5 ಗಂಟೆಗಳಲ್ಲಿ 12,000 ಲೀಟರ್ ತೆಂಗಿನ ಹಾಲು ‘ಸೋಲ್ಡ್ ಔಟ್’..!

March 22, 2026
6:00 AM
ಹಬ್ಬದ ಬೇಡಿಕೆ ಏರಿಕೆಯಿಂದ ಮಲೇಶಿಯಾದ ಮಾರುಕಟ್ಟೆಯಲ್ಲಿ 5 ಗಂಟೆಗಳಲ್ಲಿ 12,000 ಲೀಟರ್ ತೆಂಗಿನ ಹಾಲು ಮಾರಾಟವಾಗಿದೆ. ಗ್ರಾಹಕರಿಗೆ ಖರೀದಿಯಲ್ಲಿ ಮಿತಿ ವಿಧಿಸಿದರೂ ಸರಬರಾಜು ಒತ್ತಡ ಕಂಡುಬಂದಿತ್ತು.

ಒಂದು ಮಾರುಕಟ್ಟೆಯಲ್ಲಿ ಕೇವಲ ಐದು ಗಂಟೆಗಳಲ್ಲಿ 12,000 ಲೀಟರ್ ತೆಂಗಿನ ಹಾಲು ಸಂಪೂರ್ಣ ಮಾರಾಟವಾಗಿರುವ ಘಟನೆ ಗಮನ ಸೆಳೆದಿದೆ. ಹೆಚ್ಚಿನ ಗ್ರಾಹಕರು ಖರೀದಿಗೆ ಮುಗಿಬಿದ್ದ ಪರಿಣಾಮ, ಹಲವರಿಗೆ ತೆಂಗಿನ ಹಾಲು ಸಿಗದೆ ಪೂರ್ಣ ತೆಂಗು ಅಥವಾ ತುರಿದ ತೆಂಗಿನಕಾಯಿ ಖರೀದಿಸಲು ಮುಂದಾಗಿದ್ದರು. ಈ ಘಟನೆ ನಡೆದದ್ದು ಮಲೇಶಿಯಾದಲ್ಲಿ. ಇಷ್ಟೂ ಬೇಡಿಕೆ ಬಂದದ್ದು ಹಬ್ಬದ ಕಾರಣದಿಂದ..!

ಮಲೇಶಿಯಾದ ಕೌಲಾ ತೆರೇಂಗಾನು ಪ್ರದೇಶದ ಪಾಸರ್‌ ಕಾಬಾಂಗ್‌ ತಿಗಾ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಹಬ್ಬದ ತಯಾರಿ ಹಿನ್ನೆಲೆ ತೆಂಗಿನ ಹಾಲಿನ ಬೇಡಿಕೆ ಅತಿಯಾಗಿ ಏರಿಕೆ ಕಂಡಿದೆ. ಸುಮಾರು 20 ಟನ್‌ ತೆಂಗಿನಿಂದ ತಯಾರಿಸಲಾದ 12,000 ಲೀಟರ್ ತೆಂಗಿನ ಹಾಲು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿದ್ದು, ಮಾರುಕಟ್ಟೆಯಲ್ಲಿ ಸರಬರಾಜು ಕೊರತೆ ಕಂಡಿತ್ತು.

ಬೇಡಿಕೆ ಹೆಚ್ಚಾಗಿದ್ದರಿಂದ, ವ್ಯಾಪಾರಿಗಳು ಪ್ರತಿ ಗ್ರಾಹಕರಿಗೆ ಗರಿಷ್ಠ 2 ಕೆ.ಜಿ. ಮಾತ್ರ ಮಾರಾಟ ಮಾಡಿದರು. ಈ ಕ್ರಮದಿಂದ ಗೊಂದಲ ನಿಯಂತ್ರಣ ಸಾಧ್ಯವಾದರೂ, ಮಾರುಕಟ್ಟೆಯಲ್ಲಿ ತೆಂಗು ಉತ್ಪನ್ನಗಳ ಕೊರತೆ ಕುರಿತು ಆತಂಕ ಮೂಡಿದೆ.

ಕೃಷಿ ಮತ್ತು ಮೌಲ್ಯವರ್ಧನೆಗೆ ಸಂದೇಶ : ಈ ಘಟನೆ ತೆಂಗಿನಕಾಯಿ ಮೌಲ್ಯವರ್ಧಿತ ಉತ್ಪನ್ನಗಳಾದ ತೆಂಗಿನ ಹಾಲು, ಕೊಕೊನಟ್‌ ಕ್ರೀಮ್‌, ವರ್ಜಿನ್‌ ತೆಂಗಿನೆಣ್ಣೆಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.  ತಜ್ಞರ ಪ್ರಕಾರ, ತೆಂಗಿನ ಉತ್ಪನ್ನ ಸಂಸ್ಕರಣೆ ಮತ್ತು ಸರಬರಾಜು  ಬಲಪಡಿಸಿದರೆ ರೈತರಿಗೆ ಹೆಚ್ಚಿನ ಆದಾಯದ ಅವಕಾಶಗಳು ಸೃಷ್ಟಿಯಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

About 12,000 litres of coconut milk produced from 20 tonnes of coconuts were sold out within five hours at a market in Kuala Terengganu, Malaysia, due to festive demand. Traders imposed purchase limits per customer to manage shortages, highlighting the growing demand for coconut-based value-added products.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಒಂದು ಹಕ್ಕಿಯ ಫೋಟೋಗಾಗಿ 7 ತಿಂಗಳು ಕಾಯ್ದ ವ್ಯಕ್ತಿ..!, 60ನೇ ಹುಟ್ಟುಹಬ್ಬವನ್ನೂ ವಿಭಿನ್ನವಾಗಿ ಆಚರಿಸಿದರು..!
June 14, 2026
11:58 PM
by: ಮಹೇಶ್ ಪುಚ್ಚಪ್ಪಾಡಿ
₹1.11 ಕೋಟಿ ಮೌಲ್ಯದ ಕಳಪೆ ಗುಣಮಟ್ಟದ ಅಡಿಕೆ ವಶಕ್ಕೆ – ಮಹಾರಾಷ್ಟ್ರದ ಕೋಲ್ಡ್ ಸ್ಟೋರೇಜ್‌ನಲ್ಲೂ ಕಳಪೆ ಅಡಿಕೆ ದಾಸ್ತಾನು..!
June 14, 2026
10:34 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14.06.2026 | ಜೂನ್ 20ರವರೆಗೆ ಕರಾವಳಿ-ಮಲೆನಾಡಿನಲ್ಲಿ ಇದೇ ವಾತಾವರಣ| ಎಲ್‌ನಿನೋ ಪ್ರಭಾವದ ನಡುವೆ ಮಳೆ ನೀರು ಸಂಗ್ರಹಕ್ಕೆ ರೈತರಿಗೆ ಸಲಹೆ
June 14, 2026
3:27 PM
by: ಸಾಯಿಶೇಖರ್ ಕರಿಕಳ
ತುಮಕೂರಿನಲ್ಲಿ ಅಡಿಕೆ ಕ್ರಾಂತಿ -ತೆಂಗಿನ ತೋಟಗಳ ಜಾಗದಲ್ಲಿ ಅಡಿಕೆ ಬೆಳೆ..! 94 ಸಾವಿರ ಹೆಕ್ಟೇರ್‌ ದಾಟಿದ ವಿಸ್ತೀರ್ಣ
June 14, 2026
12:52 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror