ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಶೇರು ಪ್ರಮಾಣ ಪತ್ರ ವಿತರಣೆ |

September 1, 2023
8:51 AM
ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಮತ್ತು ಶೇರು ಪ್ರಮಾಣ ಪತ್ರ ವಿತರಣೆಯು  ಜೈನ ಭವನದಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಮತ್ತು ಶೇರು ಪ್ರಮಾಣ ಪತ್ರ ವಿತರಣೆಯು  ಜೈನ ಭವನದಲ್ಲಿ ನಡೆಯಿತು.

Advertisement
Advertisement
Advertisement

ಸಂಪನ್ಮೂಲ ವ್ಯಕ್ತಿಯಾಗಿದ್ದ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ತೋಟಗಾರಿಕಾ ವಿಜ್ಞಾನಿ ಡಾ| ರಶ್ಮಿ ಆರ್ ಮಾತನಾಡಿ, ಕರಾವಳಿಯಲ್ಲಿ ರೈತರು ತೆಂಗನ್ನು ಉಪ ಬೆಳೆಯನ್ನಾಗಿ ಮಾಡಿದ್ದು ತೆಂಗಿಗೆ ವಿಶೇಷ ಆಸಕ್ತಿ ನೀಡದೇ ಇರುವುದರಿಂದ ಇಳುವರಿ ಕಡಿಮೆಯಾಗಿದೆ.ಕರ್ನಾಟಕ್ ಇತೆರೆಡೆ ತೆಂಗು ಕೃಷಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡುತ್ತಿದ್ದು ಅಧಿಕ ಇಳುವರಿ ಪಡೆಯುತ್ತಿದ್ದಾರೆ. ಒಂದು ಗಿಡದಲ್ಲಿ 200 -300 ಕಾಯಿಗಳನ್ನು ಪಡೆಯುತ್ತಿದ್ದಾರೆ. ಕರಾವಳಿ ಭಾಗದ ಮಣ್ಣು ಹುಳಿ ಮಣ್ಣು ಆಗಿದ್ದು, ಹಾಗಾಗಿ ಇಲ್ಲಿ ಸುಣ್ಣ ಬಳಸುವುದು ಅತ್ಯಗತ್ಯ ತೆಂಗು ಕೃಷಿಗೆ ಸಾರಜನಕ, ರಂಜಕ, ಪೊಟ್ಯಾಷ್ ಗಳು ಪ್ರಧಾನ ಪೋಷಕಾಂಶಗಳು. ಇದನ್ನು ನಿಗದಿತ ಪ್ರಮಾಣದಲ್ಲಿ ಗಿಡಗಳಿಗೆ ದೊರಕುವಂತೆ ಮಾಡಬೇಕು.. ಯಾವುದೇ ಬೆಳೆಗೂ ಮಣ್ಣು ಪರೀಕ್ಷೆ ಅವಶ್ಯಕವಾಗಿದ್ದು ಕನಿಷ್ಠ ಎರಡು ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡುವ ಮೂಲಕ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದಾಗ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದರು.

Advertisement

ವಿಮಾ ಸೌಲಭ್ಯ..! : ತೆಂಗಿನಕಾಯಿ ಕೀಳುವ ವೃತ್ತಿದಾರರಿಗೆ ಸರಕಾರದಿಂದ ವಿಮಾ ಸೌಲಭ್ಯವಿದೆ.ಕಾರ್ಮಿಕರು ವರ್ಷಕ್ಕೆ ರೂ.100 ಪಾವತಿಸಿ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬಹುದು.ವಿಮೆಯನ್ನು ಪ್ರತಿ ವರ್ಷ ರೂ.100 ಪಾವತಿಸಿ ನವೀಕರಿಸಿಕೊಳ್ಳಬೇಕು.ಈ ವಿಮೆಯಿಂದ ವೃತ್ತಿಯ ವೇಳೆ ಅವಘಡಗಳು ಸಂಭವಿಸಿದರೆ ಆಸ್ಪತ್ರೆ ವೆಚ್ಚವಾಗಿ ರೂ.1 ಲಕ್ಷ ಪರಿಹಾರ ಮೊತ್ತ ದೊರೆಯಲಿದೆ.ಮೃತಪಟ್ಟರೆ ಅವರ ಕುಟುಂಬದವರಿಗೆ ರೂ.5 ಲಕ್ಷ ಪರಿಹಾರ ಮೊತ್ತ ದೊರೆಯಲಿದೆ ಎಂದು ರಶ್ಮಿ ಆರ್ ತಿಳಿಸಿದರು.

