ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರ್ಯಾಣ, ದಿಲ್ಲಿಯಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟವಾಗಿದ್ದು ಭಾರೀ ಮಳೆಯಿಂದ ಗುಡ್ಡಗಳು ಭಾರೀ ಸದ್ದಿನೊಂದಿಗೆ ಕುಸಿದಿದೆ. ಈ ಭಯಾನಕ ದೃಶ್ಯ ಜನರನ್ನು ಭಯಭೀತರನ್ನಾಗಿಸಿದೆ.
ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಜಲ ಪ್ರಳಯಕ್ಕೆ ಒಟ್ಟು 28 ಮಂದಿ ಬಲಿಯಾಗಿದ್ದಾರೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಿಮಾಚಲ ಪ್ರದೇಶದೊಂದೇ ಕಡೆ 20 ಮಂದಿ ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ದಿಲ್ಲಿ ಸೇರಿದಂತೆ ಹಲವೆಡೆ ಭಾರೀ ಮಳೆ ಆಗುತ್ತಿದ್ದು, ಮುಂದಿನ ಕೆಲ ದಿನಗಳ ಕಾಲ ಈ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಗುಡ್ಡ ಕುಸಿತ.#HimachalPradesh #HeavyRain #cloudbursts #Himachalrain #Rainfall #rain pic.twitter.com/m1MHjZNvbu
— theruralmirror (@ruralmirror) July 10, 2023
Advertisement
ಭಾರೀ ಮಳೆಗೆ ನಗರದಲ್ಲೆಲ್ಲಾ ನೀರು ಹರಿಯುತ್ತಿದೆ. ವಾಹನಗಳು ತೇಲಿ ಹೋಗುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಬಂದಿವೆ. ಬೃಹತ್ ಗಾತ್ರದ ಮರಗಳು ಮಣ್ಣುಮಿಶ್ರಿತ ನೀರಿನೊಂದಿಗೆ ತೇಲಿ ಬರುತ್ತಿವೆ. ನಗರದಲ್ಲಿ ಕೆಸರುಮಣ್ಣಿನೊಂದಿಗೆ ಮರಗಳು ಬಂದು ನಿಂತಿವೆ. ಹಲವು ಜನ ವಸತಿ ಪ್ರದೇಶಗಳು ನೀರಿನಿಂದ ಆವೃತವಾಗಿವೆ. ನದಿ ಪಾತ್ರದ ಅಕ್ಕ ಪಕ್ಕದ ನಿವಾಸಿಗಳ ಪರಿಸ್ಥಿತಿಯಂತೂ ಭೀಕರವಾಗಿದೆ.(ವಿಡಿಯೋ ಇದೆ)
ಭಯಾನಕ ದೃಶ್ಯಗಳು…
ಶಿಮ್ಲಾ, ಸಿರ್ಮೌರ್, ಲಾಹೌಲ್ ಮತ್ತು ಸ್ಪಿತಿ, ಚಂಬಾ ಮತ್ತು ಸೋಲನ್‌ನಲ್ಲಿ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳು ಉಂಟಾಗಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕುಲು-ಮನಾಲಿ ರಸ್ತೆಯಲ್ಲಿ ನದಿಯ ಉಬ್ಬರ ಮತ್ತು ಬಂಡೆಗಳು ಉರುಳಿಬಿದ್ದು ರಸ್ತೆ ಸಂಚಾರಕ್ಕೆ ಅಡೆತಡೆಯುಂಟಾಗಿದೆ