ತೆಂಗಿನಕಾಯಿ ಧಾರಣೆ ಏರಿಕೆ | ರಾಜ್ಯದ ಹಲವು ಕಡೆ 50 ರೂಪಾಯಿ | ಹವಾಮಾನ ವೈಪರೀತ್ಯದ ಕಾರಣಗಳು…! |

September 26, 2024
1:55 PM
ತೆಂಗಿನಕಾಯಿ ಧಾರಣೆ ಏರಿಕೆಯಾಗುತ್ತಿದೆ. ಹವಾಮಾನ ವೈಪರೀತ್ಯ ಕಾರಣದಿಂದ ಇಳುವರಿ ಕೊರತೆಯೇ ಈಗಿನ ಧಾರಣೆ ಪ್ರಮುಖ ಕಾರಣ ಎನ್ನುವುದು ವರದಿಗಳು.

ತೆಂಗಿನಕಾಯಿ ಧಾರಣೆ ದಿಢೀರ್‌ ಏರಿಕೆ ಕಂಡಿದೆ. ಕಳೆದ ತಿಂಗಳು 25-30 ರೂಪಾಯಿ ಇದ್ದ ಧಾರಣೆ ಇದೀಗ 45- 50 ರೂಪಾಯಿಗೆ ತಲಪಿದೆ. ತುಮಕೂರು, ತಿಪಟೂರು, ಚಾಮರಾಜನಗರಗಳಲ್ಲಿ ಹೊರರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ. ತಮಿಳುನಾಡಿನಲ್ಲೂ ತೆಂಗಿನಕಾಯಿ ಕೊರತೆ ಕಂಡಿದೆ. ಇಳುವರಿ ಕೊರತೆ, ಹವಾಮಾನ ವೈಪರೀತ್ಯವೂ ಈ ಧಾರಣೆ ಏರಿಕೆ ಪರೋಕ್ಷ ಕಾರಣವಾಗಿದೆ. …..ಮುಂದೆ ಓದಿ….

Advertisement
Advertisement

ಸೆಪ್ಟಂಬರ್‌ ತಿಂಗಳ ಆರಂಭದಿಂದಲೇ ತೆಂಗಿನ ಕಾಯಿಗೆ ಬೇಡಿಕೆ ವ್ಯಕ್ತವಾಗಿದೆ. ಅದರ ಜೊತೆಗೆ  ಕೊಬ್ಬರಿ, ಕೊಬ್ಬರಿ ಎಣ್ಣೆಗೂ ಬೇಡಿಕೆ ಬಂದಿದೆ. ಹೀಗಾಗಿ ಕೊಬ್ಬರಿ, ತೆಂಗಿನ ಕಾಯಿ  ಬೆಲೆಯಲ್ಲೂ ದಿಢೀರ್ ಏರಿಕೆ ಕಂಡುಬಂದಿದ್ದು, ರೈತರು ಮತ್ತು ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಇಷ್ಟೂ ಸಮಯಗಳ ಕಾಲ ಕಡಿಮೆ ಬೆಲೆಗೇ ಮಾರಾಟ ಮಾಡುತ್ತಿದ್ದ ಕೃಷಿಕರಿಗೆ ಈಗ ಧಾರಣೆ ಏರಿಕೆ ಖುಷಿ ನೀಡಿದೆ. ಆದರೆ ಬೆಳೆ ಇಲ್ಲದೆ ಧಾರಣೆ ಮಾತ್ರಾ ನೋಡುವಂತಾಗಿದೆ.

Advertisement

ಈ ಧಾರಣೆ ಏರಿಕೆ ತಾತ್ಕಾಲಿಕವಾಗಿದ್ದು ಬೇಡಿಕೆಯ ಕಾರಣದಿಂದ ಪೂರೈಕೆ ಇಲ್ಲದೆಯೇ ಧಾರಣೆ ಏರಿಕೆ ಕಂಡುಬಂದಿದೆ. ಹವಾಮಾನ ವೈಪರೀತ್ಯ ಇದೇ ಮಾದರಿ ಮುಂದುವರಿದಿದೆ ಧಾರಣೆ ಏರಿಕೆಯೂ ಮುಂದುವರಿಯುವ ಸಾಧ್ಯತೆ ಇದೆ.  ತೆಂಗಿನ ಮಾರುಕಟ್ಟೆ ವಲಯದ ಎಲ್ಲಿ ಕೇಳಿದರೂ ನಿರೀಕ್ಷಿತ ಪ್ರಮಾಣದಲ್ಲಿ ತೆಂಗಿನಕಾಯಿ ಲಭ್ಯವಿಲ್ಲ.  ಮಾರುಕಟ್ಟೆ ವಿಶ್ಲೇಷಣೆಗಳ ಪ್ರಕಾರ, ತೆಂಗು ಬೆಳೆಯುವ ಪ್ರದೇಶಗಳಲ್ಲಿ ಈ ಬಾರಿ ಎಳನೀರನ್ನು ಹೆಚ್ಚಾಗಿ ತೆಗೆಯಲಾಗಿದೆ. ಬೇಸಗೆಯಲ್ಲಿ ವಿಪರೀತ ತಾಪಮಾನದ ಕಾರಣದಿಂದ ಎಳನೀರಿಗೆ ಬೇಡಿಕೆ ಇತ್ತು. ಹೀಗಾಗಿ ಎಳನೀರನ್ನೇ ರೈತರು ತೆಗೆದು ಮಾರಾಟ ಮಾಡಿದ್ದರು. ಈಗ ತೆಂಗಿನ ಕಾಯಿ ಮಾರುಕಟ್ಟೆಗೆ    ನಿರೀಕ್ಷಿತ ಮಟ್ಟದಲ್ಲಿ ಪೂರೈಕೆ ಮಾಡಲು ತೆಂಗಿನಕಾಯಿಯೇ ಇಲ್ಲವಾಗಿದೆ. ಕರ್ನಾಟಕದಲ್ಲಿ ಬರಗಾಲದಂತಹ ಪರಿಸ್ಥಿತಿಗಳು  ತೆಂಗಿನ ಉತ್ಪಾದನೆಯನ್ನು ಕಡಿಮೆ ಮಾಡಿದೆ ಕೂಡಾ. ಇನ್ನು ಕರಾವಳಿ ಭಾಗದಲ್ಲಿ ತೆಂಗಿನ ಕಾಯಿಗೆ ಮಂಗಗಳ ಕಾಟದಿಂದ ಶೇ.50 ರಷ್ಟು ಪ್ರತೀ ಬಾರಿಯೂ ಇಳುವರಿ ಕಡಿಮೆಯಾಗಿದೆ.

