ಸಾಂಪ್ರದಾಯಿಕ ವಿಧಾನದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರನ್ನು ಒಳಗೊಂಡ ಗ್ರಾಮಗಳ ಸುಧಾರಣೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ’ಕರಾವಳಿ ಸ್ಥಿತಿಸ್ಥಾಪಕ ಗ್ರಾಮ’ ಯೋಜನೆಗೆ ದೇಶದ ನೂರು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳ ಪೈಕಿ ಉತ್ತರಕನ್ನಡ ಜಿಲ್ಲೆಯ ಎರಡು ಗ್ರಾಮಗಳು ಸೇರಿವೆ. ಭಟ್ಕಳ ತಾಲ್ಲೂಕಿನ ಬೈಲೂರು ಮತ್ತು ಮಠದಹಿತ್ತು ಗ್ರಾಮ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯ ಭಾಗವಾಗಿರುವ ಕರಾವಳಿ ಸ್ಥಿತಿಸ್ಥಾಪಕ ಗ್ರಾಮ ಯೋಜನೆಗೆ ಆಯ್ಕೆಯಾಗಿವೆ. ಈ ಬಗ್ಗೆ ಆಕಾಶವಾಣಿಯೊಂದಿಗೆ ಮಾತನಾಡಿದ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಬಬಿನ್ ಬೊಪಣ್ಣ, ಸಾಂಪ್ರದಾಯಿಕ ಮೀನುಗಾರರನ್ನು ಒಳಗೊಂಡಿರುವ ಗ್ರಾಮದ ಸುಧಾರಣೆಗೆ ಯೋಜನೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel