ಸೌರಶಕ್ತಿ ಚಾಲಿತ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಒಡಿಸ್ಸಾದಲ್ಲಿ ಹೆಜ್ಜೆ | ಕೃಷಿ ಉತ್ಪನ್ನಗಳ ದಾಸ್ತಾನಿಗೆ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಬಹುದೇ…?

August 27, 2024
11:13 AM
ಸೌರಶಕ್ತಿ ಚಾಲಿತ ಕೋಲ್ಡ್ ಸ್ಟೋರೇಜ್ ಸ್ಥಾಪನೆಯಿಂದ ಕೃಷಿ ಉತ್ಪನ್ನಗಳ ಸಂಗ್ರಹದಲ್ಲಿ ಕ್ರಾಂತಿಯಾಗಲಿದೆ. ಇದರಿಂದ ಆಹಾರ ಉತ್ಪನ್ನವು ವ್ಯರ್ಥವಾಗುವುದನ್ನು ಕಡಿಮೆ ಮಾಡಿ ರೈತರ ಆದಾಯವನ್ನೂ ಸುಸ್ಥಿರಗೊಳಿಸಲಿದೆ.

ಒಡಿಸ್ಸಾದಲ್ಲಿ ಸೌರಶಕ್ತಿ ಚಾಲಿತ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಮೂಲಕ ಕೃಷಿ ಉತ್ಪನ್ನಗಳ ಸಂಗ್ರಹದಲ್ಲಿ, ದಾಸ್ತಾನುಗಳಲ್ಲಿ ಕ್ರಾಂತಿಯಾಗಲಿದೆ ಎನ್ನುವ ವಿಶ್ವಾಸವನ್ನು ಅಲ್ಲಿನ ಆಡಳಿತ ಹಾಗೂ ಕೃಷಿ ವಲಯ ಚರ್ಚಿಸುತ್ತಿದೆ.

Advertisement

ಕೆಲವು ಸಮಯಗಳ ಹಿಂದೆ ಒಡಿಸ್ಸಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು, ಇಲ್ಲಿನ ಕೃಷಿ ಭವನಕ್ಕೆ ಭೇಟಿ ನೀಡಿದ ವೇಳೆ ಭಾರತೀಯ ಕಿಸಾನ್‌ ಸಂಘ ಹಾಗೂ ಗ್ರಾಮ ವಿಕಾಸ ಪರಿಷತ್‌ ಮತ್ತು ಇತರ ರೈತ ಸಂಘಟನೆಗಳ ಪ್ರಮುಖರ ಜೊತೆ ಚರ್ಚೆ ಮಾಡಿದಾಗ,  ಕೃಷಿ ಉತ್ಪನ್ನಗಳ ಶೇಖರಣಾ ವ್ಯವಸ್ಥೆಗೆ ಪರಿಸರ ಸ್ನೇಹಿ ಯೋಚನೆಗಳ ಅಗತ್ಯವಿದೆ ಎನ್ನುವ ಚರ್ಚೆ ಬಂದಾಗ, “ಶೇಖರಣಾ ಸೌಲಭ್ಯಗಳನ್ನು ಬಲಪಡಿಸುವ ಮೊದಲ ಹಂತದಲ್ಲಿ, ರಾಜ್ಯದ 58 ಉಪವಿಭಾಗಗಳಲ್ಲಿ  ಕನಿಷ್ಠ ಒಂದು ಶೈತ್ಯಾಗಾರವನ್ನು ನಿರ್ಮಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಉಪ-ವಿಭಾಗ ಮಟ್ಟದಲ್ಲಿ ಇಂತಹ ಸೌಲಭ್ಯಗಳು ರೈತರಿಗೆ ಅವರ ಬೆಳೆ ಕೊಯ್ಲು ನಂತರ ನಷ್ಟವನ್ನು ಕಡಿಮೆ ಮಾಡುವ ಮೂಲಕ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸುವ ಮೂಲಕ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದರು.

