ಕೇರಳದಲ್ಲಿ ಓಣಂ ಹಬ್ಬಕ್ಕೂ ಮೊದಲು ದಾಖಲೆ ಮಟ್ಟದಲ್ಲಿ ಏರಿದ ತೆಂಗಿನಕಾಯಿ ಹಾಗೂ ತೆಂಗಿನ ಎಣ್ಣೆ ಬೆಲೆ ಈಗ ತೀವ್ರವಾಗಿ ಇಳಿಯುತ್ತಿದೆ. ಕೆಲವು ದಿನಗಳ ಹಿಂದೆ ಲೀಟರ್‌ಗೆ ಸುಮಾರು ₹430-480 ಇದ್ದ ಬೆಲೆ ಈಗ ಸುಮಾರು ₹330-360 (ರಖಂ ದರಗಳು) ಆಗಿದೆ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ. ಇದೇ ವೇಳೆ ರಾಜ್ಯದಲ್ಲಿ ತೆಂಗಿನ ಮಾರುಕಟ್ಟೆಯಲ್ಲಿ ಅಸ್ಥಿರತೆ ಕಂಡುಬಂದಿದೆ. ಮಾರುಕಟ್ಟೆ ಏರಿಕೆ ಕಾಣುತ್ತಿಲ್ಲ.
ಕೇರಳದ ತೆಂಗಿನ ಎಣ್ಣೆ ಬೆಲೆಯ ಇಳಿಕೆಗೆ ಕಾರಣಗಳಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ತೆಂಗಿನ ಉತ್ಪಾದನೆಯು ಹೆಚ್ಚಿರುವುದು ಮತ್ತು ಹೆಚ್ಚು ಪ್ರಮಾಣದಲ್ಲಿ ಕೊಬ್ಬರಿ ಮಾರುಕಟ್ಟೆಗೆ ಆಮದಾಗಿರುವುದರಿಂದ , ಸಹಜವಾಗಿ ಮಾರುಕಟ್ಟೆ ಒತ್ತಡದ ಕಾರಣ ದರಗಳು ಗಣನೀಯವಾಗಿ ಕಡಿಮೆಯಾಗಿದೆ.
ವ್ಯಾಪಾರಿಗಳು ಹೇಳುವ ಪ್ರಕಾರ, ಮುಂದಿನ ವಾರಗಳಲ್ಲಿ ಹೊಸ ಕೊಬ್ಬರಿ ಪೂರೈಕೆಗಳು ತಲುಪಿದಂತೆ ಬೆಲೆ ಇನ್ನೂ ಕಡಿಮೆಯಾಗಿ, ಮುಂದಿನ ಏಪ್ರಿಲ್ ನ ಅಂದಾಜಿಗೆ ಲೀಟರ್‌ಗೆ ಸುಮಾರು ₹180-200 ರ ಆಸುಪಾಸಿನಲ್ಲಿ ಇರಬಹುದು ಎಂದು ನಿರೀಕ್ಷೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ತೆಂಗಿನಕಾಯಿಯ ಇನ್ನೊಂದು ಉತ್ಪನ್ನ ಡೆಸಿಕೇಟೆಡ್ ಪೌಡರ್ , ಇದರ ಮಾರುಕಟ್ಟೆ ಹಾಗೂ ಕೊಬ್ಬರಿ ಮಾರುಕಟ್ಟೆಗೆ ಸರಿಯಾಗಿ, ತುಲನಾತ್ಮಕ ದರಗಳಲ್ಲಿ ವ್ಯವಹರಿಸುತ್ತಿಲ್ಲ . ಉತ್ತಮ ಗುಣಮಟ್ಟದ ಒಣಕಾಯಿಗಳು, ಕೊಬ್ಬರಿ ಮಾಡಲ್ಪಡುತ್ತದೆ.
ಹಸಿ ಹಾಗೂ ಇತರೇ ತೆಂಗಿನಕಾಯಿಗಳು ಪೌಡರ್ ಮಾಡಲು ಹೋಗುತ್ತದೆ. ಪೌಡರ್ ನ ಮಾರಾಟ ಕೂಡ ಹಬ್ಬ ದ ಸಮಯವಲ್ಲದ ಕಾರಣ ಮಂದಗತಿಯಲ್ಲಿ ಸಾಗಿದೆ. ಹಾಗಾಗಿ ತೆಂಗಿನಕಾಯಿಗಳಲ್ಲಿ ದರಗಳಲ್ಲಿ ವ್ಯತ್ಯಾಸ ಕಾಣಬಹುದಾಗಿದೆ .
ಸದ್ಯ, ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆ ತಾತ್ಕಾಲಿಕವಾಗಿ ಹೆಚ್ಚುತ್ತಿದೆ. ತೆಂಗಿನಕಾಯಿಯ ಸಗಟು ಬೆಲೆ ಕೆಜಿಗೆ 72 ರೂ. ತಲುಪಿದ್ದರೂ, ಸಾಮಾನ್ಯ ಕೃಷಿಕರನ್ನು ಚಿಂತೆಗೀಡು ಮಾಡಿದೆ. ಧಾರಣೆ ಅಸ್ಥಿರತೆಯು ಕೃಷಿಕರನ್ನು ಕಾಡುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಶಬರಿಮಲೆಯ ಮತ್ತು ಹಬ್ಬದ ಕಾರಣಗಳಿಂದ ಡಿಸೆಂಬರ್ ಮೊದಲ ವಾರದಲ್ಲಿ 60-65 ರೂ.ಗಳಷ್ಟಿದ್ದ ತೆಂಗಿನಕಾಯಿಯ ಸಗಟು ಬೆಲೆ, ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಹೆಚ್ಚಿದ ಬೇಡಿಕೆಯಿಂದಾಗಿ 72 ರೂ.ಗಳಿಗೆ ಏರಿತು. ಡಿಸೆಂಬರ್ ಮೊದಲ ವಾರದಲ್ಲಿ ತೆಂಗಿನಕಾಯಿ ಬೆಲೆ 60 ರೂ.ಗಳಷ್ಟಿತ್ತು. ಎರಡನೇ ವಾರದಲ್ಲಿ ಬೆಲೆ 57 ರೂ.ಗಳಿಗೆ ಇಳಿಯಿತು ಎಂದು ಮನೋರಮಾ ವರದಿಯಲ್ಲಿ ಹೇಳಿದೆ.
ಕರ್ನಾಟಕದಲ್ಲಿ ಧಾರಣೆ ಅಸ್ಥಿರತೆ ರೈತರನ್ನು ಚಿಂತೆಗೀಡು ಮಾಡಿದೆ. ಈ ಹಿಂದೆ ಉತ್ತಮ ಧಾರಣೆಯ ಕಾರಣದಿಂದ ತೆಂಗು ಬೆಳೆಗಾರರಿಗೆ ಸ್ಥಿರವಾದ ಧಾರಣೆ ಲಭ್ಯವಾಗುತ್ತಿತ್ತು. ಇದೀಗ ಧಾರಣೆ ಕುಸಿತವು ಕೃಷಿಕರಿಗೆ ಹಾಗೂ ವ್ಯಾಪಾರಿಗಳು ಸಂಕಷ್ಟ ತಂದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


