ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಇತ್ತೀಚಿನ ಕೆಲ ವರ್ಷಗಳಲ್ಲಂತೂ ಕರಾವಳಿಯ ಗಡಿಯನ್ನೂ ಮೀರಿ ದೇಶ ವಿದೇಶಗಳಲ್ಲೂ ಕಂಬಳ ತನ್ನ ಪ್ರಖ್ಯಾತಿಯ ಮೂಲಕ ಸದ್ದು ಮಾಡುತ್ತಿದೆ. ಸುಮಾರು 800 ವರ್ಷಕ್ಕೂ ಹಳೆಯ ಇತಿಹಾಸವನ್ನು ಹೊಂದಿರುವ ಕಂಬಳ ಅಪ್ಪಟ ನೆಲದ ಕ್ರೀಡೆ. ಇದೀಗ ಕಂಬಳ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ನಿಜಕ್ಕೂ ಕರಾವಳಿಗರಿಗೆ ಹಾಗೂ ಕರಾವಳಿಯ ಗ್ರಾಮೀಣ ಭಾಗದ ಜನರಿಗೆ ಇದೊಂದು ಹೆಮ್ಮೆಯ ವಿಚಾರ.
ಕಂಬಳ ಅಂದ್ರೆ ನೆನಪಿಗೆ ಬರೋದೇ ಕರಾವಳಿ, ಕಾಂತಾರ ಸಿನಿಮಾ. ಇದೀಗ ಅಪ್ಪಟ ತುಳುನಾಡ ಸಂಸ್ಕೃತಿಯ ಅನಾವರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಆಗಲಿದೆ. ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ಕರಾವಳಿಗರ ಸಂಖ್ಯೆಗೆ ಕಡಿಮೆಯಿಲ್ಲ. ಬೆಂಗಳೂರಿನಲ್ಲಿ ಕಂಬಳ ನಡೆಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಕರಾವಳಿಯ ಸೊಬಗು ಕಂಬಳ ನಡೆಸಲು ಸಕಲ ಯೋಜನೆ ರೂಪಿಸಲಾಗುತ್ತಿದೆ. ಬೆಂಗಳೂರಿನ ತುಳು ಕೂಟದ 50ನೇ ವರ್ಷದ ಸಂಭ್ರಮದ ಸಲುವಾಗಿ ಕಂಬಳ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕಾಗಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಕಾಂತಾರ ಸಿನಿಮಾ ಬಂದ ನಂತರ ದೈವಾರಾಧನೆಯ ಜೊತೆಗೆ ಕಂಬಳದ ಬಗ್ಗೆಯೂ ತುಳುನಾಡು ಹೊರತಾದ ಜನರಿಗೆ ಕ್ರೇಜ್ ಹುಟ್ಟಿದ್ದು, ಹೀಗಾಗಿ ಕಂಬಳ ನೋಡಲು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಜನರು ಬರುತ್ತಿದ್ದಾರೆ. ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಒಂದು ಕಾಲದಲ್ಲಿ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಈ ಸ್ಪರ್ಧೆ ಇಂದು ತನ್ನ ಖ್ಯಾತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲೂ ಪಸರಿಸಿದೆ. ಒಟ್ಟಾರೆ ರಾಜ್ಯ ರಾಜಧಾನಿಯಲ್ಲೂ ಕಂಬಳದ ಸೊಬಗು ನೋಡಲು ದಿನಗಣನೆ ಆರಂಭವಾಗಿದೆ. ಇದಕ್ಕಿಂತ ಹೆಚ್ಚಿನದ್ದೂ ಏನು ಬೇಕು ನಮ್ಮ ಕನ್ನಡಿಗರಿಗೆ.