ಇದೀಗ ರಾಜ್ಯದಲ್ಲಿ ಸೌರಶಕ್ತಿ ಚಾಲಿತ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಅಲ್ಲಿನ ಸರ್ಕಾರ ಮುಂದಾಗಿದೆ. ಈ ಬಗ್ಗೆ  ಅಗತ್ಯ ಮಾಹಿತಿಯನ್ನು ಇನ್ಫಿಕೋಲ್ಡ್ ಒದಗಿಸಿದೆ.  ಸೌರಶಕ್ತಿ ಚಾಲಿತ ಕೋಲ್ಡ್ ಸ್ಟೋರೇಜ್ ಸ್ಥಾಪನೆಯಿಂದ ಕೃಷಿ ಉತ್ಪನ್ನಗಳ ಸಂಗ್ರಹದಲ್ಲಿ ಕ್ರಾಂತಿಯಾಗಲಿದೆ. ಇದರಿಂದ ಆಹಾರ ಉತ್ಪನ್ನವು ವ್ಯರ್ಥವಾಗುವುದನ್ನು ಕಡಿಮೆ ಮಾಡಿ ರೈತರ ಆದಾಯವನ್ನೂ ಸುಸ್ಥಿರಗೊಳಿಸಲಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಸೌರಶಕ್ತಿ ಚಾಲಿತ ಹಸಿರುಮನೆಗಳನ್ನು ಸ್ಥಾಪಿಸಲಾಗುವುದು ಎಂದು ಒಡಿಸ್ಸಾದ ಕೃಷಿ ಸಚಿವ ಕನಕವರ್ಧನ್ ಸಿಂಗ್‌ದೇವ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಅವರು ಉಲ್ಲೇಖಿಸಿದ್ದಾರೆ. ಸಿಂಗ್ ದೇವು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಮತ್ತು ಉಪವಿಭಾಗಗಳಲ್ಲಿ ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಹಾಲು ಆಧಾರಿತ ಉತ್ಪನ್ನಗಳ ಸಂರಕ್ಷಣೆಗಾಗಿ ಶೀತಲ ಶೇಖರಣೆಗಳನ್ನು ತೆರೆಯುವ ಕುರಿತು ಚರ್ಚಿಸಲಾಯಿತು.

ಒಡಿಶಾದ ಹವಾಮಾನಕ್ಕೆ ಸೂಕ್ತವಾದ ಕೋಲ್ಡ್ ಸ್ಟೋರೇಜ್‌ಗಳ ಸ್ಥಾಪನೆಯ ವೆಚ್ಚ ಮತ್ತು ಸೇವಾ ಪೂರೈಕೆದಾರರು ಮತ್ತು  ತಜ್ಞರಿಂದ ಹವಾಮಾನ ಪರಿಸ್ಥಿತಿಗಳು ಸೇರಿದಂತೆ ವಿವಿಧ ಅಂಶಗಳ ಕುರಿತು ಮಾಹಿತಿಗಳ ಬಗ್ಗೆ ಚರ್ಚೆ ನಡೆದಿದೆ.

During a meeting at Krushi Bhavan on Monday,‌ Odissa  Minister of Agriculture & Farmers’ Empowerment, Energy, Kanak Vardhan Singh Deo emphasized the importance of setting up climate-friendly and solar powered cold storages in Odisha.

The meeting, presided over by Singh Deo, also focused on the need to open cold storages for the preservation of fruits, vegetables, milk, and milk-based products in all districts and sub-divisions of the State.

The Deputy Chief Minister familiarized himself with the different factors, such as the cost of setting up cold storages that are suitable for Odisha’s climate and weather conditions, from service providers and domain experts. He emphasized the need to establish climate-friendly cold storages in response to climate change. The meeting also discussed the establishment of solar-powered cold storages in line with the Prime Minister’s focus on using renewable and solar energy for sustainable development.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ
April 13, 2025
7:42 AM
by: The Rural Mirror ಸುದ್ದಿಜಾಲ
ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!
April 13, 2025
7:03 AM
by: ನಾ.ಕಾರಂತ ಪೆರಾಜೆ
2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ
April 13, 2025
6:38 AM
by: ದ ರೂರಲ್ ಮಿರರ್.ಕಾಂ
ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group