ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ | ದ ಕ ಜಿಲ್ಲೆಗೆ ಹೆಚ್ಚಿನ ಅನುದಾನ | ಸುಳ್ಯಕ್ಕೆ ದಕ್ಕದ ಸೀಎಂ ಸ್ಪೆಶಲ್‌ ಅನುದಾನ | ಸುಳ್ಯಕ್ಕೆ ವಿಶೇಷ ಪ್ಯಾಕೇಜ್‌ ? |

July 21, 2021
2:33 PM

ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ದಿ ಯೋಜನೆಯಡಿಯಲ್ಲಿ 1277  ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿದ್ದು ಅದರಲ್ಲಿ  ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟಾಗಿ 95 ಕೋಟಿ ರೂಪಾಯಿ ಲಭ್ಯವಾಗಿದೆ. ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಅನುದಾನ ಲಭ್ಯವಾದ ಎರಡನೇ ಜಿಲ್ಲೆ ದ ಕ ಜಿಲ್ಲೆಯಾಗಿದೆ. ಆದರೆ ಈ ಪಟ್ಟಿಯಲ್ಲಿ ಸುಳ್ಯದ ಹೆಸರಿಲ್ಲ ಹಾಗೂ ಸುಳ್ಯದ ಸಚಿವರು ಇರುವುದರಿಂದ ಅನುದಾನಗಳ ವಿಶೇಷ ಪ್ಯಾಕೇಜ್‌ ಲಭ್ಯವಾಗಲಿದೆ ಎಂಬ ಚರ್ಚೆ ಈಗ ಆರಂಭವಾಗಿದೆ.

ಮುಖ್ಯಮಂತ್ರಿಗಳ ಬದಲಾವಣೆ ಸೇರಿದಂತೆ ರಾಜ್ಯದಲ್ಲಿ ರಾಜಕೀಯದ ವಿವಿಧ ಚರ್ಚೆಗಳ ನಡುವೆಯೇ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ವಿಶೇಷವಾಗಿ ಅನುದಾನಗಳ ಹಂಚಿಕೆ ಮಾಡಿದ್ದಾರೆ. ಈ ಅನುದಾನ ಹಂಚಿಕೆ ಪಟ್ಟಿ ಪ್ರಕಾರ ಅತ್ಯಧಿಕವಾಗಿ ಬೆಳಗಾವಿ ಜಿಲ್ಲೆಗೆ 121  ಕೋಟಿ ರೂಪಾಯಿ ಹಂಚಿಕೆ ಮಾಡಿದ್ದರೆ ಎರಡನೇ ಅಧಿಕ ಜಿಲ್ಲೆಯಾಗಿ ದ ಕ ಜಿಲ್ಲೆಗೆ 95 ಕೋಟಿ ರೂಪಾಯಿ ನೀಡಿದ್ದಾರೆ. ಅದರಲ್ಲಿ  ಸುಳ್ಯ ವಿಧಾನಸಭಾ ಕ್ಷೇತ್ರದ ಹೆಸರು ಕಾಣಿಸುತ್ತಿಲ್ಲ. ಆದರೆ ಸುಳ್ಯದ ಸಚಿವರು ಕ್ಯಾಬಿನೆಟ್‌ ನಲ್ಲಿ ಇರುವುದರಿಂದ ಸುಳ್ಯದ ಬೇಡಿಕೆಗಳ ಪಟ್ಟಿ ಹೆಚ್ಚಿರುವುದರಿಂದ ಮುಂದೆ ವಿಶೇಷ ಪ್ಯಾಕೇಜ್‌ ಘೋಷಣೆಯಾಗಲಿದೆ  ಎಂಬ ಮಾಹಿತಿ ಇದೆ. ಸಚಿವರು ಇರುವ ಪ್ರದೇಶಗಳಿಗೆ ಈ ವಿಶೇಷ ಪ್ಯಾಕೇಜ್‌ ನಲ್ಲಿ ಹೆಚ್ಚಿನ ಅನುದಾನ ನೀಡಿಲ್ಲ ಎಂಬುದು  ಸದ್ಯದ ಮಾಹಿತಿಯಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿಗೆ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಸಂಪರ್ಕಕ್ಕೆ ಲಭ್ಯವಾಗಿಲ್ಲ.

ಈ ಹಿಂದೆ ಕೂಡಾ ಸುಳ್ಯಕ್ಕೆ ವಿಶೇಷ ಪ್ಯಾಕೇಜ್‌ ಘೋಷಣೆಯನ್ನು  ಅಂದು ಮುಖ್ಯಮಂತ್ರಿಯಾಗಿದ್ದ ವೇಳೆ ಡಿ ವಿ ಸದಾನಂದ ಗೌಡ ಅವರು ಮಾಡಿದ್ದರು. ಇದೀಗ ಅದೇ ಮಾದರಿಯಲ್ಲಿ  ವಿಶೇಷ ಪ್ಯಾಕೇಜ್‌ ಘೋಷಣೆಯಾಗಲಿದೆ ಎಂಬುದು ಈಗ ಚರ್ಚೆ ಆಗುತ್ತಿರುವ ಸಂಗತಿಯಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ – ಬಾಂಗ್ಲಾದೇಶದ ವಿಜ್ಞಾನಿಗಳಿಂದ ಹೊಸ ತಂತ್ರಜ್ಞಾನಕ್ಕೆ ಪೇಟೆಂಟ್
July 31, 2026
10:20 AM
by: ದ ರೂರಲ್ ಮಿರರ್.ಕಾಂ
ಭಾರತದ ಕೃಷಿ ರಫ್ತು ಪಟ್ಟಿಯಲ್ಲಿ ಈಗ 500ಕ್ಕೂ ಹೆಚ್ಚು ಉತ್ಪನ್ನಗಳು..! ಭಾರತದ ಕೃಷಿ ಕ್ಷೇತ್ರಕ್ಕೆ ಇದು ದೊಡ್ಡ ಸುದ್ದಿ-ರೈತರಿಗೆ ಹೊಸ ಜಾಗತಿಕ ಅವಕಾಶ
July 31, 2026
10:02 AM
by: ದ ರೂರಲ್ ಮಿರರ್.ಕಾಂ
ಹೊಂಬಾಳೆ ಕಳ್ಳರ ಹಾವಳಿ : ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದ ಕಳ್ಳತನ
July 31, 2026
9:45 AM
by: ದ ರೂರಲ್ ಮಿರರ್.ಕಾಂ
ಕೊಡಗಿನಲ್ಲಿ ಚೇತರಿಕೆ ಕಂಡ ಮಳೆ- ಮೈಕೊರೆಯುವ ಚಳಿ, ಕಾವೇರಿ ನೀರಿನ ಮಟ್ಟ ಏರಿಕೆ
July 31, 2026
7:23 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror