#CloudBurst | ಮೇಘಸ್ಫೋಟ ಹಿಮಾಚಲದ ಗುಡ್ಡಗಾಡಿನ ಪ್ರದೇಶದಲ್ಲಿಯೇ ಏಕೆ ಹೆಚ್ಚು ಸಂಭವಿಸುತ್ತದೆ…?

August 14, 2023
4:57 PM
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಮೇಘಸ್ಫೋಟ ಉಂಟಾಗುತ್ತಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ್‌ ಪ್ರದೇಶಗಳಲ್ಲಿಯೇ ಏಕೆ ಹೆಚ್ಚು ಮೇಘಸ್ಫೋಟ ಸಂಭವಿಸುತ್ತದೆ...?

ಕೆಲ ದಿನಗಳ ಹಿಂದಷ್ಟೇ ಹಿಮಾಚಲ ಪ್ರದೇಶ ಸೇರಿದಂತೆ ಆಸುಪಾಸಿನ ರಾಜ್ಯದಲ್ಲಿ ಭಾರೀ ಮಳೆಯಾಗಿತ್ತು. ಅದರಲ್ಲೂ ಹಿಮಾಚಲ ಹಾಗೂ ಗುಡ್ಡಗಾಡು ಪ್ರದೇಶದಲಿ ಮೇಘಸ್ಫೋಟ ಸಂಭವಿಸಿತ್ತು. ಈ ಘಟನೆಯಿಂದ ಸುಮಾರು 100 ಕ್ಕೂ ಹೆಚ್ಚು ಭಾರೀ ಮಳೆಗೆ ಬಲಿಯಾಗಿದ್ದರು. ಇದೀಗ ಮತ್ತೆ ಮೇಘಸ್ಫೋಟ, ಭಾರೀ ಮಳೆಯಾಗುತ್ತಿದೆ. ಈಗಾಗಲೇ 20ಕ್ಕೂ ಹೆಚ್ಚು ಜನರು ಭಾರೀ ಮಳೆಗೆ ಬಲಿಯಾಗಿದ್ದಾರೆ. ಹಿಮಾಚಲ ಹಾಗೂ ಆಸುಪಾಸಿನ ರಾಜ್ಯಗಳ ಗುಡ್ಡಗಾಡು ಪ್ರದೇಶಗಳಲ್ಲಿಯೇ ಏಕೆ ಮೇಘಸ್ಫೋಟ, ಭಾರೀ ಮಳೆಯಾಗುತ್ತದೆ…?

Advertisement

ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಗುಡ್ಡಗಾಡು ರಾಜ್ಯಗಳು ಭಾರೀ ಮಳೆಯ ತೀವ್ರತೆಗೆ ಸಾಕ್ಷಿಯಾಗುತ್ತಿವೆ. ಧಾರಾಕಾರ ಮಳೆಯು ಪ್ರವಾಹ ಮತ್ತು ಭೂಕುಸಿತಗಳನ್ನು ಉಂಟುಮಾಡುತ್ತಿದೆ, ಅಪಾರ ಹಾನಿಯನ್ನುಂಟುಮಾಡುತ್ತದೆ. ಸರ್ಕಾರ, ಇಲಾಖೆಗಳು ಎಷ್ಟು ಎಚ್ಚರಿಕೆ ವಹಿಸಿದರೂ ಪ್ರಕೃತಿಯ ಈ ಮುನಿಸಿಗೆ ಯಾವ ಮುಂಜಾಗ್ರತಾ ಕ್ರಮಗಳೂ ಸಾಕಾಗುತ್ತಿಲ್ಲ. ನಿರಂತರ ಮಳೆಯಿಂದಾಗಿ ಈ ರಾಜ್ಯಗಳಲ್ಲಿ ವಾಹನಗಳು ಕೊಚ್ಚಿಹೋಗಿವೆ, ಕಟ್ಟಡಗಳನ್ನು ನೆಲಸಮಗೊಳ್ಳುತ್ತಿವೆ, ಸೇತುವೆಗಳು ನಾಶವಾಗಿವೆ. ಶಿಮ್ಲಾದಲ್ಲಿ  ದೇವಾಲಯದ ಕುಸಿತ ಸಂಭವಿಸಿದೆ.  ಕಳೆದ 24 ಗಂಟೆಗಳಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ  ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ.

Advertisement

Advertisement

ಒಂದು ಗಂಟೆಯೊಳಗೆ 10 ಚದರ ಕಿಲೋಮೀಟರ್‌ಗಳಲ್ಲಿ 10 ಸೆಂಟಿಮೀಟರ್‌ಗಿಂತ ಹೆಚ್ಚು ಮಳೆಯು ಸಂಭವಿಸಿದಾಗ ಮೇಘಸ್ಫೋಟಗಳು ಸಂಭವಿಸುತ್ತವೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಮೇಲೆ ಕೇಂದ್ರೀಕೃತವಾಗಿರುವ ಮಳೆಯ ಮೋಡಗಳು ಸಾಧಾರಣವಾಗಿ ಬೆಟ್ಟಗಳ ನಡುವೆ ಸಿಲುಕಿಕೊಂಡು ಮಳೆಯ ಚಟುವಟಿಕೆ ನಡೆದಾಗ ಭಾರೀ ಮಳೆಗೆ ಕಾರಣವಾಗುತ್ತದೆ. ದೇಶದ ಎಲ್ಲಾ ಕಡೆಯೂ ಮುಂಗಾರು ಕಡಿಮೆಯಾದರೂ ಹಿಮಾಚಲ, ಉತ್ತರಾಖಂಡದ ಈ ಪ್ರದೇಶಗಳಲ್ಲಿ ಮಳೆ ಇರುತ್ತದೆ. ಇದಕ್ಕೆ ಕಾರಣ ಭಾರೀ ಬೆಟ್ಟಗಳು. ಭಾರೀ ಮಳೆಯಾದ ತಕ್ಷಣವೇ ಇಲ್ಲಿನ ಮಣ್ಣು ಸಡಿಲಗೊಂಡು ಗುಡ್ಡ ಕುಸಿತ ಸಂಭವಿಸುತ್ತದೆ.ಈಗಲೂ ಅದೇ ಸಂಭವಿಸುತ್ತಿದೆ.

(Source: Agencies)

 

Photo : AFP

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ
August 15, 2025
2:23 PM
by: ಸಾಯಿಶೇಖರ್ ಕರಿಕಳ
ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ
August 15, 2025
6:54 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group