A beautiful redwood tree forest with vivid green colors
ರೆಡ್ ವುಡ್ಸ್ ಖ್ಯಾತಿ ಪಡೆಯಲು ಅದರದೇ ಅನೇಕ ವಿಶೇಷತೆಗಳನ್ನು ಹೊಂದಿದೆ. ಜಗತ್ತಿನಲ್ಲೇ ಅತಿ ಹಿರಿಯ ಮತ್ತು ಅತಿ ಎತ್ತರದ ” Living thing / ಸಜೀವ ವಸ್ತು” ಅಂತ ಹೇಳಲಾಗುವ ಕೋಸ್ಟ್ ರೆಡ್ ವುಡ್ ಮರ, ಎರಡು ಸಾವಿರ ವರ್ಷ ಬದುಕಬಲ್ಲದು, 380 ಅಡಿ ಎತ್ತರ ಬೆಳೆಯಬಲ್ಲದು. ಮರದ ಬುಡ, ತನ್ನ ಪರಿಧಿಯನ್ನು ಇಪ್ಪತ್ತೈದು ಅಡಿಗಳಷ್ಟು ವಿಸ್ತರಿಸಬಲ್ಲದು.
ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದ್ರ ತೀರದಲ್ಲಿ ಹಬ್ಬಿರುವ ಈ ಮರದ ಕಾಡು, ಅದೆಷ್ಟೋ ಶತಶತಮಾನಗಳ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ವಿಶೇಷವಾಗಿ ಕರಾವಳಿ ರೆಡ್‌ವುಡ್‌ಗಳು ಅಥವಾ ಸಿಕ್ವೊಯಾ ಸೆಂಪರ್‌ವೈರೆನ್ಸ್, ಗ್ರಹದ ಅತಿ ಎತ್ತರದ ಮರಗಳಾಗಿವೆ. ಅವರು ಸುಮಾರು 400 ಅಡಿಗಳಷ್ಟು ಎತ್ತರವನ್ನು ತಲುಪಬಹುದು, ಇದು 37-ಅಂತಸ್ತಿನ ಗಗನಚುಂಬಿ ಕಟ್ಟಡಕ್ಕೆ ಸರಿಸುಮಾರು ಸಮನಾಗಿರುತ್ತದೆ-ಎಷ್ಟು ಎತ್ತರವಾಗಿದೆ ಅಂದರೆ, ರೆಡ್ ವುಡ್ ಮರದ ಕೆಳಗೆ ನಿಂತರೆ, ಇಡೀ ದಿನ ಪ್ರಯತ್ನಿಸಿದರು ಸ್ಪಷ್ಟವಾಗಿ ಮೇಲ್ಭಾಗವನ್ನು ನೋಡಲಾಗುವುದಿಲ್ಲ.
ಬರೀ ಹತ್ತು, ಹೆಚ್ಚೆಂದರೆ ಇಪ್ಪತ್ತು ಅಡಿ ಆಳಕ್ಕೆ ಬೇರು ಇಳಿಸುವ ಈ ಮರ, ಅಂಥ ಅಗಾಧವಾದ ದೈತ್ಯ ದೇಹವನ್ನು ಹೊರುವುದು ಹೇಗೆ? ಆಳವಿಲ್ಲದ ಬೇರುಗಳಿಲ್ಲದಿದ್ದರೂ ಅಷ್ಟೆತ್ತರ ಬೆಳೆದು ನಿಲ್ಲುವುದು ಹೇಗೆ? ಅಷ್ಟೆಲ್ಲ ವರ್ಷ ಬದುಕುವುದು ಹೇಗೆ?
ರೆಡ್ ವುಡ್ ಮರದ ತೊಗಟೆಯೇ ಸುಮಾರು ಒಂದು ಅಡಿಯಷ್ಟು ದಪ್ಪವಿದ್ದು, ಅದರಲ್ಲಿರುವ ಟೆನಿನ್ ಎಂಬ ಜೀವದ್ರವ, ಕೀಟಗಳು ಕೊರೆಯದಂತೇ, ಬೆಂಕಿ ಸುಡದಂತೇ, ರೆಂಬೆಗಳು ಮುರಿಯದಂತೇ ತೊಗಟೆಯನ್ನು ಗಟ್ಟಿಯಾಗಿಸುತ್ತದೆ. ಅತಿಹೆಚ್ಚು ತೇವಾಂಶವಿರುವ ಕಾಂಡಗಳಿರುವ ಕಾರಣ ಕಾಡ್ಗಿಚ್ಚೂ ಸುಡಲಾರದ ಮರವಿದು. ಜೊತೆಗೆ ಮರಗಳಲ್ಲೆಲ್ಲ, ಅತಿ ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಹೀರುವ ಮರವಾಗಿದ್ದು, ಗ್ಲೋಬಲ್ ವಾರ್ಮಿಂಗ್ ನ ಸಂದರ್ಭದಲ್ಲಿ ಇದರ ಉಪಯುಕ್ತತೆ ಅಪಾರ. ಎತ್ತರದಲ್ಲಿ ಮಾತ್ರ ಗೂಡು ಕಟ್ಟಿ ಮರಿ ಮಾಡಬಲ್ಲ ಹತ್ತು ಹಲವು ಪಕ್ಷಿಗಳಿಗೆ, ತವರು ಈ ಮರ!
ಇದು ತುಂಬ ತುಂಬ ವಿಶೇಷ ನೋಡಿ! : ರೆಡ್ ವುಡ್ ಮರದ ಬೇರುಗಳು ಮೇಲ್ಮುಖವಾಗಿ ಬೆಳೆದು, ಇನ್ನೊಂದು ರೆಡ್ ವುಡ್ ಮರದ ಬೇರಿಗೋಸ್ಕರ ನೂರಾರು ಮೀಟರ್, ನೆಲದೊಳಗೇ ಹಬ್ಬಿ ಹುಡುಕುತ್ತವೆ. ಸಿಕ್ಕ ಬೇರುಗಳನ್ನು ಗಟ್ಟಿಯಾಗಿ ಒಂದಕ್ಕೊಂದು ಹೆಣೆದುಕೊಳ್ಳುತ್ತವೆ. ಭೂಮಿಯಡಿಯಲ್ಲಿ ಬೇರುಗಳ ಜಾಲ ಹರಡಿ, ಪ್ರತೀ ಮರವೂ ಇನ್ನೊಂದು ಮರಕ್ಕೆ ಆಧಾರವಾಗಿ ನಿಲ್ಲುತ್ತದೆ. ಪುಟ್ಟ ಸಸಿಗಳನ್ನೂ ತಮ್ಮ ಬೇರಿನೊಳಕ್ಕೆ ಬೆಸೆದುಕೊಂಡು, ಅವೂ ತಮ್ಮಂತೇ ಬೆಳೆಯಲು ಉತ್ತೇಜಿಸುತ್ತವೆ. ಒಂದರೊಟ್ಟಿಗೇ ಇನ್ನೊಂದೂ ಮುಗಿಲೆತ್ತರಕ್ಕೆ ಬೆಳೆದು, ರೆಡ್ ವುಡ್ ಛಾವಣಿಯಾಗಿ ಹರಡುತ್ತವೆ.
ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…
ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ ಗ್ರಾಮ ಪಂಚಾಯತಿಯನ್ನು ದತ್ತು ಸ್ವೀಕಾರ ಮಾಡಬೇಕೆಂದು…
ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು…
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿಗೆ ಸೂರ್ಯಕಾಂತಿ ಖರೀದಿಗೆ ಕೇಂದ್ರ ಅನುಮತಿ…
ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಅವರು ಅಗಿಲೆಯಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ…
ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಕರಾವಳಿ ಆಂಧ್ರಪ್ರದೇಶ, ಯಾಣಂ, ರಾಯಲಸೀಮಾ, ತೆಲಂಗಾಣ, ಕರ್ನಾಟಕ,…