ರಾಜಭವನ ಚಲೋ : ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ತೆಂಗಿನ ಮಾರುಕಟ್ಟೆ ಕುಸಿದಿದ್ದು ಮೌಲ್ಯವರ್ಧನೆ ಮಾಡಬೇಕು.ಮೌಲ್ಯ ವರ್ಧನೆ ಮಾಡಿದರೆ ಒಂದು ಮರದಿಂದ ರೂ.3000-5000 ಆದಾಯ ಗಳಿಸಬಹುದು.ಇಪ್ಪತ್ತೈದು ಸಾವಿರ ಟನ್ ತೆಂಗಿನ ಕಾಯಿ ಬೆಳೆದರೂ ಸರಕಾರ ಖರೀದಿಗೆ ವ್ಯವಸ್ಥೆ ಕಲ್ಪಿಸಿಲ್ಲ, ತೆಂಗು ಖರೀದಿಸಲು ಒಂದೇ ಒಂದು ನಾಫೆಡ್ ಸಂಸ್ಥೆಯಿಲ್ಲ, ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಆಗಿಲ್ಲ.ಇದಕ್ಕೆ ನಾವು ಒತ್ತಡ ಹಾಕಬೇಕಾಗಿದೆ. ಕೇಂದ್ರ ಸರಕಾರ ಕೊಬ್ಬರಿಗೆ ಕ್ವಿಂಟಾಲ್ಗೆ ಕನಿಷ್ಠ ರೂ.20,000 ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ರಾಜ್ಯ ಸರಕಾರ ರೂ.5000 ಪ್ರೋತ್ಸಾಹ ಧನವಾಗಿ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಆಗ್ರಹಿಸಿ ಅ.2ರಿಂದ ತಿಪಟೂರಿನಿಂದ ರಾಜ ಭವನ ಚಲೋ ಪಾದಯಾತ್ರೆ ನಡೆಯಲಿದೆ.ಅ.9ಕ್ಕೆ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಕಲ್ಲಿನೇಷನ್ ನಡೆಯಲಿದ್ದು ರೈತರು ಸಹಕರಿಸುವಂತೆ ಅವರು ಮನವಿ ಮಾಡಿದರು.

Advertisement

ಸಮಗ್ರ ಕೃಷಿಯಿಂದ ಆರ್ಥಿಕ ಅಭಿವೃದ್ಧಿ: ವಿಜಯ ಕರ್ನಾಟಕ ಸೂಪರ್ ಸ್ಟಾರ್ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಸ್ ರೈ ಮಾತನಾಡಿ, ರೈತರು ಜ್ಞಾನ ಸಂಪಾದಿಸಿ ವಿಜ್ಞಾನಿಗಳಾಗಬೇಕು. ಲ್ಯಾಬ್ನಲ್ಲಿ ಆಗುವ ವಿಚಾರಗಳನ್ನು ಮಣ್ಣಿನಲ್ಲಿ ಪ್ರಯೋಗಿಸಿ ವಿಶೇಷ ಜ್ಞಾನ ಸಂಪಾದಿಸುವ ಮೂಲಕ ಪ್ರಾಕ್ಟಿಕಲ್ ವಿಜ್ಞಾನಿಗಳಾಗಬೇಕು. ತೆಂಗು ಉಪ ಬೆಳೆಯಾದರೂ ಅವುಗಳಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿ ಅಧಿಕ ಲಾಭ ಗಳಿಸಬೇಕು. ಸರಕಾರಗಳ ಬೆಂಬಲ ಬೆಲೆಯ ಜೊತೆಗೆ ಇಂತಹ ಕಂಪನಿಗಳ ಮೂಲಕ ಹೋರಾಟ ಆಗಬೇಕು,ಬದುಕಿಗೆ ಪೂರಕವಾಗಿ ಸಮಗ್ರ ಕೃಷಿ ಮಾಡಿದಾಗ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದರು.

ಸಾಲಸೌಲಭ್ಯ-ಪೂರ್ಣಿಮಾ ಎನ್: ಮಾನಸಗಂಗಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಎನ್.ಮಾತನಾಡಿ, ತೆಂಗು ಉತ್ಪಾದಕರ ಕಂಪನಿ ಹಾಗೂ ಮಾನಸಗಂಗಾ ಸಹಕಾರ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದ್ದು ರೈತರಿಗೆ ಕೃಷಿ ಸಲಕರಣಗಳು, ರಸಗೊಬ್ಬರಗಳನ್ನು ಪೂರೈಸಲಾಗುವುದು. ರೈತರಿಗೆ ನಮ್ಮ ಸಂಘದ ಮೂಲಕ ಕ್ಷಿಪ್ರ ಗತಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದರು.

