ಕರೆ ಬಂದಲ್ಲಿಗೆ ತೆರಳಿ ತೆಂಗು ಕೊಯ್ಲು | ದ ಕ ಜಿಲ್ಲೆಯಲ್ಲಿ ಆರಂಭವಾಗಲಿದೆ ತೆಂಗು ಕೊಯ್ಲು ಟೀಂ | ವಿಟ್ಲದ ಪಿಂಗಾರ ರೈತ ಉತ್ಪಾದಕ ಕಂಪನಿಯಿಂದ ಹೊಸ ಹೆಜ್ಜೆ |

Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ತೆಂಗು ಬೆಳೆಗಾರರಿಗೆ ಪಾಸಿಟಿವ್‌ ಸುದ್ದಿಯೊಂದು ಬರುತ್ತಿದೆ. ವಿಟ್ಲದ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿ (FPO) ತೆಂಗು ಬೆಳೆಗಾರರಿಗೆ ನೆರವಿಗೆ ಬರುತ್ತಿದೆ. ಕರೆ ಬಂದಲ್ಲಿಗೆ ತೆರಳಿ ತೆಂಗು ಕೊಯ್ಲು ಮಾಡುವ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಜ.2 ರಿಂದ ಈ ಕೆಲಸ ಆರಂಭವಾಗಲಿದೆ. 

Advertisement

ಬಂಟ್ವಾಳ ತಾಲೂಕು ವಿಟ್ಲದಲ್ಲಿರುವ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯು ಈಗಾಗಲೇ ವಿವಿಧ ಕಾರ್ಯಗಳ ಮೂಲಕ ಗಮನ ಸೆಳೆದಿದೆ. ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವ ಪಿಂಗಾರ ತಂಡವು ಈಗಾಗಲೇ ಅಡಿಕೆ ಕೊಯ್ಲು ತಂಡವನ್ನು ರಚಿಸಿದೆ. ಈ ಮೂಲಕ ಅನೇಕ ಕೃಷಿಕರಿಗೆ ನೆರವಾಗಿದೆ. ಅಡಿಕೆ ಕೊಯ್ಲು, ಔಷಧಿ ಸಿಂಪಡಣೆಯ ಬಹುಪಾಲು ಸಮಸ್ಯೆಯನ್ನು ನಿವಾರಣೆ ಮಾಡಿದೆ.ಕಳೆದ ವರ್ಷ ಈ ಸಂಸ್ಥೆ ಪೈಬರ್‌ ದೋಟಿಯ ಮೂಲಕ ಅಡಿಕೆ ಔಷಧಿ ಸಿಂಪಡಣೆ, ಅಡಿಕೆ ಕೊಯ್ಲು ಮೂಲಕ  10 ತಿಂಗಳಲ್ಲಿ ಸುಮಾರು 30 ಲಕ್ಷ ವ್ಯವಹಾರ ನಡೆಸಿದೆ. ಅಷ್ಟೂ ರೈತರಿಗೆ ಸಹಾಯ ಮಾಡಿದೆ. ಇದೀಗ ಈ ಸಂಸ್ಥೆ ತೆಂಗು ಬೆಳೆಗಾರರಿಗೂ ನೆರವಾಗುತ್ತಿದೆ. ಅದೇ ಮಾದರಿಯಲ್ಲಿ ತಂಡವನ್ನು ರಚನೆ ಮಾಡುತ್ತಿದೆ. ಕರೆದಲ್ಲಿಗೆ ಹೋಗಿ ತೆಂಗು ಕೊಯ್ಲು ಮಾಡುವ ಯೋಜನೆಯನ್ನು ಸಿದ್ಧಪಡಿಸಿದೆ. ಕೇರಳದಲ್ಲಿ ಹಲೋ ನಾರಿಯಲ್‌ ತಂಡ ಈ ಮಾದರಿಯ ಕೆಲಸ ಮಾಡುತ್ತಿದ್ದು, ಈಚೆಗೆ ಕಾಸರಗೋಡು ಜಿಲ್ಲೆಯ ನೀರ್ಚಾಲಿನಲ್ಲೂ ಕೆಲಸ ಆರಂಭ ಮಾಡಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಂಗಾರ ಸಂಸ್ಥೆ ತೆಂಗು ಬೆಳೆಗಾರರಿಗೆ ನೆರವಾಗುತ್ತಿದೆ. ಈ ಪ್ರಯತ್ನ ರಾಜ್ಯದಲ್ಲೇ ಪ್ರಥಮ ಎನಿಸಿದೆ.

Advertisement
Advertisement

ಪಿಂಗಾರ ಸಂಸ್ಥೆಗೆ ಕರೆ ಮಾಡಿ ರೈತರು ಕೊಯ್ಲಿಗೆ ದಿನ ನಿಗದಿ ಮಾಡಬೇಕು. ನಿಗದಿತ ದಿನದಂದು ನಾಲ್ವರು ಕಾರ್ಮಿಕರ ಜೊತೆ ಓರ್ವ ಮ್ಯಾನೇಜರ್‌ ಓಮ್ನಿ ವಾಹನದಲ್ಲಿ ತೋಟಕ್ಕೇ ಬಂದು ತೆಂಗಿನ ಕೊನೆಗಳನ್ನು ಕತ್ತಿಯಿಂದ ಕಡಿದು ಕೊಡುತ್ತಾರೆ. ಒಂದು ಮರದ ಕೊಯ್ಲಿಗೆ 50 ರು. ನಿಗದಿಪಡಿಸಲಾಗಿದೆ. ಕನಿಷ್ಠ, ಗರಿಷ್ಠ ಮರಗಳ ಸಂಖ್ಯೆಯ ಮಿತಿ ಇಲ್ಲ, ಕರೆ ಬಂದಲ್ಲಿಗೆ ತೆರಳಿ ವರ್ಷಪೂರ್ತಿ ತಂಡ ಕಾರ್ಯಾಚರಿಸಲಿದೆ ಎಂದು ಹೇಳುತ್ತಾರೆ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ರಾಮ್‌ ಕಿಶೋರ್‌ ಮಂಚಿ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕರೆ ಬಂದಲ್ಲಿಗೆ ತೆರಳಿ ತೆಂಗು ಕೊಯ್ಲು | ದ ಕ ಜಿಲ್ಲೆಯಲ್ಲಿ ಆರಂಭವಾಗಲಿದೆ ತೆಂಗು ಕೊಯ್ಲು ಟೀಂ | ವಿಟ್ಲದ ಪಿಂಗಾರ ರೈತ ಉತ್ಪಾದಕ ಕಂಪನಿಯಿಂದ ಹೊಸ ಹೆಜ್ಜೆ |"

Leave a comment

Your email address will not be published.


*