ತಮಿಳುನಾಡಿನ ಮಾರುಕಟ್ಟೆಗಳಲ್ಲಿ ಕೂಡಾ ಈಗ ತರಕಾರಿ ಧಾರಣೆ ಏರಿಕೆಯಾದಂತೆಯೇ ತೆಂಗಿನಕಾಯಿ ಧಾರಣೆಯೂ ಏರಿಕೆ ಕಂಡಿದೆ. ಹವಾಮಾನ ವೈಪರೀತ್ಯದಿಂದಾಗಿ ಕೊಯ್ಲಿನಲ್ಲಿ ಕೊಂಚ ಇಳಿಕೆಯಾಗಿದೆ ಎಂದು ರೈತರು ಹೇಳಿದ್ದಾರೆ. ಹೀಗಾಗಿ ಮುಂದೆ  ಹಬ್ಬದ ಸಮಯದಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ವಲಯ ಹೇಳುತ್ತಿದೆ.

Advertisement

ಇತ್ತೀಚೆಗೆ ರಾಜ್ಯದ ಕರಾವಳಿ ಪ್ರದೇಶ ಹೊರತುಪಡಿಸಿ ವಿವಿದೆಡೆ ತೆಂಗು ಕೃಷಿಗೆ ಕೃಷಿಕರು ಆಸಕ್ತಿ ವಹಿಸುತ್ತಿದ್ದಾರೆ.  ಈಚೆಗೆ ಎಳನೀರಿಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ನೀರಾ ಕೂಡಾ ಈಗ ಉತ್ತಮವಾದ ಆದಾಯವೂ ತರುತ್ತಿದೆ. ಹೀಗಾಗಿ ತೆಂಗು ಕೃಷಿಯತ್ತ ಕೃಷಿಕರು ಗಮನಹರಿಸಿದ್ದಾರೆ.

There has been a significant increase in coconut prices recently. Last month, the price ranged from 25-30 rupees, but now it has jumped to 45-50 rupees. There is also a growing demand for coconuts from other states such as Tumkur, Tipatur, and Chamarajanagar. Tamil Nadu is also experiencing a shortage of coconuts. Factors such as low yield and extreme weather conditions are contributing to this rise in prices.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಬ್ಬರ್‌ ಕೃಷಿ | ಕೃಷಿಯಲ್ಲಿ ಮಾರ್ಪಾಡು – ಹೆಚ್ಚು ಇಳುವರಿ ಪಡೆಯುತ್ತಿರುವ ಕೃಷಿಕ |
September 26, 2024
10:30 PM
by: ಮಹೇಶ್ ಪುಚ್ಚಪ್ಪಾಡಿ
 ಕ್ಯಾನ್ಸರ್ ನಿಯಂತ್ರಿಸುವಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ | ಬಸವರಾಜ ಬೊಮ್ಮಾಯಿ
September 26, 2024
8:21 PM
by: ದ ರೂರಲ್ ಮಿರರ್.ಕಾಂ
ಸಾಮಾಜಿಕ ಬಹಿಷ್ಕಾರ ಪದ್ದತಿಯನ್ನು ಬೇರು ಸಮೇತ ಕೀಳಬೇಕು | ಶ್ಯಾಂ ಭಟ್
September 26, 2024
8:15 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆ ವಿಸ್ತರಣೆ ಚರ್ಚೆ | ಭಾರತದಲ್ಲಿ ಅಡಿಕೆ ಗಿಡ ನಾಟಿ ನಿಷೇಧ ಹೇಳಿಕೆಗೆ ಮಿಜೋರಾಂನಲ್ಲಿ ವಿರೋಧ |
September 26, 2024
6:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror