ಜಿರಲೆ ಎಂದರೆ ಎಲ್ಲರಿಗೂ ಕಿರಿಕಿರಿ. ಆದರೆ ಇದೇ ಜಿರಲೆಗೆ ಚೀನಾ ಮತ್ತು ಆಫ್ರಿಕಾ ದೇಶಗಳಲ್ಲಿ ತುಂಬಾ ದುಬಾರಿಯ ಬೆಲೆಯನ್ನು ನೀಡಲಾಗುತ್ತದೆ.
ಚೀನಾದಲ್ಲಿ ಜಿರಲೆಗೆ ಬೇಡಿಕೆ ಇದೆ. ಚೀನಾದಲ್ಲಿ ಆರು ಶತಕೋಟಿ ಜಿರಳೆಯನ್ನು ಕೂಡ ಉತ್ಪಾದಿಸುತ್ತಿದ್ದಾರೆ. ಚೀನಾ ದೇಶದಲ್ಲಿ ಜಿರಲೆಗಳಿಗೆ ತುಂಬಾ ಬೇಡಿಕೆ ಇದೆ. ಚೀನಾದ ಕ್ಸಿಚಾಂಗ್ ದೇಶವು ವಿಶ್ವದ ಅತಿದೊಡ್ಡ ಜಿರಲೆ ಉತ್ಪಾದನಾ ಘಟಕವಾಗಿದೆ. ಇಲ್ಲಿನ ಮಾರುಕಟ್ಟೆಯಲ್ಲಿ ಜಿರಲೆಗಳು ಚಿನ್ನದಷ್ಟೇ ದುಬಾರಿಯಾಗಿದೆ. ಮಾತ್ರವಲ್ಲದೆ ಏಷ್ಯಾದಲ್ಲಿ ಔಷಧ ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಜಿರಲೆಗಳನ್ನು ಬಳಸಲಾಗುತ್ತದೆ. ಆಫ್ರೀಕಾದ ತಾಂಜಾನಿಯಾದಲ್ಲಿ ಜಿರಲೆಗಳನ್ನು ಬೆಳೆಸಲಾಗುತ್ತದೆ. ಇಲ್ಲಿ ಬಂಗಾರದಷ್ಟೇ ಅಮೂಲ್ಯವಾಗಿದೆ. ಜಿರಲೆಗಳಿಂದ ಸಿಗುವ ಎಣ್ಣೆಗೂ ಬಲು ಬೇಡಿಕೆಗಳಿವೆ.
ಜಿರಲೆ ಕೆಲವು ಉತ್ತಮ ಪೌಷ್ಟಿಕಾಂಶದ ಗುಣಗಳನ್ನು ಸಹ ಹೊಂದಿವೆ. ಪರಿಣಾಮವಾಗಿ, ಆಫ್ರಿಕಾದಲ್ಲಿ 20 ಪ್ರತಿಶತ ಅಪೌಷ್ಟಿಕ ಜನರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಮೂಲಗಳ ಪ್ರಕಾರ, ಆಫ್ರಿಕಾದಲ್ಲಿ ಹಂದಿಗಳು, ಆಡುಗಳು, ಮೀನುಗಳು ಮತ್ತು ಕೋಳಿಗಳ ಒಟ್ಟು ಕಚ್ಚಾ ಪ್ರೋಟೀನ್ ಅಗತ್ಯಗಳಲ್ಲಿ 14 ಪ್ರತಿಶತವನ್ನು ಜಿರಲೆಯ ಸಾಕಣೆಯ ಮೂಲಕ ಪೂರೈಸಬಹುದು. ಪ್ರಸ್ತುತ, ಜಗತ್ತಿನಲ್ಲಿ 2100 ಜಾತಿಯ ಕೀಟಗಳನ್ನು ಖಾದ್ಯವೆಂದು ಗುರುತಿಸಲಾಗಿದೆ. ಆಫ್ರಿಕನ್ ಜನರು ಅನಾದಿ ಕಾಲದಿಂದಲೂ ಕೀಟಗಳನ್ನು ತಿನ್ನುತ್ತಿದ್ದಾರೆ. ಚೀನಾದಲ್ಲಿ ಕೂಡಾ ಜಿರಳೆಗಳನ್ನು ಖಾದ್ಯಗಳೆಂದು ಪರಿಗಣಿಸಲಾಗುತ್ತದೆ ಎಂದು ವರದಿ ಇದೆ.