Advertisement

2000 ಉದ್ಯೋಗ ಸೃಷ್ಟಿಸುವ ಗುರಿ -ಕುಸುಮಾಧರ ಎಸ್.ಕೆ:  ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಅಧ್ಯಕ್ಷ ಕುಸುಮಾಧರ ಎಸ್.ಕೆ ಮಾತನಾಡಿ, ಸಂಸ್ಥೆ ಪ್ರಾರಂಭಗೊಂಡು ಎರಡು ವರ್ಷ ಪೂರೈಸಿದೆ.ಹದಿನಾಲ್ಕು ಸಾವಿರ ರೈತರನ್ನು ಹೊಂದಿರುವ, ದೇಶದಲ್ಲೇ ಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಕಂಪನಿಯ ಕಲ್ಪರಸ ಯೋಜನೆಗೆ ದೊಡ್ಡತೋಟದಲ್ಲಿ ಕಟ್ಟಡ ಸಿದ್ಧವಾಗಿದೆ.ಗಣೇಶ ಚತುರ್ಥಿ ಬಳಿಕ ಖರೀದಿಸಲಾಗುವುದು.ಮೌಲ್ಯ ವರ್ಧನೆ ಮಾಡಿ ಉತ್ತಮ ಬೆಲೆ ಒದಗಿಸುವುದೇ ನಮ್ಮ ಉದ್ದೇಶ.ಕಲ್ಪ ಸಮೃದ್ಧಿ ಯೋಜನೆಯಲ್ಲಿ ಠೇವಣಿಗೆ ಶೇ.12 ಬಡ್ಡಿ ನೀಡಲಾಗುವುದು.ತೆಂಗಿನಕಾಯಿ ಕೀಳಲು ಜನ ಸಮಸ್ಯೆಗಳ ನಿವಾರಣೆಗೆ ಟೋಲ್ ಫ್ರೀ ಸಹಾಯವಾಣಿ ತೆರೆಯಲಾಗಿದೆ.ಸದಸ್ಯರ ಉತ್ತಮ ಯೋಜನೆಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ರೂ.100 ಕೋಟಿ ತನಕ ಸಾಲ ಒದಗಿಸಲಾಗುವುದು ಎಂದರು.
ಅಡಿಕೆಗೆ ಕ್ಯಾಂಪೋ ಇರುವಂತೆ ತೆಂಗಿಗೆ ತೆಂಗು ಉತ್ಪಾದಕರ ಕಂಪನಿಯಿಂದ ಸಹಕಾರ ನೀಡಲಾಗುವುದು.ಸಿಬ್ಬಂದಿಗಳ ನೇಮಕಾತಿಯ ಸಂದರ್ಭದಲ್ಲಿ ತೆಂಗು ಬೆಳೆಗಾರ ಸದಸ್ಯರ ಮಕ್ಕಳಿಗೆ ಆದ್ಯತೆ ನೀಡಲಾಗುವುದು.ನೇಮಕಾತಿಯಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲ.ನಿಯಮದಂತೆ ನೇಮಕಾತಿಗಳು ನಡೆಯಲಿದೆ.ಸುಮಾರು 2000 ಉದ್ಯೋಗ ಸೃಷ್ಟಿಸುವ ಗುರಿಯಿದೆ ಎಂದರು.

ನಿರ್ದೇಶಕಿ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸದಸ್ಯ ರೈತರಾದ ಎ.ಜತೀಂದ್ರ ಶೆಟ್ಟಿ, ಜಗನ್ನಾಥ ರೈ ಡಿ., ಐತ್ತಪ್ಪ ನಾಯ್ಕ, ಆಯಿಷಾ, ದುಗ್ಗಪ್ಪ ಗೌಡ, ಐತ್ತಪ್ಪ ರೈಯವರಿಗೆ ಶೇರು ಪ್ರಮಾಣ ಪತ್ರ ವಿತರಿಸಲಾಯಿತು. ನಿತ್ಯಾ ಪ್ರಾರ್ಥಿಸಿದರು. ನಿರ್ದೇಶಕ ಗಿರಿಧರ್ ಸ್ವಾಗತಿಸಿದರು. ನಿರ್ದೇಶಕಿ ಲತಾ, ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಚೇತನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror