ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಕೇಂದ್ರ ನೌಕಾಯಾನ ಸಚಿವ ಸರ್ಬಾನಂದ ಸೋನೋವಾಲ್ ಕರಾವಳಿ ನೌಕಾಯಾನ ಮಸೂದೆ-2024ನ್ನು ಮಂಡಿಸಿದರು.
ಅಪರಾಹ್ನ ಸದನ ಮರು ಸಮಾವೇಶಗೊಂಡಾಗ ಸಚಿವ ಸರ್ಬಾನಂದ ಸೊನೊವಾಲ್, ಕರಾವಳಿ ಹಡಗು ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನನ್ನು ಕ್ರೋಢಿಕರಿಸಲು, ಕರಾವಳಿ ವ್ಯಾಪಾರ, ಭಾರತೀಯ ನಾಗರೀಕರ ಮಾಲೀಕತ್ವದ ಹಡಗುಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಪ್ರಯತ್ನಿಸುವ ಮಸೂದೆಯನ್ನು ಮಂಡಿಸಿದರು. ಕರಾವಳಿ ವ್ಯಾಪಾರದ ನಿಯಂತ್ರಣದಲ್ಲಿ ಉದ್ಭವಿಸುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ಶಾಸನವನ್ನು ತರಲಾಗಿದೆ. ಭಾರತೀಯ ಹಡಗುಗಳನ್ನು ಹೊರತು ಪಡಿಸಿ ಇತರ ಹಡಗುಗಳ ಪರವಾನಗಿ ಇಲ್ಲದೆ ಕರಾವಳಿ ನೀರಿನಲ್ಲಿ ವ್ಯಾಪಾರ ನಿಷೇಧಿಸುವ, ಒಳನಾಡು ಹಡಗುಗಳಿಗೆ ಕರಾವಳಿ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲು ಅನುಮತಿ ನೀಡುವ ನಿಂಬಂಧನೆಗಳನ್ನು ವಿಧೇಯಕ ಒಳಗೊಂಡಿದೆ ಎಂದು ಸಚಿವರು ಹೇಳಿದರು.
05.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಕೃಷಿಯಲ್ಲಿ ತಂತ್ರಜ್ಞಾನವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಮೂಲಕ ಅದರ ಪ್ರಯೋಜನ ರೈತರಿಗೆ ಸಿಗುವಂತೆ…
ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರಗಳಲ್ಲಿ ಮರಳು ಸಿಗಲಿ ಎಂಬ…
ಲಿವ್-ಇನ್-ರಿಲೇಶನ್ಶಿಪ್ ಎಂಬುದು ಇಬ್ಬರದೇ ನಿರ್ಧಾರವಾದರೂ ಅದಕ್ಕೆ ಕಾನೂನಿನ ರಕ್ಷಣೆ ಇರಬೇಕು. ಅಂದರೆ ಅದನ್ನು…
"ಅಡಿಕೆಯ ಕುರಿತು ವೈಜ್ಞಾನಿಕ ಸಂಶೋಧನೆ ಮತ್ತು ಮಾನವ ಆರೋಗ್ಯ" ಎಂಬ ಶೀರ್ಷಿಕೆಯಲ್ಲಿ ಅಧ್ಯಯನವನ್ನು…
ಫೆಂಗಲ್ ಚಂಡಮಾರುತವು ಈಗಾಗಲೇ ದುರ್ಬಲಗೊಂಡು ಅರಬ್ಬಿ ಸಮುದ್ರ ಪ್ರವೇಶಿಸಿದೆ ಮತ್ತು ಮುಂದೆ ಪಶ್ಚಿಮಾಭಿಮುಖವಾಗಿ…