಬಿಐ ಡೆಪ್ಯುಟಿ ಗವರ್ನರ್ ರಾಜೇಶ್ವರ್ ರಾವ್

December 5, 2024
7:45 AM
ಹವಾಮಾನ ಬದಲಾವಣೆ ಹಾಗೂ ಹವಾಮಾನ ವೈಪರೀತ್ಯವು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ. ಈಗಾಗಲೇ ವಾತಾವರಣದ ಉಷ್ಣತೆ ಏರಿಕೆಯೊಂದು ಬಹುದೊಡ್ಡ ಸವಾಲಾಗಿದೆ. ಈ ಕಾರಣದಿಂದ ಭವಿಷ್ಯದ ಪೀಳಿಗೆಗೆ ಸುಸ್ಥಿರ ಬೆಳವಣಿಗೆ ಮತ್ತು ಪರಿಸರಕ್ಕಾಗಿ ನಾವು ಒಂದಾಗಿ ನಿರ್ಣಾಯಕ ಮಾರ್ಗಸೂಚಿಯನ್ನು ಒದಗಿಸಬೇಕಿದೆ ಎಂದು ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ್ ರಾವ್ ಎಚ್ಚರಿಸಿದ್ದಾರೆ. (Source : news network)

ಹವಾಮಾನ ಬದಲಾವಣೆಯು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಹವಾಮಾನ ಸಂಬಂಧಿತ ಆರ್ಥಿಕ ಅಪಾಯಗಳನ್ನು ತಗ್ಗಿಸುವ ಬಗ್ಗೆ ತುರ್ತು ಕ್ರಮಗಳ ಅಗತ್ಯ ಇದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ್ ರಾವ್ ಹೇಳಿದ್ದಾರೆ.

Advertisement

ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದಲ್ಲಿ (ಎನ್‌ಯುಎಸ್) ಸೌತ್ ಏಷ್ಯನ್ ಸ್ಟಡೀಸ್ ಸಂಸ್ಥೆ (ಐಎಸ್‌ಎಎಸ್) ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು ಹವಾಮಾನ ಬದಲಾವಣೆಯಿಂದ ಉಂಟಾಗುವ  ಅಪಾಯಗಳ ಬಗ್ಗೆ ಅವರು ಎಚ್ಚರಿಕೆ ನೀಡಿದರು, ಇತ್ತೀಚಿನ ಪ್ರಾಕೃತಿಕ ದುರಂತಗಳ ಬಗ್ಗೆ ಮಾತನಾಡಿದ ಅವರು ಸುಸ್ಥಿರ ಬೆಳವಣಿಗೆ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಪಾರದರ್ಶಕತೆ ಮತ್ತು ಪರಿಸರ ಸಾಮರ್ಥ್ಯ ನಿರ್ಮಾಣದ ಪ್ರಾಮುಖ್ಯತೆಯನ್ನು ಹೇಳಿದರು. 2024 ರಲ್ಲಿ ದಾಖಲೆಯ ತಾಪಮಾನ ಹಾಗೂ ಆ ಬಳಿಕದ ಹವಾಮಾನ, ಕೃಷಿ ಮತ್ತು ಪ್ರಾಕೃತಿಕ ಬದಲಾವಣೆಗಳ ಬಗ್ಗೆ ವಿಶ್ಲೇಷಿಸಿದ ಅವರು ಇಂತಹ ಹವಾಮಾನ ಬದಲಾವಣೆಗಳು ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿವೆ. ಹೀಗಾಗಿ ಆರ್ಥಿಕತೆ ಮತ್ತು ಹಣಕಾಸು ವಲಯವು ಹವಾಮಾನದ ಮೇಲೂ ಹೊಂದಿಕೊಂಡಿದೆ, ಈ ಪರಸ್ಪರ ಹೊಂದಾಣಿಕೆಯ ಕ್ರಿಯೆಯು ಭವಿಷ್ಯದಲ್ಲಿ ಹಣಕಾಸಿನ ಸ್ಥಿರತೆಯ ಅಪಾಯಗಳಿಗೆ ಕಾರಣವಾಗಬಹುದು. ಈಗಾಗಲೇ ಜಾಗತಿಕ ಆರ್ಥಿಕತೆಯ ಮೇಲೆ ಹವಾಮಾನ ಬದಲಾವಣೆಯ ಗಂಭೀರ ಪರಿಣಾಮ ಬೀರಿದೆ. ಹವಾಮಾನ ಬದಲಾವಣೆಯು ಹಣಕಾಸು ವ್ಯವಸ್ಥೆಗೆ ಪ್ರಮುಖ ಅಪಾಯವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ರಾವ್ ಎಚ್ಚರಿಸಿದರು.

ಹೀಗಾಗಿ ಈಗಲೇ ಈ ಅಪಾಯಗಳ ಸರಿಯಾದ ರೀತಿಯಲ್ಲಿ ಗಮನಿಸಿಕೊಂಡು ಎಲ್ಲಾ ಕ್ಷೇತ್ರವನ್ನೂ ಸರಿಪಡಿಸಿಕೊಂಡು ಸಾಮರ್ಥ್ಯಗಳನ್ನು ಹೆಚ್ಚಿಸುವುದು ಅತ್ಯಗತ್ಯ ,  ಈ ದಿಕ್ಕಿನಲ್ಲಿ ಒಟ್ಟಾಗಿ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ  ನಮ್ಮ ಮುಂದೆ ದೊಡ್ಡ ಜವಾಬ್ದಾರಿ ಇದೆ. ಭವಿಷ್ಯದ ಪೀಳಿಗೆಗೆ ಸುಸ್ಥಿರ ಬೆಳವಣಿಗೆ ಮತ್ತು ಪರಿಸರಕ್ಕಾಗಿ ನಾವು ಒಂದಾಗಿ ನಿರ್ಣಾಯಕ ಮಾರ್ಗಸೂಚಿಯನ್ನು ಒದಗಿಸಬೇಕಿದೆ ಎಂದು ಎಂದು ರಾವ್ ಹೇಳಿದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್
July 9, 2025
7:18 AM
by: ದ ರೂರಲ್ ಮಿರರ್.ಕಾಂ
ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ | ದೆಹಲಿಗೆ ಎಲ್ಲೋ ಅಲರ್ಟ್‌ – ಮಳೆ ಎಲ್ಲೆಲ್ಲಿ…?
July 9, 2025
7:06 AM
by: ದ ರೂರಲ್ ಮಿರರ್.ಕಾಂ
ಕೃಷಿ ವಲಯದಲ್ಲಿ ರೈತ ಕಲ್ಯಾಣಕ್ಕೆ ಒತ್ತು | ರಾಷ್ಟ್ರ ನಿರ್ಮಾಣದಲ್ಲಿ ರೈತರ ಕೊಡುಗೆ ಅಪಾರ
July 9, 2025
6:57 AM
by: The Rural Mirror ಸುದ್ದಿಜಾಲ
ಕೃಷಿಯಲ್ಲಿ ದೂರ ಶಿಕ್ಷಣ ಕುರಿತ ಕಾರ್ಯಗಾರ
July 9, 2025
6:54 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group