ಮಹಿಳಾ ಉದ್ಯಮಶೀಲತೆ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ ಮಂಡಳಿ (CDB) ಕೈಗೊಂಡಿರುವ ಯೋಜನೆಗಳು ಅತ್ಯಂತ ಪರಿಣಾಮಕಾರಿಯಾಗಿವೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವ ರಾಮನಾಥ್ ಠಾಕೂರ್ ಹೇಳಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಗೆ ಭೇಟಿ ನೀಡಿದ ಸಚಿವರು, ತೆಂಗು ಅಭಿವೃದ್ಧಿ ಮಂಡಳಿಯ ನೆರವಿನಿಂದ ಕಾರ್ಯನಿರ್ವಹಿಸುತ್ತಿರುವ ತೆಂಗು ಸಂಸ್ಕರಣಾ ಘಟಕಗಳು ಹಾಗೂ ರೈತ ಕ್ಲಸ್ಟರ್ ಪ್ರದೇಶಗಳನ್ನು ವೀಕ್ಷಿಸಿ ಪರಿಶೀಲಿಸಿದರು. ಸಚಿವರು Green Aura International ಎಂಬ ತೆಂಗು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದರು. ಮಹಿಳಾ ಉದ್ಯಮಿ ಸುಮಿಲಾ ಜಯರಾಜ್ ನಡೆಸುತ್ತಿರುವ ಈ ಘಟಕದಲ್ಲಿ ವರ್ಜಿನ್ ತೆಂಗಿನ ಎಣ್ಣೆ (VCO), ತೆಂಗಿನ ಹಾಲು ಹಾಗೂ VCO ಆಧಾರಿತ ಸೌಂದರ್ಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಮಹಿಳೆಯರು ಮುನ್ನಡೆಸುವ ಇಂತಹ ಕೃಷಿ ಆಧಾರಿತ ಉದ್ಯಮಗಳು ಗ್ರಾಮೀಣ ಉದ್ಯೋಗ ಸೃಷ್ಟಿ, ಕೃಷಿ ಮೌಲ್ಯ ಸರಪಳಿ ಬಲಪಡಿಸುವಿಕೆ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಪ್ರಮುಖವಾಗಿವೆ ಎಂದು ಸಚಿವರು ಹೇಳಿದರು.
ಈ ವೇಳೆ, ಕಡಿಮೆ ದರದಲ್ಲಿ ಆಮದು ಆಗುತ್ತಿರುವ ಡಿಸಿಕೇಟೆಡ್ ತೆಂಗಿನ ಪುಡಿ ದೇಶೀಯ ಸಂಸ್ಕರಣಾ ಘಟಕಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ವಿಷಯ ಸಚಿವರ ಗಮನಕ್ಕೆ ತರಲಾಯಿತು. ಸ್ಥಳೀಯ ತೆಂಗು ರೈತರು ಮತ್ತು ಪ್ರೊಸೆಸರ್‌ಗಳ ಹಿತಾಸಕ್ತಿಗಾಗಿ ಇಂತಹ ಆಮದುಗಳನ್ನು ನಿಯಂತ್ರಿಸುವಂತೆ ಮನವಿ ಮಾಡಲಾಯಿತು.
ಸಚಿವರು Green Army ಎಂಬ ಎನ್‌ಜಿಒಗೂ ಭೇಟಿ ನೀಡಿ, ರೈತ ಸಂಘಟನೆ, ತೆಂಗು ಏರುಗಾರಿಕೆ ತರಬೇತಿ ಹಾಗೂ ಏಕೀಕೃತ ಸಂಸ್ಕರಣಾ ಘಟಕದ ಕಾರ್ಯಗಳನ್ನು ಶ್ಲಾಘಿಸಿದರು. ತೆಂಗಿನ ಎಣ್ಣೆಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ಪೂರೈಕೆ ಮಾಡುವ ಮೂಲಕ ಬೆಲೆ ಸ್ಥಿರತೆ ಸಾಧಿಸಬಹುದು ಎಂಬ ಸಲಹೆಯನ್ನೂ ಈ ವೇಳೆ ಮುಂದಿಟ್ಟರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ತ್ರಿಶೂರ್ ಜಿಲ್ಲೆಯ ವೇಲೂರು ಮತ್ತು ಪುಳಿಯನ್ನೂರು ಪ್ರದೇಶಗಳಲ್ಲಿ 150 ಹೆಕ್ಟೇರ್‌ನಲ್ಲಿ ಜಾರಿಯಲ್ಲಿರುವ PICCS ಯೋಜನೆಯಡಿ ತೆಂಗಿನ ಜೊತೆಗೆ ಜಾಯಿಕಾಯಿ, ಕಾಳುಮೆಣಸು, ರಾಮ್ಭೂಟಾನ್, ಮ್ಯಾಂಗೋಸ್ಟೀನ್, ಮಾವು, ಹಲಸು, ಬಾಳೆ, ಶುಂಠಿ ಹಾಗೂ ತರಕಾರಿ ಬೆಳೆಗಳನ್ನು ಬೆಳೆಸಲಾಗುತ್ತಿದೆ. ತೆಂಗು ಅಭಿವೃದ್ಧಿ ಮಂಡಳಿ ಕೈಗೊಂಡಿರುವ ಯೋಜನೆಗಳು ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ಗುರಿಗೆ ಪೂರಕವಾಗಿವೆ ಎಂದು ಸಚಿವರು ಹೇಳಿದರು. ಇಂತಹ ಯಶಸ್ವಿ ಮಾದರಿಗಳನ್ನು ದೇಶಾದ್ಯಂತ ಅನುಸರಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
2025–26ರಲ್ಲಿ ಕೇರಳದಲ್ಲಿ 8,300 ಹೆಕ್ಟೇರ್ ಪ್ರದೇಶದಲ್ಲಿ ಈ ಯೋಜನೆ ಜಾರಿಯಾಗಿದ್ದು, ಸುಮಾರು 33,250 ರೈತರಿಗೆ ಲಾಭವಾಗಿದೆ. ದೇಶದ ಪ್ರಮುಖ ತೆಂಗು ಬೆಳೆಯುವ ರಾಜ್ಯಗಳಲ್ಲಿ ಒಟ್ಟು 27,000 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…
ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…
ಚಳಿಗಾಲದಲ್ಲಿ ಆಹಾರ ಪದ್ಥತಿಯಲ್ಲೂ ಬದಲಾವಣೆ ಮಾಡಿಕೊಂಡರೆ ಉತ್ತಮ. ಅದರಲ್ಲಿ ಎಳ್ಳು ಸೇವನೆಯೂ ಒಂದು.…