Opinion

ನೀವು ಡಿವಿಡೆಂಡ್‌ ಪಡೆದುಕೊಂಡಿದ್ದೀರಾ…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಹುತೇಕ ಸದಸ್ಯರೂ ಹಳ್ಳಿಗರು. ಸಹಕಾರಿ ಸಂಘಗಳ ನಿಯಮಗಳನ್ನು ಅಷ್ಟೊಂದು ಅಧ್ಯಯನ ಮಾಡಿದವರು ಹೆಚ್ಚಿನ  ಜನರಿಲ್ಲ. ಹಾಗಾಗಿ ಅನೇಕ ನಿಯಮಗಳನ್ನು ಅರ್ಥೈಸಿಕೊಳ್ಳುವುದೂ ಅನೇಕರುಗಳಿಗೆ ಕಷ್ಟವಾಗುತ್ತದೆ. ಸಹಕಾರಿ ಸಂಘ-ಸಾಲ-ಉಳಿತಾಯ ಇಷ್ಟೇ ಆಗಿದೆ.

Advertisement

ಇತ್ತೀಚೆಗೆ ಬಹುತೇಕ ಸಹಕಾರಿ ಸಂಘಗಳೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಾಕಷ್ಟು ಲಾಭ ಗಳಿಸುತ್ತಿವೆ.ಗಳಿಸಿದ ಲಾಭದಲ್ಲಿ ಒಂದು ಭಾಗವನ್ನು ತನ್ನ ಸದಸ್ಯರಿಗೆ ಡಿವಿಡೆಂಟ್ ಮುಖಾಂತರ ಹಂಚುತ್ತಲೂ ಇವೆ.ಆದರೆ ಸದಸ್ಯರಿಗಾಗಿ ಹಂಚಲು ಮೀಸಲಿಟ್ಟ ಡಿವಿಡೆಂಟ್ ಮೊತ್ತದ ಒಂದು ದೊಡ್ಡ ಭಾಗವನ್ನು ಸದಸ್ಯರು ಪಡೆದುಕೊಳ್ಳದೇ ಇರುವುದೂ ಗೋಚರಿಸುತ್ತಿದೆ.

ಕಾಲಕಾಲಕ್ಕೆ ಮರುನಿಗದಿಸಲಾದ ಸದಸ್ಯತನಾ ಶುಲ್ಕವನ್ನು ಪಾವತಿಸದ ಸದಸ್ಯರುಗಳಿಗೆ,ಸುಸ್ತಿ‌ ಸಾಲ ಹೊಂದಿದ ಸದಸ್ಯರುಗಳಿಗೆ ಮತ್ತು ಇದೇ ಮಾದರಿಯಲ್ಲಿ ನಿಗದಿಸಲಾದ ಕಾರಣಗಳಿಗಾಗಿ ಒಂದಷ್ಟು ಸದಸ್ಯರುಗಳ ಡಿವಿಡೆಂಟ್ ಮೊತ್ತ ಸಂದಾಯ ಮಾಡಲು ಸಹಕಾರ ಸಂಘ ನಿರಾಕರಿಸ ಬಹುದು.ಮೃತ ಸದಸ್ಯರುಗಳ ಹೆಸರಿನಲ್ಲಿ ಸಂದಾಯವಾಗ ಬೇಕಿರುವ ಡಿವಿಡೆಂಟ್ ಮೊತ್ತದ ವಿತರಣೆಯಲ್ಲೂ ಒಂದಷ್ಟು ಅಡೆತಡೆಗಳು ಎದುರಾಗ ಬಹುದು.ಆದರೆ ಈ ವರ್ಗದ ಸದಸ್ಯರ ಹೊರತಾಗಿಯೂ ದೊಡ್ಡ ಸಂಖ್ಯೆಯ ಸದಸ್ಯರುಗಳು ಡಿವಿಡೆಂಟ್ ಪಡೆದುಕೊಳ್ಳುತ್ತಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಕಾರಣ ಹುಡುಕುತ್ತಾ ಹೋದಂತೆ ಒಂದಷ್ಟು ವಿಷಯಗಳು ಬೆಳಕಿಗೆ ಬಂದವು.

ಒಂದಷ್ಟು ಸದಸ್ಯರು ಸಹಕಾರ ಸಂಘ ಲಾಭ ಗಳಿಸ ಬಲ್ಲದು ಮತ್ತು ಬಂದ ಲಾಭದಲ್ಲಿ ನಮಗೂ ಒಂದು ಭಾಗ ಕೊಡಬಹುದು ಎಂಬ ಕಲ್ಪನೆಯೂ ಇಲ್ಲದವರು.ಡಿವಿಡೆಂಟ್ ಎಂಬ ಪದದ ಅರ್ಥವೇ ಇವರಿಗಾಗಿಲ್ಲ.ಸಹಕಾರ ಸಂಘದ ಆರ್ಥಿಕ ಪರಿಸ್ಥಿತಿಯ ಬಗ್ಗೆ, ಡಿವಿಡೆಂಟ್ ಬಗ್ಗೆ ತಿಳಿದು ಕೊಳ್ಳದ ಸದಸ್ಯರುಗಳ ಸಂಖ್ಯೆಯೂ ಸಣ್ಣದೇನಲ್ಲ. ಯಾವ ಸದಸ್ಯರುಗಳಿಗೆ ಲಾಭಾಂಶ ಹಂಚಿಕೆಯಾಗ್ತದೆ ಎಂಬುದು ಬಹುತೇಕ ಸದಸ್ಯರುಗಳಿಗೂ ಗೊತ್ತಿಲ್ಲ.ತಾವೇನೂ ವ್ಯವಹಾರ ಮಾಡಿಲ್ಲ ಆದ್ದರಿಂದ ಸದಸ್ಯರಾಗಿದ್ದರೂ ತಮಗೆ ಲಾಭಾಂಶ ಸಿಗದು ಅಂತ ತಮ್ಮಷ್ಟಕ್ಕೆ ತಾವೇ ಊಹಿಸಿಕೊಂಡವರ ಸಂಖ್ಯೆ ಅಗಾಧವಾದದ್ದು.
ತಮಗೆ ವೈಯಕ್ತಿಕವಾಗಿ ಲಾಭಾಂಶ ಹಂಚಿಕೆಯ ಮಾಹಿತಿ ಬಂದಿಲ್ಲ ಎಂಬ ಕಾರಣಕ್ಕಾಗಿಯೂ ಈ ಬಗ್ಗೆ ವಿಚಾರಿಸದ ಸದಸ್ಯರುಗಳೂ ಇದ್ದರು.ತಾವು ಕಚೇರಿಗೆ ಹೋದಾಗ ಸಿಬ್ಬಂದಿಗಳು ಅವರಾಗಿಯೇ ಕರೆದು ಲಾಭಾಂಶದ ಬಗ್ಗೆ ಹೇಳಿಲ್ಲದ ಕಾರಣ ತಾವು ಲಾಭಾಂಶ ಪಡೆದುಕೊಂಡಿಲ್ಲ ಅಂತ ಒಂದಷ್ಟು ಸದಸ್ಯರ ದೂರು.

Advertisement

ಇವೆಲ್ಲದರ ಜೊತೆಗೆ ಹಳ್ಳಿಗರೇ ಬಹುತೇಕ ಸದಸ್ಯರಾಗಿರುವ ,ಆಧುನಿಕ ವ್ಯವಸ್ಥೆಗಳು ಕನಿಷ್ಟ ಮಟ್ಟದಲ್ಲಿರುವ ಸಂಸ್ಥೆಗಳಿಂದ ಅತ್ಯಾಧುನಿಕ ವ್ಯವಸ್ಥೆಯ,ಸೇವೆಯ ಬೇಡಿಕೆ ಮುಂದಿಡುವವರೂ ಇದ್ದಾರೆ. ಕೊನೆಗೆ ಹೀಗೆ ವರ್ಷಾನುಗಟ್ಟಲೆ ಸದಸ್ಯರು ಪಡೆಯಲು ವಿಫಲರಾದ ಲಾಭಾಂಶ ಮೊತ್ತ ಏನಾಗ್ತದೆ ಎಂಬ ಪ್ರಶ್ನೆ ಇದೆ.ಒಂದು ಹಂತದಲ್ಲಿ ಇಂತಹ ಮೊತ್ತವನ್ನು ಸಂಸ್ಥೆಯ ಕ್ಷೇಮನಿಧಿಗೆ ಸಂಸ್ಥೆ ವರ್ಗಾಯಿಸೀತು.

Advertisement
ಬರಹ :
ರಮೇಶ ದೇಲಂಪಾಡಿ
ರಮೇಶ್‌ ದೇಲಂಪಾಡಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!

ಗ್ರಾಮೀಣ ಮಟ್ಟದ ಆರ್ಥಿಕ‌ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…

3 hours ago

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ

ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…

3 hours ago

ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…

4 hours ago

ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…

4 hours ago

ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…

13 hours ago

ಸ್ವಾತಂತ್ರ್ಯಕ್ಕಾಗಿ ಮದುವೆ

ಕುಟುಂಬ ಎಂಬುದು ಸಮಾಜದ ಆಧಾರ ಸ್ಥಂಭ. ಮದುವೆ ಎಂಬುದು ಈ ಸ್ಥಂಭದ ತಳಪಾಯ.…

14 hours ago